More

    ಸೆ.16ರಿಂದ ಪದವಿ, ಸ್ನಾತಕೋತ್ತರ ಪರೀಕ್ಷೆ

    ಮಂಗಳೂರು: ಸರ್ಕಾರ ಮತ್ತು ಯುಜಿಸಿ ನಿರ್ದೇಶನ ಪ್ರಕಾರ ರಚಿಸಲಾದ ಮಾರ್ಗಸೂಚಿ ಅನ್ವಯ ಮಂಗಳೂರು ವಿಶ್ವವಿದ್ಯಾಲಯದ ಪದವಿ ಮತ್ತು ಸ್ನಾತಕೋತ್ತರ ಪದವಿಯ 2019-20ನೇ ಸಾಲಿನ ಅಂತಿಮ ಸೆಮಿಸ್ಟರ್ ಪರೀಕ್ಷೆಗಳನ್ನು ಸೆ.16ರಿಂದ 30ರೊಳಗೆ ನಡೆಸಲಾಗುವುದು ಎಂದು ಕುಲಪತಿ ಪ್ರೊ.ಪಿ.ಯಸ್.ಯಡಪಡಿತ್ತಾಯ ತಿಳಿಸಿದ್ದಾರೆ.

    ಪರೀಕ್ಷೆಗೂ ಮೊದಲು ವಿದ್ಯಾರ್ಥಿಗಳನ್ನು ಮಾನಸಿಕವಾಗಿ ಸಿದ್ಧಪಡಿಸಲು ಅನುಕೂಲವಾಗುವಂತೆ ಸೆ.1ರಿಂದ 12ರ ತನಕ ಆನ್‌ಲೈನ್/ ಆಫ್‌ಲೈನ್ ತರಗತಿಗಳನ್ನು ನಡೆಸಲು ಅವಕಾಶ ಒದಗಿಸಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

    ಇದುವರೆಗೆ ಶುಲ್ಕ ಪಾವತಿಸದ ಮತ್ತು ಪರೀಕ್ಷೆ ನೋಂದಣಿ ಮಾಡಿಕೊಳ್ಳದ ವಿದ್ಯಾರ್ಥಿಗಳಿಗೂ ಪರೀಕ್ಷೆ ಬರೆಯಲು ಅವಕಾಶವಿದೆ. ಇಂತಹ ವಿದ್ಯಾರ್ಥಿಗಳು ಆ.17ರೊಳಗೆ ಸಂಬಂಧಿತ ಕಾಲೇಜು ಪ್ರಾಂಶುಪಾಲರಿಗೆ ಮನವಿ ಸಲ್ಲಿಸಬೇಕು ಮತ್ತು ಅಂಕಪಟ್ಟಿ ಪಡೆದುಕೊಳ್ಳುವಾಗ ನಿಗದಿಪಡಿಸಿದ ಶುಲ್ಕ ಪಾವತಿಸಬೇಕು ಎಂದರು.
    ಹೊರರಾಜ್ಯಗಳಲ್ಲೇ ಪರೀಕ್ಷೆ: ಭೂತಾನ್, ಮೇಘಾಲಯ, ಮಣಿಪುರ, ಕೇರಳ ಸಹಿತ ವಿವಿಧ ರಾಜ್ಯಗಳ ವಿದ್ಯಾರ್ಥಿಗಳು ಇಲ್ಲಿಗೆ ಬಂದು ಪರೀಕ್ಷೆ ಬರೆಯಲು ಅನನುಕೂಲವಾಗುವ ಹಿನ್ನೆಲೆಯಲ್ಲಿ ಅವರ ರಾಜ್ಯದ ವಿವಿಗಳೊಂದಿಗೆ ಒಡಂಬಡಿಕೆ ಮಾಡಿ ಪರೀಕ್ಷೆ ನಡೆಸಲು ಕಾರ್ಯಯೋಜನೆ ರೂಪಿಸಲಾಗುತ್ತಿದೆ ಎಂದು ಹೇಳಿದರು.
    ಪ್ರಸ್ತಾವಿತ ವ್ಯವಸ್ಥೆಯಡಿ ಪರೀಕ್ಷೆ ಬರೆಯಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ವರ್ಷ ನಷ್ಟಗೊಳ್ಳಲು ಅವಕಾಶ ನೀಡದೆ ಮಂದಿನ ದಿನಗಳಲ್ಲಿ ವಿಶೇಷ ಪರೀಕ್ಷೆ ನಡೆಸಲಾಗುವುದು ಎಂದು ಭರವಸೆ ನೀಡಿದರು.
    ಪರೀಕ್ಷಾಂಗ ಕುಲಸಚಿವ ಪ್ರೊ.ಪಿ.ಎಲ್. ಧರ್ಮ, ವಿವಿ ಕಾಲೇಜು ಪ್ರಾಂಶುಪಾಲ ಡಾ.ಉದಯ ಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.

    ಸೆಮಿಸ್ಟರ್ ಮುಂಬಡ್ತಿ: ಅಂತಿಮ ಸೆಮಿಸ್ಟರ್ ಹೊರತು ಇತರ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಮಾನದಂಡಗಳನ್ನು ಆಧರಿಸಿ ಮುಂಬಡ್ತಿ ನೀಡಲಾಗುವುದು. ಅವರ ನಿಕಟಪೂರ್ವ ಸೆಮಿಸ್ಟರ್ ಪರೀಕ್ಷೆಯ ಫಲಿತಾಂಶದ ಶೇ.50 ಅಂಕ ಹಾಗೂ ಪ್ರಸ್ತುತ ಸೆಮಿಸ್ಟರ್‌ನ ಆಂತರಿಕ ಪರೀಕ್ಷೆಯ ಶೇ.50ರಷ್ಟು ಅಂಕಗಳನ್ನು ಸೇರಿಸಿ ಅಂಕ ನಿಗದಿಗೊಳಿಸಲಾಗುತ್ತದೆ. ಇದು ಒಪ್ಪಿಗೆಯಾಗದ ವಿದ್ಯಾರ್ಥಿಗಳು ಅಂಕಪಟ್ಟಿ ದೊರೆತ 15 ದಿನದೊಳಗೆ ಫಲಿತಾಂಶವನ್ನು ತಿರಸ್ಕರಿಸಿ ಮುಂಬರುವ ಶೈಕ್ಷಣಿಕ ವರ್ಷಗಳಲ್ಲಿ ನಡೆಸಲ್ಪಡುವ ಆಯಾ ಸೆಮಿಸ್ಟರ್ ಪರೀಕ್ಷೆ ಬರೆಯಲು ಅವಕಾಶವಿದೆ ಎಂದು ಯಡಪಡಿತ್ತಾಯ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts