More

    ಸರ್ಕಾರಿ ಶಾಲೆಗಳ ಸಬಲೀಕರಣ ಇಂದಿನ ಅಗತ್ಯ: ಡಿಡಿಪಿಐ ಎಂ.ಎ ರಡ್ಡೇರ್​

    ವಿಜಯವಾಣಿ ಸುದ್ದಿಜಾಲ ಗದಗ
    ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಪ್ರಸಕ್ತ ಶೈಣಿಕ ಮುನ್ನೋಟ ಎಂಬ ಶೈಣಿಕ ಚಟುವಟಿಕೆಗಳ ಕುರಿತು ಶುಕ್ರವಾರ ಕಾರ್ಯಾಗಾರ ಏರ್ಪಡಿಸಲಾಗಿತ್ತು.
    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಿಡಿಪಿಐ ಎಂ.ಎ ರಡ್ಡೇರ್​, ಸರ್ಕಾರಿ ಶಾಲೆಗಳ ಸಬಲೀಕರಣಕ್ಕಾಗಿ ಇರುವ ಅವಕಾಶಗಳನ್ನು ಆದ್ಯತೆಗಳ ಮೇರೆಗೆ ಬಳಸಿಕೊಂಡು ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ಸರ್ವ ರೀತಿಯಿಂದಲೂ ಉನ್ನತಿಕರಿಸಲು ಮುಖ್ಯೋಪಾಧ್ಯಾಯರು ಶ್ರಮ ವಹಿಸಬೇಕು ಎಂದರು.
    ಶಹರಶಿಕ್ಷಣಾಧಿಕಾರಿ ಆರ್​. ಎಸ್​. ಬುರಡಿ ಮಾತನಾಡಿ, ಪ್ರಾಥಮಿಕ ಶಾಲೆಗಳನ್ನು ಸಬಲೀಕರಣಗೊಳಿಸಲು ಇರುವ ಅವಕಾಶಗಳ ಸಮರ್ತವಾಗಿ ಬಳಸಿಕೊಳ್ಳಬೇಕು. ಮುಖ್ಯೋಪಾಧ್ಯಾಯರು ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸುವ ಪ್ರಯತ್ನವಾಗಬೇಕು. ಮಕ್ಕಳ ಹಾಜರಾತಿ, ಪ್ರತಿ ಶಾಲೆಯಲ್ಲಿ ಉತ್ತಮ ಕಲಿಕಾ ವಾತಾವರಣ ನಿರ್ಮಾಣ, ಮಗು ಕೇಂದ್ರೀತ ಬೋಧನೆ ಹಾಗೂ ನಾವಿನ್ಯಯುತ ಚಟುವಟಿಕೆಗಳ ಮೂಲಕ ಇನ್ನಷ್ಟು ಪರಿಣಾಮಕಾರಿ ಆಗಿರುವ ಕಲಿಕಾ ವಾತಾವರಣದಲ್ಲಿ ಪ್ರತಿ ಮಗುವಿನ ಕೃತಿ ಸಂಪುಟವನ್ನು ನಿಖರವಾದ ದಾಖಲೆಗಳೊಂದಿಗೆ ನಿರ್ವಹಿಸಬೇಕು. ಪ್ರತಿ ಶಾಲಾ ಹಂತದಲ್ಲಿ ಶಿಕರು ಇದುವರೆಗಿನ ಪ್ರಯತ್ನಗಳ ಜೊತೆಗೆ ಶಾಲೆಯೊಳಗಿನ ಹಾಗೂ ಹೊರಗಿನ ಕಲಿಕಾ ವಾತವರಣ ಪರಿಣಾಮಕಾರಿ ಆದ, ಪೂರ್ವಸಿದ್ದತೆಯಿಂದ ಕೂಡಿದ ನವೀನ ಚಟುವಟಿಕೆಯುಳ್ಳ ಕಲಿಕಾ ಪ್ರಯತ್ನಗಳನ್ನು ಮಾಡಬೇಕು. ವ್ಯಾಪಕ ಮೌಲ್ಯಮಾಪನದೊಂದಿಗೆ ಸಮುದಾಯದ ಸಹಭಾಗಿತ್ವ ಹಾಗೂ ಇಲಾಖೆಯ ಶೈಣಿಕ ಬೆಂಬಲ ವ್ಯವಸ್ಥೆಯ ರ್ಪೂಣ ಸಹಕಾರ ಪಡೆದು ಹಂತ ಹಂತವಾಗಿ ಸರ್ಕಾರಿ ಶಾಲೆಗಳನ್ನು ಸಬಲೀಕರಣ ಗೊಳಿಸಬಹುದು ಎಂದರು ಬುರಡಿ ಹೇಳಿದರು.
    ಪ್ರಾಥಮಿಕ ಶಾಲಾ ಶಿಕ್ಷಣ ಸಂದ ಅಧ್ಯೆ ಎಸ್​. ಕೆ. ಮಂಗಳಗುಡ್ಡ ಮಾತನಾಡಿ, ಎಲ್ಲ ಮುಖ್ಯ ಶಿಕರಿಗೆ ಒಂದು ದಿನಚರಿ ಪುಸ್ತಕ ನೀಡುವುದರ ಜೊತೆಗೆ ಇಲಾಖೆ ಹಾಗೂ ಶಿಕರ ಸಂದ ಮಧ್ಯ ಶೈಣಿಕ ಸಮನ್ವಯತೆ ಸದಾಕಾಲ ಇರುತ್ತದೆ ಎಂದು ತಿಳಿಸಿದರು.
    ಆರ್​. ಬಿ. ಸಂಕಣ್ಣವರ, ಎಂ. ಎಚ್​. ಕಂಬಳಿ, ಎಚ್​. ಎ. ಾರೂಖಿ ಹಲವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts