More

    video/ ಕರೊನಾ ಸೋಂಕಿತ ಪೊಲೀಸರಿಗೆ ಆತ್ಮಸ್ಥೈರ್ಯ ತುಂಬಿದ ಡಿಸಿಪಿ

    ಬೆಂಗಳೂರು: ಕರೊನಾ ಸೋಂಕು ಪಾಸಿಟಿವ್ ವರದಿ ಬಂದ ಹಿನ್ನೆಲೆಯಲ್ಲಿ ಚಿಕಿತ್ಸೆಗೆ ತೆರಳುತ್ತಿದ್ದ ಸಂಜಯನಗರ ಮತ್ತು ಜೆ‌.ಸಿ. ನಗರ ಠಾಣೆಯ ಸಿಬ್ಬಂದಿ ಜತೆ ಉತ್ತರ ವಿಭಾಗದ ಡಿಸಿಪಿ ಎನ್. ಶಶಿಕುಮಾರ್ ನೇರವಾಗಿ ಮಾತನಾಡಿ ಆತ್ಮಸ್ಥೈರ್ಯ ತುಂಬಿರುವ ವಿಡಿಯೋ ವೈರಲ್ ಆಗಿದೆ.

    ಕರೊನಾ ಟೆಸ್ಟ್ ಮಾಡಿಸಿದ್ದರಿಂದ ನಿಮಗೆಲ್ಲ ಪಾಸಿಟಿವ್ ಇರುವುದು ಗೊತ್ತಾಗಿದೆ. ಇಲ್ಲವಾದರೆ ಸೋಂಕು ತಗುಲಿರುವುದೇ ಗೊತ್ತಾಗುತ್ತಿರಲಿಲ್ಲ. ಆತಂಕಪಡದೆ ಧೈರ್ಯವಾಗಿದ್ದುಕೊಂಡು ಚಿಕಿತ್ಸೆ ಪಡೆಯಿರಿ ಎಂದು ಹೇಳಿದ್ದಾರೆ. ಇದನ್ನೂ ಓದಿರಿ  ಐವರ ಕೊಲೆಗೆ ಕಾರಣವಾಯ್ತು ಒಂದು ಲವ್​ ಸ್ಟೋರಿ!

    ಮೂರು ತಿಂಗಳಿಂದ ನಿರಂತರವಾಗಿ ಸಾರ್ವಜನಿಕರ ಜತೆ ನೇರ ಸಂಪರ್ಕದಲ್ಲಿದ್ದು ಕೆಲಸ ಮಾಡಿದ್ದೇವೆ. ವಲಸಿಗರನ್ನು ಊರಿಗೆ ಕಳುಹಿಸುವುದು, ಬಂದೋಬಸ್ತ್ ಡ್ಯೂಟಿ ಸೇರಿ ಮುಂತಾದ ಕೆಲಸಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿದ್ದೇವೆ. ಮುಂಜಾಗ್ರತೆ ವಹಿಸಿದ್ದರೂ ಸೋಂಕು ತಗುಲುತ್ತಿದೆ. ಆರೋಗ್ಯ ತಜ್ಞರು ಹೇಳುವ ಪ್ರಕಾರ ಬಹುತೇಕರಿಗೆ ಸೋಂಕು ಬಂದು ಹೋಗಿದೆ. ಯುವ ವಯಸ್ಸಿನವರು ಆಗಿರುವುದರಿಂದ ಏನು ಆಗುವುದಿಲ್ಲ. ಶೀಘ್ರವಾಗಿ ಗುಣಮುಖರಾಗುತ್ತೀರಿ. ನಿಮ್ಮ ಹಾಗೂ ಕುಟುಂಬದ ಜತೆ ಇಲಾಖೆ ಇದೆ. ನಿಮಗೆ ಏನೇ ಸಮಸ್ಯೆಯಾದರೂ ಹಿರಿಯ ಅಧಿಕಾರಿಗಳ ಗಮನಕ್ಕೆ ತನ್ನಿ ಎಂದು ಹೇಳುತ್ತಾ ಚಪ್ಪಾಳೆ ತಟ್ಟಿ ಆಸ್ಪತ್ರೆಗೆ ಕಳುಹಿಸಿರುವುದು ವಿಡಿಯೋದಲ್ಲಿದೆ.

    ಆತ್ಮಸ್ಥೈರ್ಯ ತುಂಬಿದ ಡಿಸಿಪಿ

    ಆತ್ಮಸ್ಥೈರ್ಯ ತುಂಬಿದ ಡಿಸಿಪಿಇದು ಕರೊನಾ ಸೋಂಕಿತ ಪೊಲೀಸ್​ ಸಿಬ್ಬಂದಿಗೆ ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಎನ್. ಶಶಿಕುಮಾರ್ ಅವರು ಆತ್ಮಸ್ಥೈರ್ಯ ತುಂಬುತ್ತಿರುವ ವಿಡಿಯೋ. ಸಂಜಯನಗರ ಮತ್ತು ಜೆ‌.ಸಿ. ನಗರ ಪೊಲೀಸ್​ ಠಾಣೆಯ ಸಿಬ್ಬಂದಿ ಸೋಂಕು ಪತ್ತೆಯಾಗಿದ್ದು, ಅವರನ್ನು ಚಿಕಿತ್ಸೆಗೆ ಕಳಿಸುವ ಮುನ್ನ ಖುದ್ದು ಭೇಟಿಯಾದ ಡಿಸಿಪಿ, ಶೀಘ್ರ ಗುಣಮುಖರಾಗುವಂತೆ ಆಶಿಸುತ್ತ ಚಪ್ಪಾಳೆ ತಟ್ಟಿ ಆಸ್ಪತ್ರೆಗೆ ಕಳುಹಿಸಿದರು. #DCP #Police #Corona

    Posted by Vijayavani on Saturday, July 11, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts