More

  ಸಿಎಂ ಸಂಬಂಧಿಕರೆಂದು ಹೇಳಿಕೊಂಡು ಜನರಿಗೆ ಧೋಖಾ

  ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಬಂಧಿಕರೆಂದು ಹೇಳಿಕೊಂಡು ಭೂಮಿಕಾ ಗ್ರೂಪ್ ಆ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಡಿ.ಶಿವರಾಜ್ ಕುಮಾರ್ ಮತ್ತು ಆತನ ಸಂಬಂಧಿಕರು ೨೦೦೦ ಕ್ಕೂ ಹೆಚ್ಚು ಜನರಿಂದ ಪ್ರಾಪರ್ಟಿ ಅಡ್ವಾನ್ಸ್ ಸ್ಕೀಮ್ ಹೆರಿನಲ್ಲಿ ಹಣವನ್ನು ತೆಗೆದುಕೊಂಡು ಕೋಟ್ಯಂತರ ರೂ.ವಂಚಿಸಿದ್ದಾರೆ ಎಂದು ಜನತಾ ಪಕ್ಷದ ರಾಜ್ಯ ಮಹಾಪ್ರಧಾನ ಕಾರ್ಯದರ್ಶಿ ಎನ್. ನಾಗೇಶ್ ಆರೋಪಿಸಿದ್ದಾರೆ.
  ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಡಿ.ಶಿವರಾಜ್ ಕುಮಾರ್, ಈತನ ಸಂಬಂಧಿಕರಾದ ಆರ್.ರವಿಕುಮಾರ್ ಹಾಗೂ ಪುಷ್ಪಾ ಎಂಬುವರು ಭೂಮಿಕಾ ಬಿಲ್ಡಿಂಗ್ ಆ್ಯಂಡ್ ಹೌಸಿಂಗ್ ಪ್ರೈವೇಟ್ ಲಿಮಿಟೆಡ್ ಮತ್ತು ಕಾರ್ಪೋರೇಷನ್ ಸಂಸ್ಥೆಯ ಮೂಲಕ ೨೦೦೦ ಕ್ಕೂ ಹೆಚ್ಚು ಬಡ ಮತ್ತು ಮಧ್ಯಮ ವರ್ಗದವರನ್ನು ೨೦೧೮ ರಿಂದ ಇಲ್ಲಿಯವರೆಗೂ ವಂಚಿಸಿದ್ದಾರೆ. ಮುಗ್ಧ ಜನರನ್ನು ನಂಬಿಸಿ ನಿವೇಶನ ಕೊಡುವುದಾಗಿ ಮುಂಗಡವಾಗಿ ಹಣ ಪಡೆದು ನಿವೇಶನ ಕೊಡದೇ ಇತ್ತ ಹಣವನ್ನು ವಾಪಸ್ ಮಾಡದೇ ಇದುವರೆಗೂ ಅಂದಾಜು ೧೫ ಕೋಟಿ ರೂ. ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
  ಡಿಸಿಎಂ ಹೆಸರು ದುರ್ಬಳಕೆ:
  ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ಅವರ ಸಂಬಂಧಿಕರೆಂದು ಹೇಳಿಕೊಂಡು ಕನಕಪುರ ವಲಯದ ರೈತರಿಗೆ ನಂಬಿಸಿ ಮೋಸ ಮಾಡಿದ್ದಾರೆ. ಕನಕಪುರ, ಚನ್ನಪ್ಪಣ,ರಾಮನಗರ, ಮಂಡ್ಯ, ಮದ್ದೂರು, ಹಾಸನ ಮತ್ತು ರಾಯಚೂರು ಸೇರಿ ಹಲವು ಜಿಲ್ಲೆಗಳಲ್ಲಿ ಶಾಲೆ ತೆರೆದು ವಂಚನೆ ಮಾಡಿದ್ದಾರೆ. ರೈತರಿಗೆ, ಕೂಲಿಕಾರ್ಮಿಕರಿಗೆ, ಬೀದಿ ಬದಿಯ ವ್ಯಾಪಾರಿಗಳಿಗೆ, ಹಿಂದುಳಿದ ಮತ್ತು ದಲಿತ ವರ್ಗದ ಸಾವಿರಾರು ಜನರಿಗೆ ವಂಚಿಸಿದ್ದಾರೆ. ಕೋಟ್ಯಂತರ ರೂಪಾಯಿ ಉಳಿತಾಯ ಮತ್ತು ಠೇವಣಿಗಳನ್ನು ಕಂಪನಿಯ ಪ್ರತಿನಿಧಿಗಳ ಮೂಲಕ ಹಣವನ್ನು ಸಂಗ್ರಹಿಸಿ ಅದನ್ನು ಆಡಳಿತ ಮಂಡಳಿಯ ಸದಸ್ಯರುಗಳ ಹೆಸರಿನಲ್ಲಿ ಪ್ರಾಪರ್ಟಿಗಳನ್ನು ಖರೀದಿಸಿ ಚರ ಮತ್ತು ಸ್ಥಿರ ಆಸ್ತಿಗಳನ್ನು ಖರೀದಿಸಿ ಅದನ್ನೆ ಭದ್ರತೆಯಾಗಿ ನೀಡಿರುತ್ತಾರೆ. ಹಣ ವಾಪಸ್ ಕೊಡದೆ ಏಕಾಏಕಿಯಾಗಿ ಕಾರಣ ತಿಳಿಸದೆ ಶಾಖಾ ಕಚೇರಿಗಳನ್ನು ಮುಚ್ಚಿರುತ್ತಾರೆ. ಈ ಕುರಿತು ಪೊಲೀಸ್ ಠಾಣೆಗೆ ದೂರು ನೀಡಿದರೆ ತಮ್ಮ ರಾಜಕೀಯ ಪ್ರಭಾವ ಬಳಸಿ ತಪ್ಪಿಸಿಕೊಳ್ಳುತ್ತಾರೆ ಎಂದು ಆರೋಪಿಸಿದ್ದಾರೆ.
  ಸಿಎಂ ಮನೆ ಮುಂದೆ ಧರಣಿ:
  ಸರ್ಕಾರ ಈ ಕೂಡಲೇ ಮಧ್ಯ ಪ್ರವೇಶಿಸಿ ಬಡ ಮತ್ತು ಮಧ್ಯಮ ವರ್ಗದವರಿಗೆ ಬರಬೇಕಾದ ಹಣವನ್ನು ವಾಪಸ್ ಕೊಡಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳ ನಿವಾಸದ ಮುಂದೆ ಉಪವಾಸ ಸತ್ಯಾಗ್ರಹ ಪ್ರತಿಭಟನೆಯನ್ನು ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.
  ಸುದ್ದಿಗೋಷ್ಠಿಯಲ್ಲಿ ಹೋರಾಟಗಾರ ಹೆಬ್ಬಾಳ ವೆಂಕಟೇಶ್, ವಕೀಲರಾದ ರಮ್ಯ, ವಂಚನೆಗೊಳಗಾದವರು ಸೇರಿದಂತೆ ಮತ್ತಿತರರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts