More

    Deep Fake Effect; ಸಹಾಯವಾಣಿ ತೆರೆದ ಬೆಂಗಳೂರು ಪೊಲೀಸರು

    ಬೆಂಗಳೂರು: ಡೀಪ್‌ಫೇಕ್ ಕಾಟಕ್ಕೆ ಸೆಲೆಬ್ರೆಟಿಗಳು ಹಾಗೂ ಜನ ಸಾಮಾನ್ಯರು ಈ ಸಮಸ್ಯೆಗೆ ಒಳಗಾಗಿದ್ದಾರೆ. ಈ ಸಮಸ್ಯೆ ಪರಿಹಾರ ಕಂಡುಕೊಳ್ಳಲು ಬೆಂಗಳೂರು ಪೊಲೀಸರು ಹೊಸ ಮಾರ್ಗ ಕಂಡುಕೊಂಡಿದ್ದಾರೆ.

    ಬೆಂಗಳೂರು ಪೊಲೀಸರು ಡೀಪ್‌ಫೇಕ್ ವಿರುದ್ಧ ಪರಿಹಾರ ಕ್ರಮಕ್ಕೆ ಒಂದು ದಿಟ್ಟ ನಿರ್ಧಾರ ತೆಗದುಕೊಂಡಿದ್ದಾರೆ. ಇಂತಹ ವಿಡಿಯೋಗಳಿಂದ ನೀವು ಸಂಕಷ್ಟಕ್ಕೆ ಸಿಲುಕಿದ್ದರೆ, ಸಹಾಯವಾಣಿಗೆ ಕರೆ ಮಾಡುವಂತೆ ಮನವಿ ಮಾಡಿದ್ದಾರೆ. ಕರೆ ಮಾಡಬೇಕಾದ ಹೆಲ್ಪ್ ಲೈನ್ ನಂಬರ್ ಕೂಡ ನೀಡಿದ್ದಾರೆ. ಯಾರಾದರೂ ಅಂತಹ ವಿಡಿಯೋಗಳಿಂದ ನೊಂದಿದ್ದೀರಾ? 1930 ಸಂಖ್ಯೆಗೆ ಕರೆ ಮಾಡಬಹುದು.

    ಬೆಂಗಳೂರು ನಗರ ಪೊಲೀಸ್‌ ಟ್ವೀಟ್​​ನಲ್ಲಿ ಏನಿದೆ?: ಹಿಂಜರಿಯಬೇಡಿ, ಜಾಗೃತರಾಗಿ! ನೀವು ಅಥವಾ ನಿಮಗೆ ತಿಳಿದಿರುವ ಯಾರಾದರೂ ಡೀಪ್ ಫೇಕ್ ಗೆ ಒಳಗಾಗಿದ್ದಲ್ಲಿ, 1930 ಗೆ ಕರೆಮಾಡಿ ಬೆಂಗಳೂರು ನಗರ ಪೊಲೀಸರನ್ನು ಸಂಪರ್ಕಿಸಿ. ಡಿಜಿಟಲ್ ವಂಚನೆಯಿಂದ ನಿಮ್ಮನ್ನು ರಕ್ಷಿಸಲು ನಾವು ನಿಮ್ಮೊಂದಿಗಿದ್ದೇವೆ ಎಂದು ಟ್ವೀಟ್​​ ಮಾಡಲಾಗಿದೆ.

    ರಶ್ಮಿಕಾ ಮಂದಣ್ಣ, ಕತ್ರಿನಾ ಕೈಫ್‍, ಕಾಜೋಲ್ ಸೇರಿದಂತೆ ಅನೇಕ ಕಲಾವಿದರ ಮತ್ತು ಸಾಮಾನ್ಯ ಮಹಿಳೆಯರ ಡೀಪ್‌ಫೇಕ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿವೆ.

    ಡೀಪ್‌ಫೇಕ್‌ ತಂತ್ರಜ್ಞಾನ?: ಈ ತಂತ್ರಜ್ಞಾನ ಉಚಿತ, ವ್ಯಾಪಕವಾಗಿ ಲಭ್ಯವಿದೆ. ಯಾವುದೇ ತಾಂತ್ರಿಕ ಪರಿಣತಿಯ ಅಗತ್ಯವಿಲ್ಲ. ಈ ಅಪ್ಲಿಕೇಶನ್‌ಗಳು ಬಳಕೆದಾರರಿಗೆ, ಚಿತ್ರಗಳನ್ನು ಡಿಜಿಟಲ್‌ ಸಹಾಯದಿಂದ ತೆಗೆದುಹಾಕಲು ಅಥವಾ ಅಶ್ಲೀಲ ವೀಡಿಯೊಗಳಲ್ಲಿ ಅವರ ಮುಖಗಳನ್ನು ಸೇರಿಸಲು ಅನುಮತಿಸುತ್ತದೆ. ಒಬ್ಬರ ದೇಹಕ್ಕೆ ಇನ್ನೊಬ್ಬರ ತಲೆಯನ್ನು ಜೋಡಿಸಿ ಎಡಿಟಿಂಗ್‌ ಎಡಿಟ್​​ ಮಾಡಿದರೆ ಫೋಟೋ/ವೀಡಿಯೋ ಎಂಬುದು ನೋಡಿದಾಕ್ಷಣ ತಿಳಿಯುತ್ತಿತ್ತು. ಆದರೆ ಡೀಪ್‌ಫೇಕ್‌ ತಂತ್ರಜ್ಞಾನದಲ್ಲಿ ಆ ಯಾವುದೇ ಅನುಮಾನ ಬರುವುದಿಲ್ಲ. ಆ ರೀತಿ ಫೋಟೋ/ವೀಡಿಯೋ ಎಡಿಟ್‌ ಮಾಡಲಾಗುತ್ತದೆ. ಡೀಪ್‌ಫೇಕ್ ಸೈಬರ್‌ ಅಪರಾಧಕ್ಕೆ ಸಂಬಂಧಿಸಿದಂತೆ ಭಾರತ ಕಾನೂನಿನಲ್ಲಿ ಸ್ಪಷ್ಟವಾದ ವ್ಯಾಖ್ಯಾನ ಇಲ್ಲ. ಆದರೆ ಈ ಅಪರಾಧದ ವಿರುದ್ಧ ಇತರ ಹಲವಾರು ಕಾನೂನು ಕ್ರಮಗಳನ್ನು ಬಳಸಿಕೊಳ್ಳಬಹುದು.

    100 ದಿನದಲ್ಲೇ ಮರದಿಂದ ಸಿದ್ಧವಾಯ್ತು ಟೆಸ್ಲಾ ಸೈಬರ್‌ ಟ್ರಕ್‌; ಕ್ರಿಯಾತ್ಮಕತೆ ಮೆಚ್ಚುಗೆಯ ಮಹಾಪೂರ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts