More

    ಕಾಡಾನೆ ಕಾಡಿಗಟ್ಟುವ ಕಾರ್ಯಾಚರಣೆ

    ಕಡಬ: ಸುಬ್ರಹ್ಮಣ್ಯ ಮತ್ತು ಪಂಜ ವಲಯ ಅರಣ್ಯ ವ್ಯಾಪ್ತಿಯ ಕಡಬ ಭಾಗದಲ್ಲಿ ಕೃಷಿ ತೋಟಕ್ಕೆ ನುಗ್ಗಿ ಹಾನಿಮಾಡುತ್ತಿರುವ ಕಾಡಾನೆಗಳನ್ನು ಮರಳಿ ಕಾಡಿಗಟ್ಟುವ ಸಲುವಾಗಿ ನಾಗರಹೊಳೆಯ ಆನೆಕಾವಡಿಗರ ತಂಡ ಕಾರ್ಯಾಚರಣೆ ಆರಂಭಿಸಿದೆ.
    ಬೆಳ್ತಂಗಡಿ ತಾಲೂಕಿನಲ್ಲಿ ಕಾರ್ಯಚರಣೆ ನಡೆಸಿದ್ದ ತಂಡ ಬಳಿಕ ಕಡಬ ತಾಲೂಕಿನ ಕಾಡಾನೆ ಹಾವಳಿ ಇರುವ ಪ್ರದೇಶಗಳಲ್ಲಿ ಕಾರ್ಯಚರಣೆ ಆರಂಭಿಸಿದೆ. ನೂಜಿಬಾಳ್ತಿಲ, ರೆಂಜಿಲಾಡಿಯ ಮೀನಾಡಿ, ಹೇರ ಮತ್ತು ಕಡ್ಯ ಕೊಣಾಜೆ, ಐತ್ತೂರಿನ ಸುಳ್ಯ, ಕೇನ್ಯ ಗ್ರಾಮ ವ್ಯಾಪ್ತಿಯಲ್ಲಿ ತಂಡ ತನ್ನ ಕೆಲಸ ಆರಂಭಿಸಿದೆ.
    ಎರಡು ತಂಡ: ಕಾಡಾನೆಗಳ ಹಿಂಡು ಪತ್ತೆಯಾದ ಪ್ರದೇಶಗಳ ಮಾಹಿತಿ ಪಡೆಯುವ ತಂಡ ಆ ಜಾಗಕ್ಕೆ ಭೇಟಿ ನೀಡಿ ಕಾಡಾನೆ ಕಾಡಿಗಟ್ಟುವ ಕಾರ್ಯಚರಣೆ ನಡೆಸುತ್ತಾರೆ. ನಾಗರಹೊಳೆಯ ನುರಿತ ನಾಲ್ವರು ಆನೆಕಾವಾಡಿಗರು ತಂಡದಲ್ಲಿದ್ದು, ಅವರಿಗೆ ಸ್ಥಳೀಯ ಅರಣ್ಯ ಇಲಾಖೆ ಸಿಬ್ಬಂದಿ ಅಗತ್ಯ ನೆರವು ಒದಗಿಸುತ್ತಿದ್ದಾರೆ. ಹಗಲು ಹಾಗೂ ರಾತ್ರಿ ಎರಡು ಪ್ರತ್ಯೇಕ ತಂಡಗಳಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts