More

    ಎನ್​ಸಿಬಿ ಕಚೇರಿ ತಲುಪಿದ್ರು ದೀಪಿಕಾ ಪಡುಕೋಣೆ

    ಮುಂಬೈ: ಡ್ರಗ್ಸ್ ಕೇಸ್​ಗೆ ಸಂಬಂಧಿಸಿ ವಿಚಾರಣೆ ಎದುರಿಸುವ ಸಲುವಾಗಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಶನಿವಾರ ಬೆಳಗ್ಗೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್​ಸಿಬಿ) ಕಚೇರಿ ತಲುಪಿದ್ದಾರೆ. ದೀಪಿಕಾ ಪಡುಕೋಣೆಯವರ ಮ್ಯಾನೇಜರ್​ ಕರೀಶ್ಮಾ ಪ್ರಕಾಶ್, ನಟಿಯರಾದ ಶ್ರದ್ಧಾ ಕಪೂರ್ ಮತ್ತು ಸಾರಾ ಅಲಿಖಾನ್ ಅವರೂ ಇಂದು ವಿಚಾರಣೆ ಎದುರಿಸಲಿದ್ದಾರೆ.

    ದೀಪಿಕಾ ಅವರು ಬೆಳಗ್ಗೆ 9.45ಕ್ಕೆ ಎನ್​ಸಿಬಿ ಕಚೇರಿಗೆ ಆಗಮಿಸಿದ್ದು, ವಿಚಾರಣೆ ಪ್ರಗತಿಯಲ್ಲಿದೆ. ವಿಚಾರಣೆಗೆ ಹಾಜರಾಗುವಂತೆ ಮೂವರು ನಟಿಯರಿಗೆ ಎನ್​ಸಿಬಿ ಬುಧವಾರವೇ ನೋಟಿಸ್ ಜಾರಿಗೊಳಿಸಿತ್ತು. ದೀಪಿಕಾ ಅವರ ಮ್ಯಾನೇಜರ್ ಕರೀಶ್ಮಾ ಪ್ರಕಾಶ್​ ನಿನ್ನೆಯೂ ವಿಚಾರಣೆ ಎದುರಿಸಿದ್ದು, ಉಳಿದ ವಿಚಾರಣೆ ಇಂದು ಪೂರ್ಣಗೊಳ್ಳಲಿದೆ.

    ಇದನ್ನೂ ಓದಿ: ಟೆರರಿಸಂ, ರಹಸ್ಯ ಪರಮಾಣು ವ್ಯಾಪಾರವಷ್ಟೇ 70 ವರ್ಷಗಳಲ್ಲಿ ಪಾಕ್​ನ ಏಕೈಕ ಹೆಗ್ಗಳಿಕೆ: ವಿಶ್ವಸಂಸ್ಥೆಯಲ್ಲಿ ಭಾರತ

    ಕರೀಶ್ಮಾ ಅವರ ವಾಟ್ಸ್​ಆ್ಯಪ್ ಚಾಟ್​ಗಳಲ್ಲಿ ಡಿ ಎಂಬ ಸಂಕೇತಾಕ್ಷರದೊಂದಿಗೆ ಡ್ರಗ್ಸ್​ ಕುರಿತ ಮಾತುಕತೆ ನಡೆದಿದೆ. ಅವರು ಈ ವಿಚಾರ ಯಾರೊಂದಿಗೆ ಸಂವಹನ ನಡೆಸಿದ್ದಾರೆ ಎಂಬುದನ್ನು ಪತ್ತೆ ಹಚ್ಚುವ ಪ್ರಯತ್ನ ನಡೆದಿದೆ. ಎಲ್ಲರ ವಿಚಾರಣೆಯೊಂದಿಗೆ ಸಾಕ್ಷ್ಯಗಳನ್ನೂ ಕಲೆಹಾಕಲಾಗುತ್ತಿದೆ ಎಂದು ಎನ್​ಸಿಬಿ ಮೂಲಗಳು ತಿಳಿಸಿವೆ. (ಏಜೆನ್ಸೀಸ್)

    ಭಾರತದಲ್ಲಿ ಡಾ.ಮನಮೋಹನ್ ಸಿಂಗ್ ಅವರಂಥ ಪ್ರಧಾನಿಯ ಅನುಪಸ್ಥಿತಿ ಕಾಡುತ್ತಿದೆ- ರಾಹುಲ್ ಗಾಂಧಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts