More

    3 ತಿಂಗಳ ಹಿಂದೆ ಹೂತಿಟ್ಟ ಶವ ಇಂದು ಹೊರಕ್ಕೆ, ಶವದ ಮೇಲಿತ್ತು 4 ಉಂಗುರ: ಈ ‘ದೃಶ್ಯ’ಕ್ಕೆ ಕೊನೆಗೂ ಕ್ಲೈಮ್ಯಾಕ್ಸ್​..

    ಬೆಂಗಳೂರು: ಆ ಶವವನ್ನು ಮೂರು ತಿಂಗಳ ಹಿಂದೆ ಹೂತಿಡಲಾಗಿತ್ತು. ಇಂದು ಸಂಬಂಧಿಕರೂ ಸೇರಿ ಹಲವರು ಅದನ್ನು ಮತ್ತೆ ಕಾಣುವಂತಾಗಿದೆ. ಅಂದು ಕ್ರೇಜಿಸ್ಟಾರ್​ ರವಿಚಂದ್ರನ್​ ಅಭಿನಯದ ‘ದೃಶ್ಯ’ ಸಿನಿಮಾದ ದೃಶ್ಯವನ್ನು ನೆನಪಿಸುವಂತೆಯೇ ನಡೆದ ಕೊಲೆ ಪ್ರಕರಣಕ್ಕೆ ಇಂದು ಈ ‘ದೃಶ್ಯ’ ಕ್ಲೈಮ್ಯಾಕ್ಸ್ ಕಾಣುವಂತೆ ಮಾಡಿದೆ.

    ಮೂರು ತಿಂಗಳ ಹಿಂದೆ ಕೊಲೆಯಾಗಿದ್ದ, ಕಾಡುಗೋಡಿಯ ಕಾಶಿ ವಿಶ್ವೇಶ್ವರಸ್ವಾಮಿ ದೇವಸ್ಥಾನದ ಅರ್ಚಕ ನೀಲಕಂಠ ದೀಕ್ಷಿತ್ ಅಲಿಯಾಸ್ ದೊರೆ (57) ಅವರ ಶವವನ್ನು ತಹಸೀಲ್ದಾರ್ ಸಮುಖದಲ್ಲಿ ಗುರುವಾರ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಯಿತು. ದೀಕ್ಷಿತ್ ಸೆ.5ರಂದು ಕಾಣೆಯಾಗಿದ್ದರು. ಅರ್ಚಕರಿಂದ 10 ಲಕ್ಷ ರೂ. ಸಾಲ ಪಡೆದಿದ್ದ ಹಾರ್ಡ್‌ವೇರ್ ಅಂಗಡಿ ಮಾಲೀಕ ಮಂಜುನಾಥ್, ತನ್ನ ಸಹಚರರ ಜತೆ ಸೇರಿ ನೀಲಕಂಠ ದೀಕ್ಷಿತ್‌ರನ್ನು ಹತ್ಯೆ ಮಾಡಿ ಶವವನ್ನು ಹೂತಿಟ್ಟಿರುವ ಕೃತ್ಯ ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿತ್ತು. ಆರೋಪಿಗಳ ಹೇಳಿಕೆ ಆಧರಿಸಿ ಶವ ಹೂತಿಟ್ಟ ಜಾಗ ಪತ್ತೆಹಚ್ಚಿದ ಪೊಲೀಸರು ಬೆಂಗಳೂರು ಪೂರ್ವ ತಾಲೂಕಿನ ತಹಸೀಲ್ದಾರ್ ಎಸ್. ಅಜಿತ್ ಕುಮಾರ್ ರೈ ಸಮುಖದಲ್ಲಿ ಮೃತದೇಹವನ್ನು ಹೊರತೆಗೆದರು. ಸ್ಥಳದಲ್ಲಿಯೇ ಸರ್ಕಾರಿ ವೈದ್ಯರಿಂದ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಶವದ ಮೇಲಿನ 4 ಉಂಗುರ, ಜನಿವಾರ ಗುರುತಿನ ಆಧಾರದ ಮೇಲೆ ನೀಲಕಂಠ ದೀಕ್ಷಿತ್ ಎಂಬುದು ಕುಟುಂಬ ಸದಸ್ಯರು ದೃಢಪಡಿಸಿದರು. ಆನಂತರ ಶವವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ: ‘ದೃಶ್ಯ’ ಸಿನಿಮಾ ಕಥೆ ನೆನಪಿಸಿತು ಅರ್ಚಕರ ಕೊಲೆ ರಹಸ್ಯ; ಕ್ಲೈಮ್ಯಾಕ್ಸ್​ನತ್ತ ತನಿಖೆ… 

    ಕಾಡುಗೋಡಿ ಯಲ್ಲಾ ರೆಡ್ಡಿ ಸರ್ಕಲ್‌ನಲ್ಲಿನ ಹಾರ್ಡ್‌ವೇರ್ ಅಂಗಡಿ ಮಾಲೀಕ ಮಂಜುನಾಥ್, 2 ವರ್ಷಗಳ ಹಿಂದೆ ನೀಲಕಂಠ ದೀಕ್ಷಿತ್ ಬಳಿ 10 ಲಕ್ಷ ರೂ. ಬಡ್ಡಿಗೆ ಸಾಲ ಪಡೆದಿದ್ದ. ಸೆ.5ರ ರಾತ್ರಿ ಸಾಲದ ಹಣ ಕೇಳಲು ಅಂಗಡಿ ಬಳಿಗೆ ದೀಕ್ಷಿತ್ ಹೋದಾಗ, ಹಣ ಕೊಡುವುದಾಗಿ ಹೇಳಿ ಒಳಗೆ ಕರೆದ ಮಂಜುನಾಥ್, ಕ್ರಿಕೆಟ್ ವಿಕೆಟ್‌ನಿಂದ ತಲೆಗೆ ಹೊಡೆದು ಚಾಕುವಿನಿಂದ ಚುಚ್ಚಿ ಅರ್ಚಕರನ್ನು ಹತ್ಯೆ ಮಾಡಿದ್ದ. ಅಂಗಡಿಯಲ್ಲಿದ್ದ ನೌಕರರಾದ ಗೋಪಿ ಮತ್ತು ಮಂಜುನಾಥ್ ಪ್ರಶ್ನಿಸಿದಾಗ ಹಣದ ಆಮಿಷವೊಡ್ಡಿ ಬಾಯಿ ಮುಚ್ಚಿಸಿದ್ದರು. ಆನಂತರ ಶವವನ್ನು ಅಂಗಡಿಯಲ್ಲಿಯೇ ಎರಡು ದಿನ ಇಟ್ಟುಕೊಂಡು ಟರ್ಪಂಟೈನ್​ ಆಯಿಲ್‌ನಿಂದ ರಕ್ತದ ಕಲೆ ತೊಳೆದಿದ್ದರು. ಆನಂತರ ಶವವನ್ನು ಕಾರಿನಲ್ಲಿ ತಿರುಮಲಶೆಟ್ಟಿ ಕ್ರಾಸ್‌ನಲ್ಲಿ ಇರುವ ತಮ್ಮ ಕಲ್ಯಾಣ ಮಂಟಪದ ಹಿಂಭಾಗದ ಸರ್ಕಾರಿ ಜಾಗದಲ್ಲಿ ಕಸ ವಿಂಗಡಣೆ ಘಟಕ ನಿರ್ಮಾಣಕ್ಕೆ ಪಾಯ ತೋಡಲಾಗಿತ್ತು. ಪಕ್ಕದಲ್ಲಿ ಮಣ್ಣು ತೆಗೆದು ಶವ ಹೂತಿಟ್ಟು ಬಂದಿದ್ದರು. ಇದೀಗ ತಹಸೀಲ್ದಾರ್ ಸಮ್ಮುಖದಲ್ಲಿ ಶವ ಹೊರತೆಗೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸುಳಿವು ನೀಡಿತ್ತು ದುಂದುವೆಚ್ಚ
    ನೀಲಕಂಠ ದೀಕ್ಷಿತ್ ಕಣ್ಮರೆ ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ಮೊದಲು ಅರ್ಚಕರ ಬಳಿ ಸಾಲ ಪಡೆದಿದ್ದವರ ವಿಚಾರಣೆ ನಡೆಸಿದಾಗ ಎಲ್ಲರೂ ಮಾಜಿ ಕಾರ್ಪೋರೇಟರ್ ಆಂಜನೇಯ ರೆಡ್ಡಿ ಮೂಲಕ ಸರಿಯಾದ ಸಮಯಕ್ಕೆ ಬಡ್ಡಿ ಕೊಡುತ್ತಿದ್ದಾಗಿ ಹೇಳಿದ್ದರು. ಆದರೆ, ಮಂಜುನಾಥ್ ಮಾತ್ರ ಅಸಲು ಬಡ್ಡಿ ಕೊಟ್ಟಿರುವುದು ಸಮರ್ಥನೆ ಮಾಡಿಕೊಳ್ಳುತ್ತಿದ್ದ. ಪೊಲೀಸರಿಗೆ ಅನುಮಾನ ಕಾಡಿತು. ಜತೆಗೆ ಕೃತ್ಯಕ್ಕೆ ಸಹಾಯ ಮಾಡಿದ ಅಂಗಡಿ ನೌಕರನಿಗೆ ದ್ವಿಚಕ್ರ ವಾಹನ ಕೊಡಿಸಿದ್ದ, ಮತ್ತಿಬ್ಬರಿಗೆ ಆಗಾಗ್ಗೆ ದುಡ್ಡು ಕೊಡುತ್ತಿದ್ದ. ಅಂಗಡಿಗಳಲ್ಲಿ ಕೆಲಸಕ್ಕಿರುವ ಹುಡುಗರು ದುಂದು ವೆಚ್ಚ ನೋಡಿದ ಪೊಲೀಸರು, ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರಬಂದಿದೆ.

    ಅಂಬೆಗಾಲಿಡುವಾಗ್ಲೇ ಸಪ್ತಪದಿ ತುಳಿದಿದ್ಲು; ಈಗ ಮದ್ವೆ ಆಗೋ ವಯಸ್ಸಲ್ಲೀಕೆ ವೈವಾಹಿಕ ಬಂಧನದಿಂದ ಮುಕ್ತಮುಕ್ತ..

    ಇವರಿಬ್ಬರು ಸಿಕ್ಕಿ ಬೀಳದಿದ್ದರೆ ವರ್ಷಾಂತ್ಯದ ಮಧ್ಯರಾತ್ರಿ ಅದೇನಾಗಿರುತ್ತಿತ್ತೋ!?

    ನೀವು ಬೈಕ್​ ಫುಲ್​ ಟ್ಯಾಂಕ್​ ಮಾಡಿಸಿದ್ದರಂತೂ ಇವರಿಗೆ ಫುಲ್​ ಖುಷಿ.. ಮಾಡಿರದಿದ್ದರೆ ಕೂಡ; ಕೊನೆಗೂ ಸಿಕ್ಕಿಬಿದ್ದರು..

    ಮದುವೆ ದಿನವೇ ಮುಟ್ಟಾಗಿದ್ದಳಾಕೆ : ಡಿವೋರ್ಸ್​ಗೆ ಅದುವೇ ಕಾರಣವಾಯ್ತಾ?

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts