More

    15 ರಂದು ರಾಜಗೋಪುರ ಲೋಕಾರ್ಪಣೆ

    ಕೊಪ್ಪ: ತಾಲೂಕಿನ ಬೊಮ್ಮಲಾಪುರದ ತ್ರಿಪುರಾಂತಕೀ ಅಮ್ಮನವರ ದೇವಸ್ಥಾನದ ರಾಜಗೋಪುರ 14 ಮತ್ತು 15ರಂದು ಲೋಕಾರ್ಪಣೆ, ಕುಂಭಾಭಿಷೇಕ ಮತ್ತು ಶತಚಂಡಿಕಾ ಯಾಗ ಹಮ್ಮಿಕೊಳ್ಳಲಾಗಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಸ್.ಎನ್.ರಾಮಸ್ವಾಮಿ ಹೇಳಿದರು.
    ದೇವಸ್ಥಾನಕ್ಕೆ ಸುಮಾರು 650 ವರ್ಷಗಳ ಇತಿಹಾಸವಿದೆ. ಅಡಕೆಯ ಅಧಿದೇವತೆ ಎಂದು ಸಹ ಕರೆಯಲಾಗುತ್ತದೆ. ಬೋಳಾಪುರ, ಬೊಮ್ಮಲಾಪು, ಕಗ್ಗ ಗ್ರಾಮಸ್ಥರು ಹಾಗೂ ಭಕ್ತಾಧಿಗಳ ಸಹಕಾರದಿಂದ ದೇವಸ್ಥಾನ ಹಂತ ಹಂತವಾಗಿ ಅಭಿವೃದ್ಧಿಯಾಗಿ ಇಂದು 1.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ರಾಜಗೋಪುರ ಲೋಕಾರ್ಪಣೆಗೆ ಸಿದ್ದವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    14ರಂದು ಗುರುದೇವತಾ ಪ್ರಾರ್ಥನೆ, ಗಣಪತಿ ಪೂಜೆ, ಪುಣ್ಯಾಹ, ದೇವನಾಂದಿ, ಋತ್ವಿಗ್ವರಣೆ, ಸಹಸ್ರ ಮೋದಕ ಗಣಪತಿ ಹೋಮ, ವಾಸದತು ಪೂಜೆ, ಪಂಚವಿಂಶತಿ ಕಲಶಸ್ಥಾಪನೆ, ಅದಿವಾಸ ಹೋಮ, ಶಿಖರಾದಿವಾಸ ಹೋಮಗಳು ಜರುಗಲಿದೆ. 15ರಂದು ಶೃಂಗೇರಿ ಶ್ರೀ ಮಠದ ಜಗದ್ಗುರುಗಳಾದ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಯವರಿಂದ ಅಮ್ಮನವರಿಗೆ ಕುಂಭಾಭಿಷೇಕ, ರಾಜಗೋಪುರ ಶಿಖರ ಕಲಶಾಭಿಷೇಕ ನಡೆಸಲಿದ್ದಾರೆ. ಶ್ರೀಗಳ ಸಾನ್ನಿಧ್ಯದಲ್ಲಿ ಶತಚಂಡೀಮಹಾಯಾಗದ ಪೂರ್ಣಹುತಿ, ನಂತರದಲ್ಲಿ ಶ್ರೀಗಳು ಅನುಗ್ರಹ ಭಾಷಣ ನೀಡಲಿದ್ದಾರೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts