More

    ಕರೊನಾ ಕಡಿಮೆ ಮಾಡಿಸೆಂದು ದೇವರಿಗೆ ಬಿಟ್ಟಿದ್ದ ಕುದುರೆಯೇ ಸಾವು! ಅಂತ್ಯಸಂಸ್ಕಾರ ಮಾಡಿದ 15 ಮಂದಿ ವಿರುದ್ಧ ಎಫ್​ಐಆರ್​

    ಬೆಳಗಾವಿ: ಈ ಕರೊನಾ ಸಂಕಷ್ಟ ಆದಷ್ಟು ಬೇಗ ದೂರಾಗಲಿ ಎಂದು ದೇವರಿಗೆ ಹರಕೆ ಹೊತ್ತು ಬಿಟ್ಟಿದ್ದ ಕುದುರೆಯೇ ಸಾವನ್ನಪ್ಪಿರುವ ಘಟನೆ ಬೆಳಗಾವಿಯ ಗೋಕಾಕ್ ತಾಲೂಕಿನಲ್ಲಿ ನಡೆದಿದೆ.

    51 ವರ್ಷಗಳ ಹಿಂದೆ ಯಾವುದೋ ಸಂಕಷ್ಟ ಬಂದಾಗ ಮಠದ ಕುದುರೆಯನ್ನು ರಾತ್ರಿ ಊರಲ್ಲಿ ಸಂಚಾರಕ್ಕೆ ಬಿಡಲಾಗಿತ್ತಂತೆ. ಈ ಹಿಂದೆ ಮಲೇರಿಯಾ, ಪ್ಲೇಗ್‌ದಂತ ಮಹಾಮಾರಿ ಬಂದಾಗ ಆಗಿನ ಕಾಡಸಿದ್ದೇಶ್ವರರು ಕಟ್ಟಿದ ಕುದುರೆ ಬಿಡಲಾಗುತ್ತಿತ್ತು. ಅದೇ ನಂಬಿಕೆಯ ಆಧಾರದ ಮೇಲೆ ಪವಾಡೇಶ್ವರ ಶ್ರೀಗಳು ಕರೊನಾ ಕಡಿಮೆಯಾಗಲು ರಾತ್ರಿ ಸಂಚಾರಕ್ಕೆ ಕುದುರೆ ಬಿಡುವ ಮಾರ್ಗದರ್ಶನ ನೀಡಿದ್ದರಂತೆ. ಆ ಹಿನ್ನೆಲೆಯಲ್ಲಿ ಬುಧವಾರ ಮಧ್ಯರಾತ್ರಿ 12ರಿಂದ ಗುರುವಾರ ಬೆಳಗ್ಗೆ 4ರವರೆಗೆ ಕುದುರೆ ಬಿಡಲಾಗಿತ್ತು. ಆದರೆ ದುರಾದೃಷ್ಟವಶಾತ್​ ಕುದುರೆ ಬಿಟ್ಟ ಎರಡೇ ದಿನದಲ್ಲಿ ಸಾವನ್ನಪ್ಪಿದೆ. ಕೊಣ್ಣೂರು, ಮರಡಿಮಠ ಗ್ರಾಮಸ್ಥರೆಲ್ಲರೂ ಸೇರಿ ದೈವ ಕುದುರೆಯ ಅಂತ್ಯ ಸಂಸ್ಕಾರ ನಡೆಸಿದ್ದಾರೆ. ಮಾಸ್ಕ್​ ಧರಿಸದೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳದೆಯೇ ನೂರಾರು ಜನರ ಸಮ್ಮುಖದಲ್ಲಿ ಅಂತ್ಯಸಂಸ್ಕಾರ ಮಾಡಲಾಗಿದೆ.

    ಕುದುರೆಯನ್ನು ಮೆರವಣಿಗೆ ಮಾಡಿ ಅಂತ್ಯಸಂಸ್ಕಾರ ಮಾಡಿರುವುದೇ ಗ್ರಾಮಸ್ಥರಿಗೆ ದೊಡ್ಡ ತಲೆನೋವಾಗಿ ಬದಲಾಗಿದೆ. ಪೊಲೀಸ್ ಇಲಾಖೆ, ತಾಲೂಕು ಆಡಳಿತ ಗಮನಕ್ಕೆ ತರದೇ ಅಂತ್ಯಸಂಸ್ಕಾರ ಮಾಡಿರುವ ಹಿನ್ನೆಲೆಯಲ್ಲಿ ಪೂರ್ತಿ ಗ್ರಾಮವನ್ನೇ ಸೀಲ್​ ಡೌನ್​ ಮಾಡಲಾಗಿದೆ. ಅಂತ್ಯಸಂಸ್ಕಾರದ ಮುಂದಾಳತ್ವ ವಹಿಸಿದ್ದ 15 ಜನರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ.

    ಅಂತ್ಯಸಂಸ್ಕಾರದಲ್ಲಿ ಸುಮಾರು 400 ಜನರು ಭಾಗಿಯಾಗಿದ್ದರು. ಅವರೆಲ್ಲರದ್ದೂ ಥ್ರೋಟ್ ಸ್ವ್ಯಾಬ್ ಟೆಸ್ಟ್ ಮಾಡಲು ನಿರ್ಧರಿಸಲಾಗಿದೆ. ಲಾಕ್‌ಡೌನ್ ವೇಳೆ ಜನ ಸೇರಬಾರದು ಅಂದರೂ ಸಾಕಷ್ಟು ಜನ ಸೇರಿದ್ದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಗೋಕಾಕ ತಹಶಿಲ್ದಾರ್ ಪ್ರಕಾಶ್ ಹೊಳೆಪ್ಪಗೋಳ ಹೇಳಿದ್ದಾರೆ.

    ಬ್ಲ್ಯಾಕ್ ಫಂಗಸ್ ಅನ್ನು ಬುರ್ಕಾಗೆ ಹೋಲಿಸಿದ ಯುವಕ! ಎರಡು ಸಮುದಾಯಗಳ ನಡುವೆ ಅಸಮಾಧಾನದ ಕಿಡಿ

    ಕಾರು ಮಾರೋಕೆ ಫೋಟೋ ಹಾಕುವಾಗ ಗುಪ್ತಾಂಗದ್ದೂ ಫೋಟೋ ಹಾಕಿಬಿಟ್ಟ! ಮಾರಾಟ ಆಗಿದ್ದೇನು?

    ನಿಂತಿದ್ದ ಆ್ಯಂಬುಲೆನ್ಸ್​ ಅಲ್ಲಾಡುತ್ತಿತ್ತು; ಹತ್ತಿರ ಹೋಗಿ ನೋಡಿದ ಪೊಲೀಸರಿಗೆ ಕಂಡಿದ್ದು ಬೇರೆಯದ್ದೇ ದೃಶ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts