More

    ಚಿಕ್ಕಮಗಳೂರನ್ನು ಸ್ಪಚ್ಛನಗರವನ್ನಾಗಿಸಲು ಕೈ ಜೋಡಿಸಿ

    ಚಿಕ್ಕಮಗಳೂರು: ವಿದ್ಯಾರ್ಥಿ ಜೀವನದ ನಂತರ ಮೊದಲ ಬಾರಿಗೆ ಸೈಕಲ್ ಏರಿದ ಜಿಲ್ಲಾಧಿಕಾರಿ ಡಾ. ಕೆ.ಎನ್.ರಮೇಶ್ ಸೈಕ್ಲಾಥಾನ್​ನಲ್ಲಿ ಭಾಗವಹಿಸಿ ವಿದ್ಯಾರ್ಥಿಗಳೊಂದಿಗೆ ನಗರ ಪ್ರದಕ್ಷಿಣೆ ಹಾಕುವ ಮೂಲಕ ಸ್ವಚ್ಛತೆ ಜಾಗೃತಿ ಮೂಡಿಸಿದರು.

    ಸಚ್ಛ ಭಾರತ್ ಮಿಷನ್ ಯೋಜನೆಯಡಿ ನಗರದಲ್ಲಿ ಮಂಗಳವಾರ ನಗರಸಭೆ ಹಮ್ಮಿಕೊಂಡಿದ್ದ ಸೈಕ್ಲಾಥಾನ್​ನಲ್ಲಿ ಮಾತನಾಡಿ, ಬೆಳಗ್ಗೆ ಸೈಕಲ್ ಓಡಿಸುವುದರಿಂದ ಉತ್ಸಾಹದ ಜತೆ ದೈಹಿಕ ವ್ಯಾಯಾಮವಾಗುತ್ತದೆ. ವಿದ್ಯಾರ್ಥಿಗಳ ಜತೆಯಲ್ಲಿ ಸೈಕಲ್ ಜಾಥಾ ನಡೆಸಿದ್ದರಿಂದ ಅವರಿಗೂ ಪ್ರೇರಣೆಯಾಗಿದೆ. ಸೈಕ್ಲಾಥಾನ್​ನಲ್ಲಿ ಪಾಲ್ಗೊಂಡವರು ತಮ್ಮ ಸ್ನೇಹಿತರು, ಕುಟುಂಬ ಮತ್ತು ಅಕ್ಕಪಕ್ಕದ ಮನೆಯವರಿಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿ ಸ್ವಚ್ಛ, ಸುಂದರ ನಗರವನ್ನಾಗಿ ರೂಪಿಸಲು ಸಹಕರಿಸಬೇಕು. ವಿಭಿನ್ನ ಕಾರ್ಯಕ್ರಮಗಳ ಮೂಲಕ ಸ್ವಚ್ಛ ಭಾರತಕ್ಕೆ ಕೈ ಜೋಡಿಸಬೇಕು ಎಂದರು.

    ಪೌರಾಯುಕ್ತ ಬಿ.ಸಿ.ಬಸವರಾಜ್ ಮಾತನಾಡಿ, ಸಾರ್ವಜನಿಕರಿಗೆ ಸ್ವಚ್ಛತೆ ಅರಿವು ಮೂಡಿಸಲು ಹಾಗೂ ಬಯಲು ಶೌಚಮುಕ್ತವಾಗಲು ಬೀದಿನಾಟಕ, ವಾಲ್​ಪೈಂಟಿಂಗ್, ರಸಪ್ರಶ್ನೆ ಇತರೆ ಕಾರ್ಯಕ್ರಮ ಆಯೋಜಿಸಲಾಗಿದೆ. ಮಾಸ್ಕ್ ಧರಿಸಿ ಸೋಂಕು ತಡೆಗಟ್ಟಿ, ನನ್ನ ಹಸಿರು ನನ್ನ ಉಸಿರು, ಸ್ವಚ್ಛತೆಯಿಂದ ಆರೋಗ್ಯ, ಶೌಚಗೃಹ ಬಳಸಿ ಇತರೆ ಘೊಷ ವಾಕ್ಯಗಳನ್ನು ಕೂಗುತ್ತ ಜನರಿಗೆ ಅರಿವು ಮೂಡಿಸಲಾಗಿದೆ ಎಂದರು.

    ಸರ್ಕಾರಿ ಜ್ಯೂನಿಯರ್ ಕಾಲೇಜು ಮತ್ತು ಬಸವನಹಳ್ಳಿ ಸರ್ಕಾರಿ ಬಾಲಕಿಯರ ಕಾಲೇಜು ವಿದ್ಯಾರ್ಥಿಗಳು, ಆಶ್ರಯ ಸಮಿತಿ ಅಧ್ಯಕ್ಷ ನಾರಾಯಣ್, ಸೇರಿದಂತೆ ಹವ್ಯಾಸಿ ಸೈಕ್ಲಿಸ್ಟ್​ಗಳಾದ ಜಾವೇದ್ ಪರ್ವೀಜ್, ಅನ್ವರ್ ಭಾಗವಹಿಸಿದ್ದರು. ನಗರಸಭೆ ಆವರಣದಿಂದ ಅರಣ್ಯ ಇಲಾಖೆ, ಐಜಿ ರಸ್ತೆ, ಕೆಎಂ ರಸ್ತೆ, ಎಂಜಿ ರಸ್ತೆ, ಆಜಾದ್​ಪಾರ್ಕ್ ಮೂಲಕ ಕಚೇರಿಗೆ ತಲುಪಿಸಿದರು. ಕೆಲವು ವಿದ್ಯಾರ್ಥಿಗಳು ಘೊಷಣೆ ಕೂಗುತ್ತಾ ಜಾಥಾ ನಡೆಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts