More

    ಸಪ್ತಸ್ವರ ಘಂಟಾಮಂಟಪ ಲೋಕಾರ್ಪಣೆ 17ರಂದು

    ಸಿದ್ದಾಪುರ: ಪಟ್ಟಣದ ಶಂಕರಮಠದ ಸಹಯೋಗದಲ್ಲಿ ಸಮಾನಸ ಸಂಸ್ಥೆ ಶಿವಮೊಗ್ಗ ಅವರಿಂದ ಸ್ಥಳೀಯ ಶಂಕರಮಠದಲ್ಲಿ ಫೆ. 17ರಂದು ಸಪ್ತಸ್ವರ ಘಂಟಾಮಂಟಪದ ಲೋಕಾರ್ಪಣೆ, ಕಲಾ ಸನ್ಮಾನ, ಪುಸ್ತಕ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿದ ಎಂದು ಸಮಾನಸ ಸಂಸ್ಥೆ ಸಂಚಾಲಕ ಡಾ. ವಿಘ್ನೕಶ ಭಟ್ ಶಿವಮೊಗ್ಗ ಹೇಳಿದರು.

    ಶಂಕರಮಠದಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು. ಹಿಂದುಸ್ತಾನಿ ಸಂಗೀತದ ಪ್ರಸಿದ್ಧ ದಿಗ್ಗಜ ಪಂ. ವೆಂಕಟೇಶ ಗೋಡ್ಖಿಂಡಿ ಅವರ ಸಲಹೆಯಂತೆ ದೇಶದ ಹಲವೆಡೆ ಸುತ್ತಿ ಸಪ್ತಸ್ವರಗಳನ್ನು ನಿನಾದಿಸುವ ಘಂಟೆಗಳನ್ನು ಹುಡುಕಿ ತಂದು ದೇಶದಲ್ಲಿಯೇ ವಿಶೇಷ ಎನಿಸುವ ಸರಸ್ವತಿ ಮೂರ್ತಿಯುಕ್ತ ಸಪ್ತಸ್ವರ ಘಂಟಾಮಂಟಪವನ್ನು ಶೃಂಗೇರಿ ಜಗದ್ಗುರು ಶ್ರೀ ಶಾರದಾಪೀಠಾಧೀಶ್ವರ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳ ಹಾಗೂ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳ ದಿವ್ಯ ಆಶೀರ್ವಾದದೊಂದಿಗೆ ಡಾ. ವಿಘ್ನೕಶ ಭಟ್ ಹಾಗೂ ಡಾ. ಸುಮಿತ್ರಾ ಭಟ್ ಅವರ ಪ್ರಾಯೋಜಕತ್ವದಲ್ಲಿ ಶಂಕರಮಠದಲ್ಲಿ ನಿರ್ವಿುಸಲಾಗಿದ್ದು, ಫೆ. 17ರ ಬೆಳಗ್ಗೆ 10 ಗಂಟೆಗೆ ಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ ಲೋಕಾರ್ಪಣೆ ಮಾಡುವರು.

    ಬೆಳಗ್ಗೆ 11ಕ್ಕೆ ಕಳೆದ 38 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ವಾರ್ಷಿಕ ಕಲಾ ಸನ್ಮಾನ ಮತ್ತು ಡಾ. ಸುಮಿತ್ರಾ ಭಟ್ ಅವರ ನೆನಪು ಮಾಸುವ ಮುನ್ನ ಕೃತಿ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಯಕ್ಷಗಾನ ಪ್ರಸಿದ್ಧ ಕಲಾವಿದ, ನಾಟ್ಯವಿನಾಯಕ ದೇವಸ್ಥಾನದ ವಿಶ್ವಸ್ಥ ವಿನಾಯಕ ಹೆಗಡೆ ಕಲಗದ್ದೆ ಅವರನ್ನು ರಂಗ ಮಹಾಬಲ ಬಿರುದು ನೀಡಿ ಸನ್ಮಾನಿಸಲಾಗುವುದು.

    ಲಂಡನ್​ನ ಭಾರತೀಯ ವಿದ್ಯಾಭವನದ ನಿರ್ದೇಶಕ ಡಾ.ಮತ್ತೂರು ನಂದಕುಮಾರ, ಸಾಮಾಜಿಕ ಕಾರ್ಯಕರ್ತ,ಶಿಕ್ಷಣ ತಜ್ಞ ಬೆಂಗಳೂರಿನ ಹೆಬ್ರಾನ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಪ್ರೀನಂದ್ ಪ್ರೇಮಚಂದ್ರನ್ ಉಪಸ್ಥಿತರಿರುವರು. ಸಮಾನಸ ಸಂಸ್ಥೆ ಸಹಸಂಚಾಲಕಿ ಡಾ. ಸುಮಿತ್ರಾ ಭಟ್ ರಚಿಸಿದ ‘ನೆನಪು ಮಾಸುವ ಮುನ್ನ’ ಕೃತಿ ಬಿಡುಗಡೆಗೊಳಿಸಲಾಗುವುದು. ಮಧ್ಯಾಹ್ನ 2.30ರಿಂದ ಕಲಗದ್ದೆ ಶ್ರೀ ಶಂಭುಶಿಷ್ಯ ಯಕ್ಷಗಾನ ಪ್ರತಿಷ್ಠಾನದಿಂದ ‘ರಾವಣ ವಧೆ’ ಮತ್ತು ‘ಶ್ರೀ ರಾಮವಿಜಯ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದು ಡಾ.ವಿಘ್ನೕಶ ಭಟ್ ಹೇಳಿದರು. ಶಂಕರ ಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ, ಭಾಸ್ಕರ ಹೆಗಡೆ ಮುತ್ತಿಗೆ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts