More

    ಕರೊನಾ ರೋಗಲಕ್ಷಣ ಕಾಣಿಸಿಕೊಂಡ ಕೆಲವೇ ಗಂಟೆಗಳಲ್ಲಿ ಸಾಯುತ್ತಿರುವ ಜನ

    ವಿಶಾಖಪಟ್ಟಣ: ಆಂಧ್ರಪ್ರದೇಶದಲ್ಲಿ ಇತ್ತೀಚಿಗೆ ಕರೊನಾ ರೋಗಲಕ್ಷಣ ಕಾಣಿಸಿಕೊಂಡ ಕೆಲವೇ ಗಂಟೆಗಳಲ್ಲಿ ಸೋಂಕಿತರು ಸಾಯುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದು ಆತಂಕಕ್ಕೆ ಕಾರಣವಾಗಿದೆ.

    ವಿಜಯವಾಡದ ಹಳೇ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಕೋವಿಡ್​-19 ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೈದ್ಯರೊಬ್ಬರಿಗೆ ತೀವ್ರ ಸ್ವರೂಪದ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಆಸ್ಪತ್ರೆಗೆ ದಾಖಲಾದ ಅರ್ಧಗಂಟೆಯಲ್ಲೇ ಮೃತಪಟ್ಟರು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

    ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುವವರೆಗೂ ಕರೊನಾ ಸೋಂಕಿನ ಯಾವುದೇ ಲಕ್ಷಣಗಳು ಅವರಲ್ಲಿ ಇರಲಿಲ್ಲ. ಆಸ್ಪತ್ರೆಗೆ ದಾಖಲಾಗುವ ಕೆಲವೇ ಕ್ಷಣಗಳ ಮೊದಲಿನವರೆಗೂ ಅವರು ಆರೋಗ್ಯವಾಗಿದ್ದು, ಕರೊನಾ ಸೋಂಕಿತರ ಚಿಕಿತ್ಸೆಯಲ್ಲಿ ತೊಡಗಿಕೊಂಡಿದ್ದರು. ಆದರೆ, ಉಸಿರಾಟದ ತೊಂದರೆ ಕಾಣಿಸಿಕೊಂಡಿತು. ಅವರ ಎದೆಯ ಎಕ್ಸ್​ರೇ ತೆಗೆಸಿ, ವಾರ್ಡ್​ಗೆ ತರುವಷ್ಟರಲ್ಲಿ ಅರ್ಧ ಗಂಟೆಯಾಗಿತ್ತು. ಅಷ್ಟರಲ್ಲೇ ಅವರು ಮೃತಪಟ್ಟರು ಎಂದು ಮೃತ ವೈದ್ಯರ ಸಹೋದ್ಯೋಗಿಗಳು ಹೇಳಿದ್ದಾರೆ.

    ಇದನ್ನೂ ಓದಿ: ಗಿಲ್​ಲೀಡ್​ ಸೈನ್ಸಸ್​ನ ಕೋವಿಡ್​ ಚುಚ್ಚುಮದ್ದು ಒಂದರ ಬೆಲೆ ಕೇಳಿದರೆ ಹೌಹಾರುತ್ತೀರಾ!

    ಕರೊನಾ ಸೋಂಕು ಅವರಿಗೆ ಅದಾಗಲೇ ತಗುಲಿರಬೇಕು. ಅವರ ದೇಹದಲ್ಲಿನ ಆಮ್ಲಜನಕದ ಪ್ರಮಾಣ ಕ್ಷೀಣಿಸುವಂತೆ ಕರೊನಾ ವೈರಾಣು ಮಾಡಿರಬಹುದು. ಹಾಗಾಗಿ ಅವರಲ್ಲಿ ದಿಢೀರ್​ ಸೋಂಕಿನ ಲಕ್ಷಣ ಕಾಣಿಸಿಕೊಂಡಿರಬಹುದು. ಅವರಿಗೆ ಸೂಕ್ತ ಚಿಕಿತ್ಸೆ ಆರಂಭಿಸಿದರೂ, ಅದು ಪರಿಣಾಮ ಬೀರದೆ ಹೋಗಿ ಮೃತಪಟ್ಟಿರಬಹುದು ಎಂದು ಅಂದಾಜಿಸಿದ್ದಾರೆ.

    ಈ ವೈದ್ಯರು ಮಾತ್ರವೇ ಅಲ್ಲ, ಪೂರ್ವ ಗೋದಾವರಿ ಜಿಲ್ಲೆಯ ಪೆದ್ದಾಪುಡಿ ಮಂಡಲ ಸೇರಿ ಅಕ್ಕಪಕ್ಕದ ಮಂಡಲಗಳ 200 ಜನರಿಗೆ ಸೋಂಕು ದಾಟಿಸಿ ಸೂಪರ್​ ಸ್ಪ್ರೆಡರ್​ ಎಂಬ ಕುಖ್ಯಾತಿಗೆ ಒಳಗಾಗಿದ್ದ ಕರೊನಾ ಸೋಂಕಿತ ಕೂಡ ಆಸ್ಪತ್ರೆ ದಾಖಲಾಗಿ ಅರ್ಧ ಗಂಟೆಯಲ್ಲೇ ಮೃತಪಟ್ಟಿದ್ದ. ಮೂರು ದಿನಗಳ ಹಿಂದೆ ಅಮರಾಪುರಂ ಪ್ರದೇಶದಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿತು ಎಂದು ಆಸ್ಪತ್ರೆಗೆ ಕರೆತರುವಷ್ಟರಲ್ಲೇ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು ಎಂದು ಹೇಳಲಾಗಿದೆ.

    ಸಂಕಷ್ಟದಲ್ಲಿದ್ದ ತಿರುಮಲನಿಗೆ ಎರಡೇ ವಾರದಲ್ಲಿ ಬಂದ ಆದಾಯ ಎಷ್ಟು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts