More

    ರೇಷ್ಮೆ ಸೀರೆ ತೊಟ್ಟು ಮಧ್ಯರಾತ್ರಿ ಊಟ ಬಡಿಸಿದ ಮಹಿಳೆ! ಪ್ರಶಂಸೆಯ ಸುರಿಮಳೆ

    ಕೊಲ್ಕತಾ: ಭಾರತದಲ್ಲಿ ಮದುವೆ ಊಟಕ್ಕೆ ಇರುವ ಮಹತ್ವ ಅಷ್ಟಿಷ್ಟಲ್ಲ. ಆದರೆ ಆಹಾರವು ಅತ್ಯಂತ ಹೆಚ್ಚಾಗಿ ವ್ಯರ್ಥವಾಗುವುದೂ ಮದುವೆ ಸಮಾರಂಭಗಳಲ್ಲೇ ಎಂದೂ ಹೇಳಬಹುದು. ಹೀಗೆ ವ್ಯರ್ಥವಾಗುತ್ತಿದ್ದ ಮದುವೆಯ ಊಟವನ್ನು ಮಹಿಳೆಯೊಬ್ಬರು, ಮಧ್ಯರಾತ್ರಿ ತೆಗೆದುಕೊಂಡು ಹೋಗಿ ರೈಲ್ವೇ ಪ್ಲಾಟ್​ಫಾರಂನಲ್ಲಿ ಬಡವರಿಗೆ ಹಂಚಿರುವ ಪ್ರಸಂಗ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

    ರೇಷ್ಮೆ ಸೀರೆಯುಟ್ಟು, ಆಭರಣಗಳನ್ನು ತೊಟ್ಟ ಮಹಿಳೆಯೊಬ್ಬರು ಕೊಲ್ಕತಾ ಸಬ್​ಅರ್ಬನ್​ ರೈಲ್ವೇ ಸ್ಟೇಷನ್​ನ ರಾಣಾಘಟ್​ ಜಂಕ್ಷನ್​ನಲ್ಲಿ ಡಿ.4 ರ ಮಧ್ಯರಾತ್ರಿ 1 ಗಂಟೆಗೆ ಪಾಪಿಯ ಕರ್​ ಎಂಬ ಮಹಿಳೆ ಹಸಿದವರ ಹೊಟ್ಟೆ ತಣ್ಣಗಾಗಿಸಿದ್ದಾರೆ. ತಮ್ಮ ಸೋದರನ ಮದುವೆಯ ಸಮಾರಂಭದಲ್ಲಿ ಅತಿಥಿಗಳ ಊಟವೆಲ್ಲಾ ಮುಗಿದ ನಂತರ ಉಳಿದಿದ್ದ ಭಾರೀ ಪ್ರಮಾಣದ ಊಟವನ್ನು ಪೇಪರ್​ ಪ್ಲೇಟ್​ಗಳ ಮೇಲೆ ಖುದ್ದು ಬಡಿಸಿಕೊಟ್ಟಿದ್ದಾರೆ. ದಾಲ್​, ರೋಟಿ, ಸಬ್ಜಿ ಮತ್ತು ಅನ್ನದ ವಿಶೇಷ ತಿನಿಸುಗಳನ್ನು ಸವಿದ ಬಡಜನರು ಅವರನ್ನು ಮನಸಾರೆ ಹರಸಿದ್ದಾರೆ.

    ಇದನ್ನೂ ಓದಿ: ನೂರಕ್ಕೆ ನೂರು ಲಸಿಕಾ ಅಭಿಯಾನ ಪೂರೈಸಿದ ಮೊದಲ ರಾಜ್ಯವಿದು!

    ವೆಡ್ಡಿಂಗ್ ಫೋಟೋಗ್ರಾಫರ್​ ನೀಲಾಂಜನ್​ ಮೊಂಡಲ್​ ಈ ಮಹಿಳೆಯ ಚಿತ್ರವನ್ನು ತಮ್ಮ ಫೇಸ್​ಬುಕ್​ ಪೇಜಿನಲ್ಲಿ ಪೋಸ್ಟ್​ ಮಾಡಿದ್ದಾರೆ. ಈ ಮಾನವೀಯ ಕೆಲಸದ ಬಗ್ಗೆ ನೆಟ್ಟಿಗರು ಪ್ರಶಂಸೆಯ ಸುರಿಮಳೆಗೈದಿದ್ದಾರೆ. ಸಮಾಜದ ಪ್ರತಿಯೊಬ್ಬರಲ್ಲೂ ಇಂಥ ಕಳಕಳಿ ಬಂದಲ್ಲಿ ಎಷ್ಟು ಚೆನ್ನಾಗಿರುತ್ತದೆ ಎಂದು ಕಾಮೆಂಟ್​ ಮಾಡಿದ್ದಾರೆ. (ಏಜೆನ್ಸೀಸ್)

    ಸೆಲ್ಫಿ ತೆಗೆಯಲು ಪಾರ್ಲಿಮೆಂಟ್ಗೆ ಹೋಗ್ತೀರಾ? ಮತ್ತೆ ಟ್ರೋಲ್​ ಆದ ಶಶಿ ತರೂರ್​

    20 ಕೆಜಿ ತೂಕ ಇಳಿಸಿ ಸ್ಲಿಮ್​ ಆದ ನಟಿ ಖುಷ್ಬೂ! ಆರೋಗ್ಯವೇ ಭಾಗ್ಯ ಎಂದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts