More

    ಒಂದು ಭೀಕರ ಸ್ಫೋಟ, ವಾರ ಕಳೆಯುವಷ್ಟರಲ್ಲಿ 14 ಸಾವು; ಸೀಮಂತದ ಬೆನ್ನಿಗೇ ಭಾರಿ ಸೂತಕ…

    ಯಾದಗಿರಿ: ಸೀಮಂತ ಸಮಾರಂಭವೊಂದರಲ್ಲಿ ಗ್ಯಾಸ್​ ಸಿಲಿಂಡರ್ ಸ್ಫೋಟಗೊಂಡು 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದ ಪ್ರಕರಣದಲ್ಲಿ ಇದೀಗ ಸತ್ತವರ ಸಂಖ್ಯೆ 14ಕ್ಕೆ ತಲುಪಿದೆ. ದಿನೇದಿನೆ ಸಾವಿನ ಸಂಖ್ಯೆ ಏರಿದ್ದರಿಂದ ಪ್ರಕರಣ ಸಂಭವಿಸಿದ ಒಂದು ವಾರ ಕಳೆಯುವಷ್ಟರಲ್ಲಿ ಸೀಮಂತದ ಬೆನ್ನಿಗೇ ಭಾರಿ ಸೂತಕ ಕಾಡುವಂತಾಗಿದೆ.

    ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿಯಲ್ಲಿ ನಡೆದಿದ್ದ ಫೆ. 25ರಂದು ನಡೆದಿದ್ದ ಸೀಮಂತ ಸಮಾರಂಭದಲ್ಲಿ 20ಕ್ಕೂ ಅಧಿಕ ಮಂದಿ ಗಾಯಗೊಂಡು, ಆ ಪೈಕಿ 8 ಮಂದಿಯ ಪರಿಸ್ಥಿತಿ ಚಿಂತಾಜನಕವಾಗಿತ್ತು. ಅದೇ ದಿನ ನಾಲ್ವರು ಸಾವಿಗೀಡಾಗಿದ್ದು, ಬಳಿಕ ಒಬ್ಬೊಬ್ಬರೇ ಸಾವಿಗೀಡಾಗಿ ಮೊನ್ನೆಗೆ ಸತ್ತವರ ಸಂಖ್ಯೆ 9ಕ್ಕೆ ತಲುಪಿತ್ತು.

    ಇದನ್ನೂ ಓದಿ: ಒಂದು ಸ್ಫೋಟ, ಒಂಬತ್ತು ಸಾವು: ಶುಭ ಸಮಾರಂಭದ ಮನೆಯಲ್ಲಿ ಸೂತಕದ ಕಾವು..

    ಗಾಯಾಳುಗಳನ್ನು ಕಲಬುರಗಿಯ ಜಿಮ್ಸ್ ಸೇರಿ ಬೇರೆ ಬೇರೆ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿತ್ತು. ಪ್ರಕರಣದಲ್ಲಿ 24 ಮಂದಿ ಗಾಯಗೊಂಡಿದ್ದು, ಉಳಿದವರಿಗೆ ಚಿಕಿತ್ಸೆ ಮುಂದುವರಿದಿತ್ತು. ಗಾಯಾಳುಗಳ ಪೈಕಿ ಕಲಬುರಗಿಯ ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾಗಣ್ಣ ಹಳ್ಳದ್ (47) ಇಂದು ಸಾವಿಗೀಡಾಗಿದ್ದು, ಇದುವರೆಗೆ ಈ ಪ್ರಕರಣದಲ್ಲಿ ಸತ್ತವರ ಸಂಖ್ಯೆ 14ಕ್ಕೆ ತಲುಪಿದೆ. ಇನ್ನುಳಿದ ಹತ್ತು ಮಂದಿಗೆ ಕಲಬುರಗಿಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿದಿದೆ. ಆದರೆ ಸರಣಿ ಸಾವಿನಿಂದ ಕುಟುಂಬಸ್ಥರು ಕಂಗಾಲಾಗಿದ್ದು, ತೀವ್ರ ಆತಂಕ ಎದುರಿಸುತ್ತಿದ್ದಾರೆ.

    52ನೇ ವಯಸ್ಸಲ್ಲಿ ಅಮ್ಮನಿಗೆ ಲವ್ ಮ್ಯಾರೇಜ್​; ಸಂತಸಪಟ್ಟ ಮಗನ ದೇಶವಿದು..

    70ಕ್ಕೂ ಹೆಚ್ಚು ದಂಪತಿಗಳಿಗೆ ಮೋಸ; ಖತರ್​ನಾಕ್​ ಗಂಡ-ಹೆಂಡ್ತಿಯ ಬಂಧನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts