More

    2024ರಲ್ಲಿ ಜಾತ್ರಾ ಮಹೋತ್ಸವಕ್ಕೆ ನಿರ್ಧಾರ

    ರಟ್ಟಿಹಳ್ಳಿ: ಪಟ್ಟಣದ ಶ್ರೀ ದುರ್ಗಾದೇವಿ ಮತ್ತು ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವವನ್ನು 2024ರಲ್ಲಿ ಮಾಡಲು ಸಾರ್ವಜನಿಕರು ಮತ್ತು ಸ್ವಾಮೀಜಿ ಗಳ ನಿರ್ದೇಶನನಂತೆ ತೀರ್ಮಾನ ಕೈಗೊಳ್ಳ ಲಾಗಿದೆ ಎಂದು ಜಾತ್ರಾ ಕಮಿಟಿಯ ಅಧ್ಯಕ್ಷ ಶ್ರೀನಿವಾಸ ಭೈರೋಜಿ ಹೇಳಿದರು.

    ಪಟ್ಟಣದ ಶ್ರೀ ಮಾರಿಕಾಂಬಾ ಪಾದಗಟ್ಟಿಯ ಸನ್ನಿಧಿಯಲ್ಲಿ ಸೋಮವಾರ ಜರುಗಿದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ರಟ್ಟಿಹಳ್ಳಿಯ ಶ್ರೀ ಹೊಳೆಸಾಲು ದುರ್ಗಾದೇವಿ ಮತ್ತು ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವವು ಪ್ರತಿ 5 ವರ್ಷಕ್ಕೊಮ್ಮೆ ಜರುಗುತ್ತಿತ್ತು. ವೇಳಾ ಪಟ್ಟಿಯಂತೆ ಕಳೆದ 2020 ಏಪ್ರಿಲ್ ತಿಂಗಳಿನಲ್ಲಿ ಜಾತ್ರೆ ಮಾಡಲು ನಿಗದಿ ಮಾಡಲಾಗಿತ್ತು. ಆದರೆ, ಕರೊನಾ ಹಿನ್ನಲೆಯಲ್ಲಿ ಜಾತ್ರೆಯನ್ನು ಮುಂದೂಡಲಾಗಿತ್ತು.

    ಸಭೆಯ ಆಗಮಿಸಿದ್ದ ಸ್ವಾಮಿ ಮುತ್ತಪ್ಪ ಕಬ್ಬಿಣಕಂತಿಮಠ ಮಾತನಾಡಿ, 2021ರ ಏಪ್ರಿಲ್​ನಲ್ಲಿ ಶ್ರೀ ವೀರಭದ್ರೇಶ್ವರ ರಥೋತ್ಸವ ಇರುವುದಿಂದ ರಥೋತ್ಸವದ ಮುನ್ನವೇ ಜಾತ್ರೆ ಮಾಡಲು ಅವಕಾಶ ಇರುವುದಿಲ್ಲ. ರಥೋತ್ಸವ ಮುಗಿದ ಬಳಿಕ ಜಾತ್ರೆ ಮಾಡಲು 6 ವರ್ಷ ತುಂಬುತ್ತದೆ.ಈ ಹಿನ್ನ್ನೆಲೆಯಲ್ಲಿ ಜಾತ್ರೆಯನ್ನು ಪಟ್ಟಣದ ಹಿತದೃಷ್ಟಿಯಿಂದ 9ನೇ ವರ್ಷಕ್ಕೆ ಮಾಡಬೇಕಾಗಿದೆ ಎಂದು ಸಾರ್ವಜನಿಕರಿಗೆ ಮನವರಿಕೆ ಮಾಡಿದರು.

    ಜಾತ್ರ ಕಮಿಟಿಯ ಮಾಜಿ ಅಧ್ಯಕ್ಷ ಪಿ.ಡಿ. ಬಸನಗೌಡ್ರ ಮಾತನಾಡಿ, ಕಮಿಟಿಯ ಅಧ್ಯಕ್ಷರಾಗಿದ್ದ ಉಜಿನೆಪ್ಪ ಬಣಕಾರ ಮತ್ತು ಎಸ್.ಬಿ. ಪಾಟೀಲ ಇಬ್ಬರು ಅನೇಕ ಸಮಾಜಮುಖಿ ಕೆಲಸದಲ್ಲ ತೊಡಗಿಕೊಳ್ಳುತ್ತಿದ್ದರು.ಅವರ ಅಗಲಿಕೆ ನೋವುಂಟು ಮಾಡಿದೆ ಎಂದರು. ಗ್ರಾ.ಪಂ. ಮಾಜಿ ಅಧ್ಯಕ್ಷ ಸುಭಾಷ ಹದಡೇರ, ಎಪಿಎಂಸಿ ಮಾಜಿ ಅಧ್ಯಕ್ಷ ವಸಂತ್ ದ್ಯಾವಕ್ಕಳವರ, ವೀರನಗೌಡ ಪ್ಯಾಟಿಗೌಡ್ರ, ಶಂಭಣ್ಣ ಗೂಳಪ್ಪನವರ, ರಾಮಣ್ಣ ನಾಯಕ, ರವಿ ಹರವಿಶೆಟ್ಟರ್, ರವೀಂದ್ರ ಮುದಿಯಪ್ಪನವರ, ಬಸವರಾಜ ಆಡಿನವರ, ರಮೇಶ ಭೀಮಪ್ಪನವರ, ರುದ್ರಪ್ಪ ಬೆನ್ನೂರ, ಪರಮೇಶಪ್ಪ ಕಟ್ಟೇಕಾರ, ಬಸಪ್ಪ ಬಾಗೋಡಿ, ವೀರನಗೌಡ ಮಕರಿ, ಶಂಕರಗೌಡ ಚೆನ್ನಗೌಡ್ರ, ಮಂಜುನಾಥ ಜಾಧವ್, ಗದಿಗೆಪ್ಪ ಸಾವಕ್ಕಳವರ, ಸಿ.ಎಫ್. ಜಾಡರ್, ಬಾಬು ವೆರ್ಣಿಕರ, ಪ್ರಶಾಂತ ದ್ಯಾವಕ್ಕಳವರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts