More

    ಅಬ್ಬಬ್ಬಾ… ಎಂಥೆಂಥಾ ವೈರಸ್​ಗಳು ಜಗತ್ತನ್ನು ಕಾಡಿದ್ದವು, ಕಾಡುತ್ತಿವೆ ಗೊತ್ತ?

    ಕರೊನಾ ವೈರಸ್‌ನಿಂದ ಇಡೀ ಜಗತ್ತೇ ತಲ್ಲಣಗೊಂಡಿದೆ. ಎಲ್ಲಿಯೋ ಹುಟ್ಟಿ, ಎಲ್ಲೆಲ್ಲಿಯೋ ಹಬ್ಬುತ್ತ ನಮ್ಮ ಕಾಲಬುಡಕ್ಕೇ ಬಂದಿರುವ ಈ ವೈರಸ್‌ ಪ್ರತಿಯೊಬ್ಬರ ಜೀವನದಲ್ಲಿಯೂ ಆತಂಕ ಸೃಷ್ಟಿಸಿರೋದಂತೂ ಸುಳ್ಳಲ್ಲ. ಆದರೆ ಇಂಥದ್ದೇ ವೈರಸ್‌ಗಳು ಈ ಹಿಂದೆಯೂ ಜಗತ್ತನ್ನು ಕಾಡಿದ್ದುಂಟು. ಅವುಗಳ ಪೈಕಿ ಟಾಪ್‌ 8 ವೈರಸ್‌ಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ ನೋಡಿ.

    ಹಂಟಾ ವೈರಸ್: ಚೀನಾದಿಂದ ಹುಟ್ಟಿರುವ ಕರೊನಾ ವೈರಸ್‌ ಇಡೀ ಜಗತ್ತಿನಲ್ಲಿ ಆತಂಕ ಸೃಷ್ಟಿಸಿರುವ ಬೆನ್ನಲ್ಲೇ, ಅಲ್ಲಿ ಈಗ ಹಂಟಾ ವೈರಸ್‌ ಸದ್ದು ಮಾಡುತ್ತಿದೆ. ಇಲಿಗಳಿಂದ ಹರಡುವ ಈ ವೈರಸ್ ಚೀನಾದಲ್ಲಿ ಹಿಂದೆಯೂ ಕಾಣಿಸಿತ್ತು. ಅದು ಮೊದಲು ಕಾಣಿಸಿಕೊಂಡದ್ದು 1950ರಲ್ಲಿ. ಅಮೆರಿಕ ಮತ್ತು ಕೊರಿಯಾ ನಡುವೆ ಯುದ್ಧ ನಡೆಯುತ್ತಿದ್ದ ಸಂದರ್ಭದಲ್ಲಿ ಅಮೆರಿಕದ ಸೈನಿಕರಲ್ಲಿ ಇದು ಇದು ನಿಧಾನವಾಗಿ 25 ದೇಶಗಳಿಗೆ ಹರಡಿ ಏಳು ಸಾವಿರಕ್ಕೂ ಅಧಿಕ ಬಲಿ ಪಡೆದಿತ್ತು. ಮೊದಲು ಜ್ವರ ನಂತರ ಶ್ವಾಸಕೋಶದ ಸಮಸ್ಯೆ ಕಾಣಿಸಿಕೊಂಡು ಮೂತ್ರಪಿಂಡ ವೈಫಲ್ಯವಾಗಿ ಕೊನೆಗೆ ಸಾವು ಸಂಭವಿಸುತ್ತದೆ. ಈ ವೈರಸ್‌ಗೆ ತುತ್ತಾದರೆ ಶೇ.90 ರಷ್ಟು ಸಾವು ಖಚಿತ.

    ಮಾರಬರ್ಗ್‌ ವೈರಸ್‌: ಉಗಾಂಡದ ಮಂಗಗಳಿಂದ 1967ರಲ್ಲಿ ಹರಡಿದ್ದ ಈ ವೈರಸ್‌ 20 ದೇಶಗಳಿಗೆ ಹರಡಿ 10 ಸಾವಿರಕ್ಕೂ ಅಧಿಕ ಮಂದಿಯನ್ನು ಬಲಿ ಪಡೆದಿತ್ತು. ಈ ವೈರಸ್‌ ಮೊದಲು ಶುರುವಾಗಿದ್ದು ಜರ್ಮನಿಯಲ್ಲಿ. ಇಲ್ಲಿನ ಪ್ರಯೋಗಾಲಯಕ್ಕೆ ಉಗಾಂಡದಿಂದ ಮಂಗಗಳನ್ನು ಕರೆತರಲಾಗಿತ್ತು. ಆ ಸಂದರ್ಭದಲ್ಲಿ ವೈರಸ್‌ ಹರಡಲು ಶುರುವಾಗಿ ಪ್ರಯೋಗಾಲಯದ ಸಿಬ್ಬಂದಿಯನ್ನು ಮೊದಲು ಸಾವಿನ ದವಡೆಗೆ ನೂಕಿತ್ತು. ಆರಂಭದಲ್ಲಿ ವಿಪರೀತ ಜ್ವರ, ನಂತರ ರಕ್ತಸ್ರಾವ ಈ ವೈರಸ್‌ ಪೀಡಿತರ ಲಕ್ಷಣಗಳು. ಈ ವೈರಸ್‌ಗೆ ಔಷಧ ಕಂಡುಹಿಡಿಯುವ ಹೊತ್ತಿಗೇ 20 ದೇಶಗಳಿಗೆ ಹರಡಿಬಿಟ್ಟಿತ್ತು. ಔಷಧ ಕಂಡುಹಿಡಿದಿದ್ದರೂ ಬದುಕುವ ಸಾಧ್ಯತೆ ಕೇವಲ ಶೇ.10ರಷ್ಟು. ಒಮ್ಮೆ ಇದರ ಸೋಂಕು ತಗುಲಿತು ಎಂದರೆ ಶೇ.90ರಷ್ಟು ಸಾವು ಖಚಿತ. 1998 ಮತ್ತು 2000ರಲ್ಲಿ ಪುನಃ ಈ ವೈರಸ್‌ ಕಾಣಿಸಿಕೊಂಡಿತ್ತು. ಕಾಂಗೋದಲ್ಲಿ ಇದು ಕಾಣಿಸಿಕೊಂಡು ಶೇ. 80ರಷ್ಟು ಮಂದಿಯನ್ನು (ಅಂದರೆ 100ಕ್ಕೆ 80 ಮಂದಿ) ಬಲಿಪಡೆದಿತ್ತು. ಪುನಃ 2005ರಲ್ಲಿ ಅಂಗೋಲಾದ ಕಾಣಿಸಿಕೊಂಡಿತ್ತು.

    ಎಬೋಲಾ ವೈರಸ್‌: ಬಹುತೇಕ ವೈರಸ್‌ಗಳು ಪ್ರಾಣಿ, ಪಕ್ಷಿಗಳಿಂದ ಬರುವುದಾದರೂ ಎಬೋಲಾದ ಮೂಲ ಮಾತ್ರ ಯಾವುದು ಎನ್ನುವುದು ಇನ್ನೂ ಅಸ್ಪಷ್ಟವಾಗಿಯೇ ಇದೆ. ಹಲವು ಸಂಶೋಧನೆಗಳು ಹಲವು ರೀತಿಯಲ್ಲಿ ವ್ಯಾಖ್ಯಾನ ಮಾಡುತ್ತಿದ್ದರೂ ಇದರ ಸತ್ಯ ಇದುವರೆಗೂ ಅರಿಯಲು ಆಗಲಿಲ್ಲ. ಕೋತಿ, ಗೊರಿಲ್ಲಾ, ಚಿಂಪಾಂಜಿ, ಬಾವಲಿಗಳ ಮೂಲಕ ಹರಡುವ ರೋಗ ಎಂದು ಹಲವು ಸಂಶೋಧನೆಗಳು ತಿಳಿಸಿವೆ.
    ಈ ವೈರಸ್‌ ಮೊದಲು ಕಂಡುಬಂದದ್ದು 1967ರಲ್ಲಿ. ಆಫ್ರಿಕಾ ಖಂಡದ ಕಾಂಗೊ ಮತ್ತೂ ಸುಡಾನ್‌ನಲ್ಲಿ ಒಂದೇ ಸಮಯದಲ್ಲಿ ಇದು ಕಾಣಿಸಿಕೊಂಡಿತು. ಆಗ್ನೇಯ ಗಿನಿಗೆ ಪ್ರವಾಸಕ್ಕೆ ಬಂದವರಿಂದಾಗಿ ಈ ವೈರಸ್‌ ಹಲವು ದೇಶಗಳಲ್ಲಿ ಹಬ್ಬಿತ್ತು. ಆಗ ಇದನ್ನು ಮಿದುಳು ಸ್ರಾವ ಜ್ವರ ಎಂದು ಕರೆಯಲಾಗುತ್ತಿತ್ತು. 1976ರಲ್ಲಿ ಕಾಂಗೋದ ಎಬೋಲಾ ನದಿ ತೀರದ ಪ್ರದೇಶದಲ್ಲಿ ಇದು ತಲ್ಲಣ ಸೃಷ್ಟಿಸಿ ಅಸಂಖ್ಯ ಜೀವಗಳನ್ನು ಬಲಿ ಪಡೆದು ಎಬೋಲಾ ವೈರಸ್‌ ಎಂದಾಯಿತು. 2014ರಲ್ಲಿ ಪುನಃ ಪಶ್ಚಿಮ ಆಫ್ರಿಕಾದಲ್ಲಿ ಈ ವೈರಸ್‌ ಕಾಣಿಸಿಕೊಂಡಿತ್ತು. ಆ ಸಮಯದಲ್ಲಿ ಸೋಂಕಿತರ ಪೈಕಿ ಶೇ. 50ರಷ್ಟು ಮಂದಿ ಮೃತರಾದರೆ, ಸುಡಾನ್‌ನಲ್ಲಿ ಶೇ.70ರನ್ನು ಇದು ಸಾವಿನ ಬಾಯಿಗೆ ದೂಕಿತ್ತು. ವಿಶ್ವ 1976- 2016ರ ನಡುವಿನ ಅವಧಿಯಲ್ಲಿ ವಿಶ್ವದಾದ್ಯಂತ 28,646 ಜನರಿಗೆ ಈ ಸೋಂಕು ಹರಡಿಸಿದ್ದರೆ, 11,323 ಜನ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಂಸ್ಥೆಯ ವರದಿ ಹೇಳುತ್ತದೆ.

    ನಿಫಾ ವೈರಸ್‌: 2018ರಲ್ಲಿ ತಲ್ಲಣ ಸೃಷ್ಟಿಸಿದ್ದ ನಿಫಾ ವೈರಸ್‌ ಶುರುವಾದದ್ದು ಕೇರಳದಲ್ಲಿ. ಬಾವಲಿ ಕಚ್ಚಿದ ಹಣ್ಣುಗಳು ಮಾನವನ ಸಂಪರ್ಕಕ್ಕೆ ಬಂದಾಗ ಈ ಸೋಂಕು ತಗಲುತ್ತದೆ. 2018ರಲ್ಲಿ ಈ ವೈರಸ್‌ ಪೀಡಿತರಾದವರು ಸುಮಾರು 700 ಮಂದಿ. 17 ಜನರು ಮೃತಪಟ್ಟಿದ್ದರು.

    ಡೆಂಘೆ ವೈರಸ್‌: ಫಿಲಿಪ್ಪೀನ್ಸ್‌ ಮತ್ತು ಥಾಯ್ಲೆಂಡ್‌ನಲ್ಲಿ 1950ರ ದಶಕದಲ್ಲಿ ಹುಟ್ಟಿದ ಡೆಂಘೆ ಎಲ್ಲರಿಗೂ ತೀರಾ ಪರಿಚಿತ ವೈರಸ್‌. ಇದು ಮೇಲಿಂದ ಮೇಲೆ ಕಾಣಿಸಿಕೊಂಡು ಆತಂಕ ಸೃಷ್ಟಿ ಮಾಡುತ್ತಲೇ ಇದೆ. ಈ ವೈರಸ್‌ಗೆ ಮುಖ್ಯ ಕಾರಣ ಸೊಳ್ಳೆ. ಪ್ರತಿ ವರ್ಷ ಜಗತ್ತಿನಾದ್ಯಂತ 5 ರಿಂದ 10 ಕೋಟಿ ಜನರು ಡೆಂಗೆ ಸೋಂಕುಪಿಡೀತರಾಗುತ್ತಾರೆ. ಭಾರತದಲ್ಲಿ ಪ್ರತಿವರ್ಷ ಕನಿಷ್ಠ 10 ಸಾವಿರ ಜನರು ಇದಕ್ಕೆ ಬಲಿಯಾಗುತ್ತಿದ್ದಾರೆ ಎಂದಿದೆ ವಿಶ್ವ ಆರೋಗ್ಯ ಸಂಸ್ಥೆ. ಸೋಂಕು ಪೀಡಿತರ ಪೈಕಿ, ಮರಣದ ಪ್ರಮಾಣ ಶೇ.2.5ರಷ್ಟು ಮಾತ್ರ ಇದ್ದರೂ, ಸೋಂಕಿತರು ಯಾವುದೇ ಕಾರಣಕ್ಕೆ ನಿರ್ಲಕ್ಷ್ಯ ತೋರುವಂತಿಲ್ಲ.

    ಎಚ್1ಎನ್1 (ಹಂದಿ ಜ್ವರ) ವೈರಸ್‌: ಹಂದಿಯಿಂದ ಬರುವ ಎಚ್‌1ಎನ್‌1 ಹೆಸರು ಕೂಡ ಆಗಾಗ್ಗೆ ಗುಲ್ಲು ಎಬ್ಬಿಸುತ್ತಲೇ ಇರುತ್ತದೆ. ಇದರ ಸೋಂಕು ಒಮ್ಮೆ ದೇಹದಲ್ಲಿ ಕಾಣಿಸಿಕೊಂಡರೆ ಮರಣ ಪ್ರಮಾಣ ಹೆಚ್ಚೇ ಎನ್ನಲಾಗುತ್ತದೆ. ಸೋಂಕು ತಗುಲಿದ ವ್ಯಕ್ತಿಗೆ. ವಿಪರೀತ ಜ್ವರ ಬಂದು, ಉಸಿರಾಟಕ್ಕೂ ತೊಂದರೆ ಆಗಿ ಸಾಯುವುದು ಇದರ ಭೀಕರತೆಯನ್ನು ತೋರಿಸುತ್ತದೆ. ಈ ರೋಗ ಮೊದಲು ಕಾಣಿಸಿಕೊಂಡದ್ದು ಮೆಕ್ಸಿಕೋದಲ್ಲಿ 2009ರಲ್ಲಿ. ಈ ಹತ್ತು ವರ್ಷಗಳಲ್ಲಿ ಇದು ಅನೇಕ ದೇಶಗಳನ್ನು ವ್ಯಾಪಿಸಿದ್ದು, ಇದರಿಂದ ಸತ್ತವರ ಸಂಖ್ಯೆ 5.76 ಲಕ್ಷ ಎಂದಿದೆ ವರದಿ, ಆದ್ದರಿಂದಲೇ ಇದನ್ನು ‘ಮಾರಣಾಂತಿಕ ವೈರಸ್’ ಎಂದು ಘೋಷಿಸಲಾಗಿದೆ. ಇದು ಮೊದಲು ಭಾರತಕ್ಕೆ ಕಾಲಿಟ್ಟಿದ್ದು, 2010ರಲ್ಲಿ. ಆಗ 660 ಮಂದಿಯನ್ನು ಬಲಿ ಪಡೆದಿದ್ದ ಡೆಂಘೆ, 2015ರಲ್ಲಿ ಕೂಡ ಸಾಕಷ್ಟು ಆತಂಕ ಸೃಷ್ಟಿಸಿತ್ತು.

    ಎಚ್‌ಐವಿ ವೈರಸ್‌: ಕಳೆದೊಂದು ದಶಕದಲ್ಲಿ ಎಚ್‌ಐವಿ ವೈರಸ್‌ ಭಾರತದಲ್ಲಿ ಅಲ್ಲೋಲ ಕಲ್ಲೋಲ ಉಂಟು ಮಾಡಿದೆ. 1980ರಲ್ಲಿ ಕಾಂಗೋದಲ್ಲಿ ಕಾಣಿಸಿಕೊಂಡ ಈ ವೈರಸ್‌, ಇದೀಗ ಪ್ರಪಂಚಾದ್ಯಂತ ನಿರಾತಂಕವಾಗಿ ಹರಿದಾಡುತ್ತಿದೆ. ಇಲ್ಲಿಯವರೆಗೆ ವಿಶ್ವದಾದ್ಯಂತ ಸುಮಾರು 3.7 ಕೋಟಿ ಜನರನ್ನು ಬಲಿ ಪಡೆದಿದೆ. ಮೂವರೂವರೆ ಕೋಟಿಗೂ ಅಧಿಕ ಮಂದಿ ಎಚ್‌ಐವಿ ಪೀಡಿತರಿದ್ದಾರೆ. ಆಫ್ರಿಕಾದಲ್ಲಿ 20 ಮಂದಿ ಯುವಕ/ಯುವತಿಯ ಪೈಕಿ ಒಬ್ಬರು ಎಚ್‌ಐವಿ ಬಾಧಿತರಾಗುತ್ತಿದ್ದಾರೆ. ಭಾರತದಲ್ಲಿ 1.2 ಲಕ್ಷ ಮಕ್ಕಳಲ್ಲಿ ಈ ಸೋಂಕು ಇರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

    ಸಿಡುಬು ವೈರಸ್‌: ಸಿಡುಬು ಈಗೇನೂ ಅಂಥ ಭಯಾನಕತೆಯನ್ನು ಸೃಷ್ಟಿಸುತ್ತಿಲ್ಲವಾದರೂ 80ರ ದಶಕಕ್ಕಿಂತ ಮುಂಚೆ ಇದು ಮರಣಮೃದಂಗವನ್ನೇ ಬಾರಿಸಿತ್ತು. ಮೂವರ ಪೈಕಿ ಒಬ್ಬರನ್ನು ಸಾವಿನ ಬಾಯಿಗೆ ನೂಕಿತ್ತು ಈ ಮಹಾಮಾರಿ. ಸುಮಾರು 30 ಕೋಟಿ ಜನರು ಇದರಿಂದ ಜೀವ ಕಳೆದುಕೊಂಡಿದ್ದರು. (ಏಜೆನ್ಸೀಸ್​)

    ಲಾಕ್‌ಡೌನ್‌ ಲಕ್ಷ್ಮಣ ರೇಖೆಯನ್ನು ದಾಟುವಿರಾ?- ಕಾನೂನು ಸಂಕಷ್ಟದ ಸುಳಿಗೆ ಬೀಳುವುದು ಖಚಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts