More

    ಕೇಳುವವರಿಲ್ಲದೆ ಕೊಳೆಯುತ್ತಿದೆ ಹಲಸು, ಹಲಸಿನ ಮಾರಾಟದಿಂದಲೇ ಬದುಕು ಕಟ್ಟಿಕೊಂಡಿದ್ದ ವ್ಯಾಪಾರಿಗಳು ಅತಂತ್ರ ಕೊಳ್ಳುವವರಿಲ್ಲದೆ ಮರಗಳಲ್ಲೆ ಕೊಳೆಯುತ್ತಿರುವ ಹಣ್ಣು

    ಎಂ. ರಾಮೇಗೌಡ ನಂದಗುಡಿ
    ಹಲಸಿಗೆ ಬಹುದೊಡ್ಡ ಮಾರುಕಟ್ಟೆ ಇದ್ದರೂ ಲಾಕ್‌ಡೌನ್‌ನಿಂದಾಗಿ ವ್ಯಾಪಾರಿಗಳು ಹಳ್ಳಿಗಳತ್ತ ಮುಖ ಮಾಡದ ಪರಿಣಾಮ ಮರಗಳಲ್ಲೇ ಕೊಳೆಯುವ ಸ್ಥಿತಿಗೆ ತಲುಪಿದೆ.

    ಇಟ್ಟಸಂದ್ರ, ಈಸ್ತೂರು, ಈ ಹೊಸಹಳ್ಳಿ, ರಾಮಗೋವಿಂದಪುರ, ಚೀಮಸಂದ್ರ, ಅನುಪಹಳ್ಳಿ ಸೇರಿ ಹಲವೆಡೆಯ ಹಲಸು ಕೊಳ್ಳಲು ವ್ಯಾಪಾರಿಗಳ ದಂಡು ರೈತರ ಮನೆ ಬಾಗಿಲಿಗೆ ಎಡತಾಕುತ್ತಿತ್ತು. ಆದರೆ ಲಾಕ್‌ಡೌನ್ ಪರಿಣಾಮ ಖರೀದಿಸುವವರೇ ಇಲ್ಲದಂತಾಗಿದೆ.
    ಬೆಂ.ಗ್ರಾಮಾಂತರ ಜಿಲ್ಲೆ, ಕೋಲಾರ, ಚಿಕ್ಕಬಳ್ಳಾಪುರ ಮುಂತಾದ ಕಡೆಗಳಲ್ಲೂ ವ್ಯಾಪಾರ ಕುಸಿದಿದ್ದು, ಲೋಡ್‌ಗಟ್ಟಲೆ ಕಾಯಿಗಳು ಮಣ್ಣು ಪಾಲಾಗುತ್ತಿವೆ. ತಳ್ಳು ಗಾಡಿಗಳಲ್ಲಿ ತೊಳೆ ಲೆಕ್ಕದಲ್ಲಿ ನಗರದ ಓಣಿಗಳಲ್ಲಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದವರು ಲಾಕ್‌ಡೌನ್‌ಗೆ ತುತ್ತಾಗಿ ಸಂಕಷ್ಟ ಎದುರಿಸುತ್ತಿದ್ದಾರೆ.

    ಹಲಸು ವ್ಯಾಪಾರ ಆರಂಭಿಸಿ ತಿಂಗಳಾಗಿದೆ. ಏಳು ಲೋಡ್ ಹಣ್ಣು ತರಿಸಿಕೊಂಡಿದ್ದು, ಎರಡು ಸಾವಿರ ರೂಪಾಯಿಯ ಹಣ್ಣುಗಳ ವ್ಯಾಪಾರವಾಗಿದೆ. ಈ ಬಾರಿ ಬೇಡಿಕೆ ತೀರಾ ಕಡಿಮೆಯಾಗಿದೆ. ರೈತರಿಗೆ ಮುಂಗಡ ಹಣ ನೀಡಿದ್ದು, ವಾಪಸ್ ನೀಡಲು ನಿರಾಕರಿಸುತ್ತಿದ್ದಾರೆ. ಲಾಭಕ್ಕಿಂತ ನಷ್ಟವೇ ಹಚ್ಚಾಗಿದೆ.
    ಮೂರ್ತಿ, ವ್ಯಾಪಾರಿ, ಭೀಮಕ್ಕನಹಳ್ಳಿ

    ಮನೆ ಬಾಗಿಲಿಗೆ ಬಂದು ಹಲಸಿನ ಕಾಯಿ ಕೊಳ್ಳುತ್ತಿದ್ದ ವ್ಯಾಪಾರಸ್ಥರು ಈ ಬಾರಿ ಯಾರೊಬ್ಬರೂ ಮುಂದೆ ಬರುತ್ತಿಲ್ಲ, ಮರದಲ್ಲೇ ಕಾಯಿಗಳು ಹಣ್ಣಾಗುವ ಸ್ಥಿತಿಗೆ ಬಂದಿದ್ದು, ಕೊಳೆಯುತ್ತಿವೆ.
    ಸಿ.ಎಸ್.ಮುನಿಯಪ್ಪ, ಹಲಸು ಬೆಳೆಗಾರ, ಚೀಮಸಂದ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts