More

    ಯುವಕನ ಮೊಬೈಲ್ ಒಡೆದು ಕಪಾಳಕ್ಕೆ ಹೊಡೆದ ಜಿಲ್ಲಾಧಿಕಾರಿ ಸಸ್ಪೆಂಡ್

    ರಾಯ್ಪುರ್​ : ಕರೊನಾ ನಿಯಮ ಉಲ್ಲಂಘಿಸಿದ ಯುವಕನೊಂದಿಗೆ ದುರ್ವ್ಯವಹಾರ ನಡೆಸಿದ ಛತ್ತೀಸಗಢದ ಸೂರಜ್​ಪುರದ ಜಿಲ್ಲಾಧಿಕಾರಿ ರಣಬೀರ್ ಶರ್ಮ ಅವರನ್ನು ಹುದ್ದೆಯಿಂದ ತೆಗೆದುಹಾಕಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಘಟನೆಯ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ರಾಜ್ಯದ ಸಿಎಂ ಭೂಪೇಶ್ ಬಘೇಲ್ ಅವರು ಈ ಆದೇಶ ಹೊರಡಿಸಿದ್ದಾರೆ. ಮತ್ತೊಬ್ಬ ಐಎಎಸ್​​ ಅಧಿಕಾರಿ ಗೌರವ್ ಕುಮಾರ್ ಸಿಂಗ್ ಅವರನ್ನು ಸೂರಜ್​ಪುರದ ಹೊಸ ಜಿಲ್ಲಾಧಿಕಾರಿಯಾಗಿ ನೇಮಿಸಲಾಗಿದೆ.

    ರಣಬೀರ್​​ ಶರ್ಮ ಅವರು, ಲಾಕ್​ಡೌನ್​ ನಡುವೆ ಕೆಲ ಔಷಧಿಗಳನ್ನು ತರಲು ಮನೆಯಿಂದ ಹೊರಬಂದಿದ್ದ ಎನ್ನಲಾದ ಯುವಕನ ಮೊಬೈಲ್​ ಪಡೆದು ಜೋರಾಗಿ ನೆಲಕ್ಕೆ ಎಸೆದು ಒಡೆದು ಹಾಕಿದ್ದರು. ಅಷ್ಟೇ ಅಲ್ಲ, ಕಪಾಳಕ್ಕೆ ಬಾರಿಸಿ, ಸ್ಥಳದಲ್ಲಿದ್ದ ಪೊಲೀಸ್​ ಸಿಬ್ಬಂದಿಗೆ ಅವನನ್ನು ಥಳಿಸುವಂತೆ ಹೇಳಿದ್ದರು. ಎಫ್​ಐಆರ್​ ಕೂಡ ದಾಖಲಿಸಲು ಆದೇಶಿಸಿದ್ದರು. ಇದೆಲ್ಲದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಜಿಲ್ಲಾಧಿಕಾರಿಗಳ ನಡೆಗೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದರು. ಐಎಎಸ್​ ಅಸೋಸಿಯೇಷನ್ ಸಹ ಈ ಕೃತ್ಯವನ್ನು ಖಂಡಿಸಿತ್ತು.

    ಇದನ್ನೂ ಓದಿ: ಯುವಕನ ಮೊಬೈಲ್​ ಒಡೆದು ಕಪಾಳಕ್ಕೆ ಬಾರಿಸಿದ ಜಿಲ್ಲಾಧಿಕಾರಿ: ಜನರ ಆಕ್ರೋಶಕ್ಕೆ ಡಿಸಿ ಉತ್ತರ ಹೀಗಿದೆ…

    ವಿಡಿಯೋ ವೈರಲ್​ ಆದ ಬೆನ್ನಲ್ಲೇ, ಛತ್ತೀಸಘಡ ಸಿಎಂ ಭೂಪೇಶ್​ ಬಘೇಲ್​ ಅವರು ಈ ಘಟನೆಯನ್ನು ಖಂಡಿಸಿ, ಈ ರೀತಿಯ ವರ್ತನೆಗಳನ್ನು ರಾಜ್ಯದಲ್ಲಿ ಸಹಿಸಿಕೊಳ್ಳುವುದಿಲ್ಲ. ಸಂಬಂಧಿತ ಅಧಿಕಾರಿಯನ್ನು ಕೂಡಲೇ ಅವರ ಹುದ್ದೆಯಿಂದ ತೆಗೆಯಲಾಗುವುದು ಎಂದು ಟ್ವೀಟ್ ಮಾಡಿದ್ದರು.

    ಈ ನಡುವೆ ರಣಬೀರ್​ ಶರ್ಮ ಅವರು ತಮ್ಮ ನಡವಳಿಕೆ ಬಗ್ಗೆ ಕ್ಷಮೆ ಕೋರಿದ್ದಾರೆ. ಆದರೆ ಯುವಕನು ಉದ್ಧಟವಾಗಿ ನಡೆದುಕೊಂಡ ಎಂದು ದೂರಿದ್ದಾರೆ. “ಯುವಕನ ಉದ್ಧಟತನದ ವರ್ತನೆಯಿಂದಾಗಿ ನಾನು ಆಕ್ರೋಶಗೊಂಡು ಅವನ ಕಪಾಳಕ್ಕೆ ಹೊಡೆದೆ” ಎಂದು ಶರ್ಮ ವಿವರಣೆ ನೀಡಿದ್ದಾರೆ. (ಏಜೆನ್ಸೀಸ್)

    ಲಾಕ್​​ಡೌನ್​ ರೂಲ್ಸ್​​ ಬ್ರೇಕ್ ಮಾಡಿ ಡ್ರಾಮಾ ಮಾಡಿದ ಕೈ ಮುಖಂಡ !

    ‘ಅಮ್ಮ ಬಿಟ್ಟು ಹೋದರು… ಅವರ ನೆನಪುಗಳನ್ನು ಉಳಿಸಿಕೊಡಿ’; ಬಾಲಕಿಯ ಈ ಮನವಿ ಕರುಳುಹಿಂಡುವಂಥದ್ದು !

    ಕುಡಿದ ಮತ್ತಿನಲ್ಲಿ ಮೀನುಗಾರರು ; ನಡುರಾತ್ರಿ ದಡಕ್ಕೆ ಅಪ್ಪಳಿಸಿದ ದೋಣಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts