More

    ವಂಚಕ ಪ್ರವೀಣ ಪತ್ರಿಗೆ ಸುಪ್ರೀಂಕೋರ್ಟ ಜಾಮೀನು

    ಬಾಗಲಕೋಟೆ: ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿ ೧೨ ಕೋಟಿ ರೂ. ವಂಚನೆ ಮಾಡಿ ತೆಲೆ ಮರಿಸಿಕೊಂಡಿದ್ದ ಜವಾನ ಪ್ರವೀಣ ಪತ್ರಿಗೆ ಸುಪ್ರೀಂಕೋರ್ಟನಲ್ಲಿ ಜಾಮೀನು ಸಿಕ್ಕಿದೆ. ಇದೇ ಸಂದರ್ಭದಲ್ಲಿ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಸಹಕಾರ ಇಲಾಖೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ.
    ಪ್ರವೀಣ ಪತ್ರಿ ಡಿಸಿಸಿ ಬ್ಯಾಂಕ್ ಶಾಖೆಗಳಾದ ಅಮೀನಗಡ,ಕಮತಗಿ,ಗುಡೂರುನಲ್ಲಿ ಜವಾನ ಅಂತ ಕೆಲಸ ಮಾಡುತ್ತಿದ್ದ. ಆಯಾ ಶಾಖೆಗಳ ಬ್ಯಾಂಕ್ ಮ್ಯಾನೇಜರ ಹಾಗೂ ಸಿಬ್ಬಂದಿ ಐಡಿ ಬಳಸಿ ಹಣ ತನ್ನ ಹಾಗೂ ಇತರರ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದನು. ಅಂದಾಜು ಎಫ್ಡಿ ಮೇಲಿನ ಬಡ್ಡಿ ಹಣ ೧೨ ಕೋಟಿ ವಂಚನೆ ಮಾಡಿದ್ದನು. ಈ ಪ್ರಕರಣ ತೀವ್ರ ಸಂಚಲನ ಮೂಡಿಸಿತ್ತು.
    ದುರ್ಬಳಕೆ ಮಾಡಿಕೊಂಡಿದ್ದ ಹಣದಿಂದ ಸಿನಿಮಾ, ಅಲ್ಬಮ್ ಸಾಂಗ್, ನಾಟಕ, ಯುವಕರ ಪಡೆ ಕಟ್ಟಿಕೊಂಡು ಪುಲ್ ಹವಾ ಕ್ರಿಯೇಟ್ ಮಾಡಿಕೊಳ್ಳುತ್ತಿದ್ದ. ಅಲ್ಲದೆ ಹೆಲಿಕಾಪ್ಟರ ಓಡಾಟ,ಮೋಜು ಮಸ್ತಿ, ವಿದ್ಯಾರ್ಥಿಗಳಿಗೆ, ಜಾತ್ರೆಗಳಿಗೆ ಪುಕಟ್ಟೆ ಹಣ ದಾನ ಮಾಡಿ ಬಿಲ್ಡಪ್ ಪಡೆಯುತ್ತಿದ್ದ. ಜ್ಯುನಿಯರ್ ರಘು ದಿಕ್ಷಿತ್ ಅಂತ ಗಿಟಾರ ಹಿಡಿದು ಪೋಜು ಕೊಡುತ್ತಿದ್ದನು. ಜವಾನನಾಗಿದ್ದ ವೇಳೆ ಆಯಾ ಬ್ಯಾಂಕ್ ಮ್ಯಾನೇಜರ ಐಡಿ ಬಳಸಿ ವಂಚನೆ ಮಾಡಿದ್ದನು. ಬಾಗಲಕೋಟೆ ಸಿಇಎನ್ ಠಾಣೆಯಲ್ಲಿ ಮೊದಲು ಡಿಸಿಸಿ ಬ್ಯಾಂಕ್‌ನಿಂದ ದೂರು ದಾಖಲಾಗಿತ್ತು. ಠಾಣೆಯಲ್ಲಿ ಪ್ರಕರಣ ದಾಖಲು ಆಗುತ್ತಿದ್ದಂತೆ ಪ್ರವೀಣ ಪತ್ರಿ ತೆಲೆ ಮರಿಸಿಕೊಂಡಿದ್ದನು.
    ನಂತರ ಬಾಗಲಕೋಟೆ ಸಿಇಎನ್ ಠಾಣೆಯಿಂದ ಸಿಐಡಿಗೆ ಪ್ರಕರಣ ವರ್ಗಾವಣೆ ಆಗಿತ್ತು. ವಿಚಾರಣೆ ಹಂತದಲ್ಲಿತ್ತು. ಪ್ರವೀಣ ಪತ್ರಿ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದರು ಸಿಕ್ಕಿಬಿದ್ದಿರಲಿಲ್ಲ. ಜಾಮೀನಿಗಾಗಿ ಧಾರವಾಡ ಹೈಕೋರ್ಟಗೆ ಹೋಗಿದ್ದನು, ಆದರೇ ಹೈಕೋರ್ಟನಿಂದ ಜಾಮೀನು ಸಿಕ್ಕಿರಲಿಲ್ಲ. ಹೀಗಾಗಿ ಸುಪ್ರೀಂ ಕೋರ್ಟಗೆ ಪ್ರವೀಣ ಪತ್ರಿ ಮೊರೆ ಹೋಗಿದ್ದ. ನ.೧೦ ರಂದು ಸುಪ್ರೀಂ ಕೋರ್ಟನ ದ್ವಿಸದಸ್ಯ ಪೀಠವು ಜಾಮೀನು ನೀಡಿದೆ. ಮುಂದಿನ ಆದೇಶದವರೆಗೂ ಪ್ರವೀಣ ಪತ್ರಿಗೆ ಬಾಧಕವಾಗುವಂತಹ ಯಾವುದೇ ಕ್ರಮ ಕೈಗೊಳ್ಳುವಂತಿಲ್ಲ. ಪ್ರವೀಣ ಪತ್ರಿ ಕೂಡ ತನಿಖೆಗೆ ಎಲ್ಲ ರೀತಿಯಿಂದಲೂ ಸಹಕರಿಸಲು ಸೂಚನೆ ನೀಡಿದೆ. ಇನ್ನು ಬಾಗಲಕೋಟೆ ಡಿಸಿಸಿ ಬ್ಯಾಂಕ್‌ನ ಜವಾನ ಪ್ರವೀಣ ಪತ್ರಿ ಹಣ ದುರುಪಯೋಗ ಪ್ರಕರಣ ಏಳು ಕೋಟಿ ರೂ. ಅಧಿಕವಾಗಿದ್ದರಿಂದ ಇದನ್ನು ಸಿಬಿಐಗೆ ವಹಿಸುವಂತೆ ರಾಜ್ಯ ಸರ್ಕಾರಕ್ಕೆ ಸಹಕಾರ ಇಲಾಖೆಯಿಂದ ಪತ್ರ ಬರೆಯಲಾಗಿದೆ. ತನ್ಮೂಲಕ ಮುಂದಿನ ದಿನಗಳಲ್ಲಿ ಪ್ರಕರಣ ಯಾವ ರೀತಿಯಾಗಿ ತಿರುವು ತೆಗೆದುಕೊಳ್ಳಲಿದೆ ಕಾದು ನೋಡಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts