More

    ಬಿಬಿಎಂಪಿ ಬಜೆಟ್‌ಗೆ ಮುನ್ನ ಆಸ್ತಿ ಡಿಜಿಟಲೀಕರಣ ಪೂರ್ಣಕ್ಕೆ ಗಡುವು

    ಬೆಂಗಳೂರು: ರಾಜಧಾನಿಯಲ್ಲಿರುವ ಎಲ್ಲ ಆಸ್ತಿಗಳನ್ನು ಡಿಜಿಟಲೀಕರಣಗೊಳಿಸುವ ಯೋಜನೆಯನ್ನು ಮುಂಬರುವ ಬಜೆಟ್ ಮಂಡನೆ ಮುನ್ನ ಪೂರ್ಣಗೊಳಿಸಲು ಬಿಬಿಎಂಪಿ ಸ್ವಯಂ ಗಡುವು ವಿಧಿಸಿಕೊಂಡಿದೆ.
    ಸ್ವತ್ತುಗಳ ಸಚಾತನ, ನಕಲು ಮಾಡದಂತೆ ತಡೆಯುವುದು ಸೇರಿದಂತೆ ಆಸ್ತಿಗೆ ಸಂಬಂಧಿಸಿದಂತೆ ಪೂರ್ಣ ಮಾಹಿತಿಯನ್ನು ಸಂರಕ್ಷಿತ ರೂಪಕ್ಕೆ ಬದಲಾಯಿಸಲು ಪಾಲಿಕೆ ಡಿಜಿಟಲ್ ಮೊರೆ ಹೋಗಿದೆ. ಎರಡು ವರ್ಷದ ಹಿಂದೆ ಚಾಲನೆ ದೊರೆತಿದ್ದ ಈ ವ್ಯವಸ್ಥೆಗೆ ಈಗಷ್ಟೇ ವೇಗ ದೊರೆತಿದೆ. ಇದರಿಂದಾಗಿ ಪಾಲಿಕೆ ವ್ಯಾಪ್ತಿಯ ಎಲ್ಲ ಎಂಟೂ ವಲಯಗಳಲ್ಲಿ ಆಸ್ತಿಗಳ ಮಾಹಿತಿಯನ್ನು ಕ್ರೊಡೀಕರಿಸಿ ಡಿಜಿಟಲ್ ಮಾದರಿಗೆ ಬದಲಾಯಿಸಲಾಗುತ್ತಿದೆ.
    ಪಾಲಿಕೆ ಕೈಗೊಂಡಿರುವ ಈ ಕಾರ್ಯದಿಂದಾಗಿ ಇನ್ನು ಮುಂದೆ ಆಸ್ತಿಗಳ ವಿಚಾರದಲ್ಲಿ ಪದೇ ಪದೆ ಸಬ್ ರಿಜಿಸ್ಟ್ರಾರ್ ಕಚೇರಿಗೆ ತೆರಳಿ ಕಾಗದಪಪತ್ರಗಳ ಸಾಚಾತನಕ್ಕಾಗಿ ಶ್ರಮ ಪಡಬೇಕಿಲ್ಲ. ಕಡಿಮೆ ಅವಧಿಯಲ್ಲಿ ನಿಖರ ಆಸ್ತಿ ಮಾಲೀಕರು, ಸ್ವತ್ತಿನ ಖಾತಾದಾರರು ಹಾಗೂ ಆ ಸ್ವತ್ತಿನ ಇನ್ನಿತರ ಮಾಹಿತಿ ಲಭಿಸಲಿದೆ. ಯೋಜನೆ ಪೂರ್ಣಗೊಳ್ಳುತ್ತಿದ್ದಂತೆ ಈ ಎಲ್ಲ ಮಾಹಿತಿಯನ್ನು ಆನ್‌ಲೈನ್‌ಗೆ ಅಪ್‌ಲೋಡ್ ಮಾಡಲಾಗುತ್ತದೆ. ಈ ಪ್ರಕ್ರಿಯೆಯಿಂದ ಸ್ವತ್ತಿನ ಕಾಗದಪತ್ರಗಳನ್ನು ಅಕ್ರಮ ಎಸೆಗುವ ಪ್ರಕರಣಗಳು ಶೂನ್ಯಕ್ಕಿಯಳಿವೆ ಎಂದು ಪಾಲಿಕೆಯ ಕಂದಾಯ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

    ಎಸ್‌ಎಎಸ್ ಪದ್ಧತಿ ಪರಾಮರ್ಶೆ:

    ಬಿಬಿಎಂಪಿ ವ್ಯಾಪ್ತಿಯಲ್ಲಿ 2016-17ನೇ ಸಾಲಿನಿಂದ ಸ್ವಯಂ ಘೋಷಿತ ಆಸ್ತಿತೆರಿಗೆ ಪದ್ಧತಿ (ಎಸ್‌ಎಎಸ್) ಜಾರಿಗೊಳಿಸಲಾಗಿದೆ. ಇದರನ್ವಯ ಆಸ್ತಿ ಮಾಲೀಕರು ತಮ್ಮ ಸ್ವತ್ತಿನ ವಿಸ್ತೀರ್ಣ ಆಧರಿಸಿ ಸ್ವಯಂ ತೆರಿಗೆಯನ್ನು ಲೆಕ್ಕಹಾಕಿ ಪಾವತಿಸಲು ಅವಕಾಶ ಮಾಡಿಕೊಡಲಾಗಿದೆ. ಇದನ್ನು ಕೆಲವರು ದುರುಪಯೋಗಪಡಿಸಿಕೊಂಡಿ ಕಡಮೆ ವಿಸ್ತೀರ್ಣ ನಮೂದಿ ತೆರಿಗೆ ಪಾವತಿಸಿದ್ದಾರೆ. ಇದರಿಂದ ಪಾಲಿಕೆಗೆ ಕೋಟ್ಯಂತರ ರೂ. ಮೊತ್ತದ ತೆರಿಗೆ ಹಣ ನಷ್ಟವಾಗಿದೆ. ಇಂತಹ ಪ್ರಕರಣಗಳನ್ನು ಪತ್ತೆ ಹಚ್ಚಲು ಎಲ್ಲ ವಲಯಗಳಲ್ಲೂ ಕಂದಾಯ ವಿಭಾಗ ಅಧಿಕಾರಿ, ಸಿಬ್ಬಂದಿಗಳನ್ನು ನಿಯೋಜಿಸಿದೆ. ಇವರು ಅಂತಹ ಸ್ವತ್ತುಗಳಿರುವ ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಲಿದ್ದಾರೆ. ತಪ್ಪು ಮಾಹಿತಿ ನಮೂದಿಸಿದ್ದಲ್ಲಿ ಅಂತಹ ಪ್ರಕರಣಗಳಿಗೆ ದಂಡ ವಿಧಿಸಿ ವಸೂಲು ಮಾಡಲಾಗುತ್ತದೆ. ಇದಕ್ಕೆ ಸರ್ಕಾರ ಸಹಮತ ವ್ಯಕ್ತಪಡಿಸಿರುವ ಕಾರಣ ಡಿಜಿಟಲೀಕರಣಕ್ಕೆ ಪಾಲಿಕೆ ಒತ್ತು ನೀಡಿದೆ.

    ಮಾಹಿತಿ ದೃಢೀಕರಿಸಲಷ್ಟೇ ಸಂದೇಶ:

    ಬಿಬಿಎಂಪಿಯು ಡಿಜಿಟಲ್ ಆಸ್ತಿ ದಾಖಲೆಯನ್ನು ಸಿದ್ಧಪಡಿಸುತ್ತಿದ್ದು, ಇದಕ್ಕಾಗಿ ನಮ್ಮ ಸಿಬ್ಬಂದಿಗಳು ಮುಂದಿನ ದಿನಗಳಲ್ಲಿ ತಮ್ಮ ಸ್ವತ್ತಿಗೆ ಭೇಟಿ ನೀಡಲಿದ್ದಾರೆ. ಆ ವೇಳೆ ಆಸ್ತಿತೆರಿಗೆ ಪಾವತಿ ರಶೀದಿ ಹಾಗೂ ವಿದ್ಯುತ್ ಬಿಲ್ ಪ್ರತಿಯನ್ನು ಸಿಬ್ಬಂದಿಗೆ ಪ್ರದರ್ಶಿಸಿ ಎಂಬ ಎಸ್‌ಎಂಎಸ್ ಸಂದೇಶವು ಇತ್ತೀಚಿಗೆ ಎಲ್ಲ ಸ್ವತ್ತುದಾರರಿಗೆ ರವಾನಿಸಲಾಗಿದೆ. ಇದರಿಂದ ಕೆಲವರು ಗಾಬರಿಗೆ ಒಳಗಾಗಿದ್ದಾರೆ. ಈ ಕುರಿತು ಪಾಲಿಕೆ ಸಹಾಯವಾಣಿ ಸಹಿತ ವಿವಿಧ ಕಚೇರಿಗಳಿಗೆ ಕರೆ ಮಾಡಿ ಸ್ಪಷ್ಟೀಕರಣ ಕೇಳಲಾಗುತ್ತಿದೆ. ಸಂದೇಶದ ಬಗ್ಗೆ ಯಾವುದೇ ಅನುಮಾನ ಬೇಡ, ಕೇವಲ ಸ್ವತ್ತುಗಳ ದಾಖಲೆ ದೃಢೀಕರಣಕ್ಕಾಗಿ ಸಾರ್ವಜನಿಕರು ಸಿಬ್ಬಂದಿಗಳೊಂದಿಗೆ ಸಹಕರಿಸಬೇಕು ಎಂದು ಪಾಲಿಕೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts