More

    ಸತತ 2ನೇ ವರ್ಷ ಪ್ರಶಸ್ತಿ ಸುತ್ತಿಗೇರಿದ ಸಬಲೆಂಕಾ: ಚೀನಾದ ಝೆಂಗ್ ಫೈನಲ್ ಎದುರಾಳಿ

    ಮೆಲ್ಬೋರ್ನ್: ಪ್ರಶಸ್ತಿ ಉಳಿಸಿಕೊಳ್ಳುವ ನಿರೀಕ್ಷೆಯಲ್ಲಿ ಕಣಕ್ಕಿಳಿದಿರುವ ವಿಶ್ವ ನಂ.2 ಬೆಲಾರಸ್ ತಾರೆ ಅರಿನಾ ಸಬಲೆಂಕಾ ಆಸ್ಟ್ರೇಲಿಯನ್ ಓಪನ್ ಮಹಿಳಾ ಸಿಂಗಲ್ಸ್‌ನಲ್ಲಿ ದಾಖಲೆಯ ಅಜೇಯ ಓಟ ಮುಂದುವರಿಸಿದ್ದು, ಸತತ ಎರಡನೇ ವರ್ಷ ಫೈನಲ್‌ಗೇರಿದ್ದಾರೆ.

    ಗುರುವಾರ ನಡೆದ ಸೆಮಿಫೈನಲ್‌ನಲ್ಲಿ ಸಬಲೆಂಕಾ 7-6(2), 6-4 ನೇರ ಸೆಟ್‌ಗಳಿಂದ ಅಮೆರಿಕದ ಕೋಕೋ ಗ್ೌ ವಿರುದ್ಧ ಗೆಲುವು ದಾಖಲಿಸಿದರು. ಮೇಲ್ಬೋರ್ನ್ ಪಾರ್ಕ್‌ನಲ್ಲಿ ಸಬಲೆಂಕಾಗೆ ಸತತ 13ನೇ ಗೆಲುವು ಇದಾಗಿದೆ. ಟೂರ್ನಿಯಲ್ಲಿ ಒಂದೂ ಸೆಟ್ ಹಿನ್ನಡೆ ಅನುಭವಿಸದ ಸಬಲೆಂಕಾ ಯುಎಸ್ ಓಪನ್ ೈನಲ್ ಸೋಲಿಗೆ 19 ವರ್ಷದ ಗ್ೌ ಎದುರು ಮುಯ್ಯಿ ತೀರಿಸಿಕೊಂಡರು. ಇದರೊಂದಿಗೆ 25 ವರ್ಷದ ಸಬಲೆಂಕಾ, ಅಮೆರಿಕದ ಸೆರೇನಾ ವಿಲಿಯಮ್ಸ್ (2015,2016, 2017) ಬಳಿಕ ಸತತವಾಗಿ ೈನಲ್ ಪ್ರವೇಶಿಸಿದ ಮೊದಲ ಆಟಗಾರ್ತಿ ಎನಿಸಿದರು. ಚೀನಾದ ಕಿನ್ವೆನ್ ಝೆಂಗ್ 6-4, 6-4 ರಿಂದ ಯೂಕ್ರೇನ್‌ನ ಡಯಾನಾ ಯಾಸ್ಟ್ರೆಮ್ಸ್ಕಾ ವಿರುದ್ಧ ಗೆಲುವು ದಾಖಲಿಸಿ ಮೊದಲ ಬಾರಿಗೆ ಗ್ರಾಂಡ್ ಸ್ಲಾಂ ೈನಲ್ ಪ್ರವೇಶಿದರು. 21 ವರ್ಷದ ಝೆಂಗ್ ಗ್ರಾಂಡ್ ಸ್ಲಾಂ ಪ್ರಶಸ್ತಿ ಸುತ್ತಿಗೇರಿದ ಏಷ್ಯಾದ 2ನೇ ಅತಿ ಕಿರಿಯ ಆಟಗಾರ್ತಿ ಎನಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts