More

    ಸಾಲದ ಹೊರೆ ತಪ್ಪಿಸುವ ಸಾಮೂಹಿಕ ವಿವಾಹ, ರಾಯಚೂರು ಸಾವಿರ ಸಂಸ್ಥಾನ ಕಿಲ್ಲೇಬೃಹನ್ಮಠದ ಶಾಂತಮಲ್ಲ ಶ್ರೀಗಳ ಅಭಿಮತ

    ಮಾನ್ವಿ: ದುಬಾರಿ ಕಾಲದಲ್ಲಿ ಸಾಲ ಮಾಡಿ ದುಂದು ವೆಚ್ಚದ ಮದುವೆಗಳನ್ನು ಮಾಡಿಕೊಳ್ಳುವ ಬದಲು ಸರಳ ವಿವಾಹಗಳಿಗೆ ಆದ್ಯತೆ ನೀಡಬೇಕು ಎಂದು ರಾಯಚೂರು ಸಾವಿರ ಸಂಸ್ಥಾನ ಕಿಲ್ಲೇಬೃಹನ್ಮಠದ ಶಾಂತಮಲ್ಲ ಶ್ರೀಗಳು ಹೇಳಿದರು.

    ತಾಲೂಕಿನ ಜಾನೇಕಲ್ ಗ್ರಾಮದಲ್ಲಿ ಜೀವೈಕ್ಯ ವಿಜಯರುದ್ರ ಸ್ವಾಮೀಜಯವರ 6ನೇ ಜಾತ್ರಾ ಮಹೋತ್ಸವ ಅಂಗವಾಗಿ ಶನಿವಾರ ಆಯೋಜಿಸಿದ್ದ ಅಕ್ಕಮಹಾದೇವಿ ಪುರಾಣ ಪ್ರವಚನ ಮಹಾಮಂಗಲ ಹಾಗೂ ಸಾಮೂಹಿಕ ವಿವಾಹಗಳು ಕಾರ್ಯಕ್ರಮದಲ್ಲಿ ಮಾತನಾಡಿದರು. ಬಹಳಷ್ಟು ಜನರು ಪ್ರತಿಷ್ಠೆಗಾಗಿ ಅದ್ದೂರಿ ಮದುವೆಗಳನ್ನು ಮಾಡಿಕೊಂಡು ಸಾಲ ತೀರಿಸಲಾಗದೆ ಆಸ್ತಿಗಳನ್ನು ಕಳೆದುಕೊಳ್ಳುತ್ತಾರೆ. ಸಾಮೂಹಿಕ ವಿವಾಹದಿಂದ ಸಾಲದ ಹೊರೆ ತಪ್ಪುತ್ತದೆ. ಸಾಮೂಹಿಕ ವಿವಾಹಗಳಲ್ಲಿ ಗೃಹಸ್ಥಾಶ್ರಮಕ್ಕೆ ಕಾಲಿರಿಸಿದ ದಂಪತಿಗಳ ಜೀವನವು ಸುಖಮಯವಾಗಿರಲಿ ಎಂದು ಶ್ರೀಗಳು ಹಾರೈಸಿದರು.

    ಮಾನ್ವಿ ಕಲ್ಮಠದ ವಿರೂಪಾಕ್ಷ ಪಂಡಿತರಾಧ್ಯ ಸ್ವಾಮೀಜಿ, ಶಂಕ್ರಯ್ಯಸ್ವಾಮಿ ಸುವರ್ಣಗಿರಿಮಠ, ಪ್ರಭುಸ್ವಾಮಿ, ಮಾಜಿ ಶಾಸಕರಾದ ಬಸನಗೌಡ ಬ್ಯಾಗವಾಟ್, ಗಂಗಾಧರನಾಯಕ, ಟಿಎಪಿಸಿಎಂಎಸ್ ಅಧ್ಯಕ್ಷ ಎಸ್.ತಿಮ್ಮಾರೆಡ್ಡಿ ಭೋಗಾವತಿ, ಜೆಡಿಎಸ್ ರಾಜ್ಯ ಯುವ ಉಪಾಧ್ಯಕ್ಷ ರಾಜಾ ರಾಮಚಂದ್ರನಾಯಕ, ಮುಖಂಡರಾದ ಡಾ.ಶರಣಪ್ಪ ಬಲ್ಲಟಗಿ, ಶರಣಪ್ಪಗೌಡ ನಕ್ಕುಂದಿ, ರಾಜಶೇಖರಗೌಡ, ರಾಘವೇಂದ್ರನಾಯಕ, ಗೋಪಾಲ ಗಂಗಾಧರನಾಯಕ, ಶರಣಯ್ಯಸ್ವಾಮಿ, ಸೂಗೂರಯ್ಯಸ್ವಾಮಿ ಆರ್‌ಎಸ್ ಮಠ, ನೀಲಪ್ಪಗೌಡ ಸೇರಿದಂತೆ ಗ್ರಾಪಂ ಅಧ್ಯಕ್ಷೆ, ಉಪಾಧ್ಯಕ್ಷ, ಸದಸ್ಯರಿದ್ದರು. ಜೀವೈಕ್ಯ ವಿಜಯರುದ್ರ ಮಹಾಸ್ವಾಮಿಗಳ ಉಚ್ಚಾಯ ಮಹೋತ್ಸವ ಸಂಜೆ ನೆರವೇರಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts