ಭಾರತದಲ್ಲಿ ಡಾ.ಮನಮೋಹನ್ ಸಿಂಗ್ ಅವರಂಥ ಪ್ರಧಾನಿಯ ಅನುಪಸ್ಥಿತಿ ಕಾಡುತ್ತಿದೆ- ರಾಹುಲ್ ಗಾಂಧಿ

ಬೆಂಗಳೂರು: ಭಾರತದಲ್ಲಿ ಡಾ.ಮನಮೋಹನ್ ಸಿಂಗ್ ಅವರಂಥ ಪ್ರಧಾನಮಂತ್ರಿಯ ಅನುಪಸ್ಥಿತಿ ಕಾಡುತ್ತಿದೆ. ಅವರ ಪ್ರಾಮಾಣಿಕತೆ, ಸಭ್ಯತೆ ಮತ್ತು ಸಮರ್ಪಣೆಯ ಭಾವ ನಮ್ಮೆಲ್ಲರಿಗೂ ಸ್ಫೂರ್ತಿಯ ಸೆಲೆಯಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಟ್ವೀಟ್ ಮಾಡಿದ್ದಾರೆ. ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಇಂದು 88ನೆ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಶುಭಹಾರೈಸಿದ ರಾಹುಲ್ ಗಾಂಧಿ, ಮೇಲಿನ ಅನಿಸಿಕೆ ಹಂಚಿಕೊಂಡಿದ್ದಾರೆ. ಡಾ.ಸಿಂಗ್ ಅವರು ಯುಪಿಎ ಆಡಳಿತದ ಎರಡು ಅವಧಿ (2004-2014)ಗೆ ಪ್ರಧಾನಿಯಾಗಿ ಕೆಲಸ ಮಾಡಿದ್ದರು. India feels … Continue reading ಭಾರತದಲ್ಲಿ ಡಾ.ಮನಮೋಹನ್ ಸಿಂಗ್ ಅವರಂಥ ಪ್ರಧಾನಿಯ ಅನುಪಸ್ಥಿತಿ ಕಾಡುತ್ತಿದೆ- ರಾಹುಲ್ ಗಾಂಧಿ