More

    ತೀರ್ಥಹಳ್ಳಿಯನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಿ: ಶಾಸಕ ಆರಗ ಜ್ಞಾನೇಂದ್ರ

    ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ಸರ್ಕಾರಕ್ಕೆ ಶಾಸಕ ಆರಗ ಜ್ಞಾನೇಂದ್ರ ಆಗ್ರಹಿಸಿದರು.

    ಪಟ್ಟಣದ ರಾಮೇಶ್ವರ ದೇವಸ್ಥಾನದ ಬಳಿ ಸೋಮವಾರ ತುಂಗಾನದಿಗೆ ಬಾಗಿನ ಅರ್ಪಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಅರ್ಧದಷ್ಟು ಮಳೆಗಾಲ ಮುಗಿದಿದೆ. ತಾಲೂಕಿನಲ್ಲಿ ಈಗಷ್ಟೇ ಮಳೆಯಾಗುತ್ತಿದ್ದು ಕೃಷಿ ಚಟುವಟಿಕೆ ಇನ್ನೂ ಪೂರ್ಣವಾಗಿ ಆರಂಭಗೊAಡಿಲ್ಲ. ಮುಂದೆಯೂ ಮಳೆ ಬರುತ್ತೆ ಎಂಬುದನ್ನು ಹೇಳಲಾಗದು ಎಂದರು.
    ಭತ್ತ ಬೆಳೆಯುವವರೇ ಇಲ್ಲದ ಈ ಕಾಲಘಟ್ಟದಲ್ಲಿ ಅನ್ನದಾತರ ಬೆಂಬಲಕ್ಕೆ ನಿಲ್ಲಬೇಕಿದ್ದ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಕೃಷಿಗಾಗಿ ಇರಿಸಿದ್ದ ೫ ಸಾವಿರ ಕೋಟಿ ರೂ. ಹಣವನ್ನು ಕಡಿತ ಮಾಡಿ ಗ್ಯಾರಂಟಿ ಯೋಜನೆಗೆ ಬಳಸಿಕೊಂಡಿದೆ. ದೇಶದಲ್ಲಿ ಆಹಾರ ಧಾನ್ಯದ ಕೊರತೆ ಎದುರಾಗುವ ಆತಂಕ ಇದ್ದು ಅಕ್ಕಿ ರಫ್ತು ಮಾಡುವುದನ್ನೇ ಸರ್ಕಾರ ನಿಲ್ಲಿಸಿದೆ. ಹೀಗಾಗಿ ಸರ್ಕಾರ ಭತ್ತದ ಬೆಳೆಗಾರರ ಬೆಂಬಲಕ್ಕೆ ನಿಲ್ಲಬೇಕಿದೆ. ಆದರೆ ರಾಜ್ಯ ಸರ್ಕಾರ ಕೃಷಿಗೆ ಮೀಸಲಾದ ಅನುದಾನ ಮಾತ್ರವಲ್ಲದೇ ಎಸ್‌ಸಿ, ಎಸ್‌ಟಿ ವರ್ಗಕ್ಕೆ ಮೀಸಲಿದ್ದ 34 ಸಾವಿರ ಕೋಟಿ ರೂ.ಅನುದಾನದಲ್ಲಿ ಅರ್ಧದಷ್ಟು ಅನುದಾನವನ್ನೂ ಕಡಿತ ಮಾಡಿದೆ ಎಂದು ದೂರಿದರು.
    ಎಲೆಚುಕ್ಕೆ ರೋಗ ನಿಯಂತ್ರಣದ ಬಗ್ಗೆ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಸಮಸ್ಯೆ ಕುರಿತು ಅವರ ಗಮನಕ್ಕೆ ತಂದಿದ್ದೇವೆ. ಇಲ್ಲಿನ ಅಡಕೆ ಸಂಶೋಧನಾ ಕೇಂದ್ರಕ್ಕೆ ಈಗಾಗಲೇ ಇಬ್ಬರು ವಿಜ್ಞಾನಿಗಳನ್ನು ನೇಮಿಸಲಾಗಿದೆ. ಒಂದು ವರ್ಷದೊಳಗೆ ಇದಕ್ಕೆ ಪರಿಹಾರ ದೊರೆಯುವ ನಿರೀಕ್ಷೆ ಇದೆ ಎಂದು ಹೇಳಿದರು.
    ತುಂಗಾನದಿಗೆ ಬಾಗಿನ ಅರ್ಪಿಸುವಾಗ ಪಪಂ ಅಧ್ಯಕ್ಷೆ ಸುಶೀಲಾ ಶೆಟ್ಟಿ, ಉಪಾಧ್ಯಕ್ಷ ರಹಮತ್ ಉಲ್ಲಾ ಅಸಾದಿ, ತಹಸೀಲ್ದಾರ್ ಅಮೃತ್ ಆತ್ರೇಶ್, ಡಿವೈಎಸ್‌ಪಿ ಗಜಾನನ ಸುತಾರ್, ಪಪಂ ಸದಸ್ಯರು ಮತ್ತು ಸಾರ್ವಜನಿಕರು ಇದ್ದರು.

    ಸ್ವಪಕ್ಷೀಯರಿಂದಲೇ ಸರ್ಕಾರ ಬೀಳುತ್ತೆ
    135 ಸದಸ್ಯರಿದ್ದಾರೆ ಎಂಬ ಅಹಂಕಾರದಿAದ ವರ್ತಿಸುತ್ತಿರುವ ರಾಜ್ಯ ಸರ್ಕಾರ ಹರಿಪ್ರಸಾದ್ ಮುಂತಾದ ಸ್ವಪಕ್ಷೀಯರಿಂದಲೇ ಬೀಳಲಿದೆ ಎಂದು ಹೇಳಿದ ಶಾಸಕರು, ಸರ್ಕಾರ ಬೀಳಿಸಲು ಬೇರೆಯವರ ಅಗತ್ಯವಿಲ್ಲ ಎಂದು ಛೇಡಿಸಿದರು. ಮಣಿಪುರದಲ್ಲಿ ಕಾನೂನು ವ್ಯವಸ್ಥೆ ನಿಯಂತ್ರಣದಲ್ಲಿದೆ. ಅಲ್ಲಿನ ರಾಜ್ಯ ಸರ್ಕಾರ ಸಮರ್ಥವಾಗಿಯೇ ನಿರ್ವಹಣೆ ಮಾಡುತ್ತಿದೆ. ಆದರೆ ಗಲಭೆಯ ಹಿಂದೆ ಪ್ರಭಾವಿ ಶಕ್ತಿಗಳ ಕೈವಾಡವೂ ಇದ್ದು ಶೀಘ್ರದಲ್ಲಿ ಬಹಿರಂಗಗೊಳ್ಳಲಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts