More

    ನ.1ರಂದು ಕರಾಳ ದಿನ ಆಚರಿಸಲು ನಿರ್ಣಯ, ಕನ್ನಡಿಗರ ಆಕ್ರೋಶ

    ಬೆಳಗಾವಿ: ಎಂಇಎಸ್ ನಾಯಕರು ರಾಜ್ಯೋತ್ಸವದಂದು ಕರಾಳ ದಿನ ಆಚರಿಸುವುದಕ್ಕೆ ಮತ್ತೊಮ್ಮೆ ನಿರ್ಣಯ ಕೈಗೊಂಡಿದ್ದು, ಸದ್ಯ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

    ನಗರದ ಗೋವಾವೇಸ್ ಬಳಿಯ ಮರಾಠ ಮಂಗಲ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿ ಸಭೆಯಲ್ಲಿ, ನವೆಂಬರ್ 1ರಂದು ಕರಾಳ ದಿನವನ್ನಾಗಿ ಆಚರಿಸುವ ಕುರಿತು ನಿರ್ಣಯ ಕೈಗೊಂಡಿದ್ದಾರೆ. ಕರಾಳ ದಿನ ಆಚರಿಸಲು ಅನುಮತಿ ನೀಡದಿದ್ದರೆ ಕೇಂದ್ರ ಸರ್ಕಾರದ ವಿರುದ್ಧ ಧರಣಿ ನಡೆಸಲು ಎಂಇಎಸ್ ಮುಖಂಡರು ನಿರ್ಧಾರ ಕೈಗೊಂಡಿದ್ದಾರೆ.

    ನಾವು ಪ್ರಜಾಪ್ರಭುತ್ವದ ನಿಯಮದಂತೆ ನಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದೇವೆ. ನ.1ರಂದು ಹಲವು ವರ್ಷಗಳಿಂದ ಕರಾಳ ದಿನ ಆಚರಿಸುತ್ತ ಬಂದಿದ್ದೇವೆ. ಈ ಬಾರಿಯೂ ಯಾವುದೇ ಕಾರಣಕ್ಕೂ ನಮ್ಮ ನಿರ್ಣಯ ಬದಲಿಸುವುದಿಲ್ಲ. ಕರಾಳದಿನ ಆಚರಿಸಲು ಅಡೆತಡೆ ಮಾಡುತ್ತಿರುವ ಕರ್ನಾಟಕದ ಪೊಲೀಸರಿಗೆ ದೇವರು ಬುದ್ಧಿ ನೀಡಲಿ ಎಂದು ಎಂಇಎಸ್ ಅಧ್ಯಕ್ಷ ದೀಪಕ ದಳವಿ ಹೇಳಿದ್ದಾರೆ.

    ಎಂಇಎಸ್ ಮುಖಂಡರಿಗೆ ಈ ವರ್ಷ ಯಾವುದೇ ಕಾರಣಕ್ಕೂ ಕರಾಳದಿನ ಆಚರಿಸಲು ಅನುಮತಿ ನೀಡುವುದಿಲ್ಲ. ಒಂದು ವೇಳೆ ಕರಾಳ ದಿನ ಆಚರಣೆಗೆ ಮಹಾರಾಷ್ಟ್ರ ಏಕೀಕರಣ ಸಮಿತಿ ಮುಂದಾದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್ ಎಂಇಎಸ್ ಮುಖಂಡರಿಗೆ ಎಚ್ಚರಿಕೆ ನೀಡಿದ್ದರು. ಆದರೆ, ಎಚ್ಚರಿಕೆಗೆ ಬಗ್ಗದ ಎಂಇಎಸ್ ಮುಖಂಡರು ಕರ್ನಾಟಕ ಪೊಲೀಸರಿಗೆ ಬುದ್ಧಿ ಬರಲಿ ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts