More

    ಸುಪ್ರೀಂಕೋರ್ಟ್ ಆದೇಶದನ್ವಯ ಮಸಗಲಿ ಅರಣ್ಯ ಒತ್ತುವರಿ ತೆರವು

    ಚಿಕ್ಕಮಗಳೂರು: ಸುಪ್ರೀಂಕೋರ್ಟ್ ಆದೇಶದನ್ವಯ ಮಸಗಲಿ ಅರಣ್ಯ ಒತ್ತುವರಿ ತೆರವುಗೊಳಿಸಲಾಗಿದೆ. ಡಿಸೆಂಬರ್​ವರೆಗೆ ಯಾವುದೇ ತೆರವು ಮಾಡಬಾರದೆಂಬ ನಿಮ್ಮ ಕೋರಿಕೆಯನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಹೇಳಿದರು.

    ಒತ್ತುವರಿ ತೆರವಿಗೆ ಸಂಬಂಧಿಸಿ ಡಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ, ಮೀಸಲು ಅರಣ್ಯ ಪ್ರದೇಶದಲ್ಲಿ ಅನಧಿಕೃತ ಸಾಗುವಳಿ ತಡೆಗಟ್ಟಲು ಸರ್ಕಾರ ನಿಗದಿಸಿರುವ 5 ಲಕ್ಷ ರೂ. ಪರಿಹಾರವನ್ನು ನೀಡಿ 23 ಕುಟುಂಬದ 38.8 ಎಕರೆಯ ಪ್ರದೇಶ ಅತಿಕ್ರಮಣ ತೆರವುಗೊಳಿಸಲಾಗಿದೆ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಿದೆೆ ಎಂದರು.

    ಪರಿಹಾರಧನ ಹೆಚ್ಚಿಸುವುದು, ಅನರ್ಹರನ್ನು ಪ್ಯಾಕೇಜ್​ವ್ಯಾಪ್ತಿಗೆ ತಂದು ಪರಿಗಣಿಸುವುದು ಮತ್ತು ಬದಲಿ ಭೂಮಿ ನೀಡುವ ಕುರಿತು ನಿಮ್ಮ ಎಲ್ಲ ಬೇಡಿಕೆಗಳನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ. ಕ್ಷೇತ್ರ ಮಟ್ಟದಲ್ಲಾಗುತ್ತಿರುವ ಗ್ರಾಮಸ್ಥರ ಸಂಕಷ್ಟಗಳ ಬಗ್ಗೆ ನ್ಯಾಯಾಲಯದ ಗಮನಕ್ಕೆ ತರುವ ಪ್ರಸ್ತಾವನೆ ಕುರಿತು ಕಾಫಿ ಬೆಳೆಗಾರರ ಸಂಘದ ಪದಾಧಿಕಾರಿಗಳಿಗೆ ಸಲಹೆ ನೀಡಲಾಗಿದೆ. ಈ ವಿಷಯಗಳು ಸರ್ಕಾರದ ಉನ್ನತ ಮಟ್ಟದಲ್ಲಿ ಚರ್ಚೆಯಲ್ಲಿದ್ದು ಸಮಗ್ರ ನೀತಿ ರಚಿಸಲಾಗುತ್ತಿದೆ ಹಾಗಾಗಿ ಸ್ವಲ್ಪ ವಿಳಂಬವಾಗಿದೆ ಎಂದರು.

    ಸುಪ್ರೀಂಕೋರ್ಟ್ ಆದೇಶ ಇಂದು ನಿನ್ನೆಯದಲ್ಲ. ಈ ಹಿಂದೆಯೂ ಅನ್ವಯವಾಗಿದೆ. ಹಾಸನ, ಶಿವಮೊಗ್ಗ, ಮಂಡ್ಯ, ಕೊಡಗಿನಲ್ಲಿ ನಡೆಯದ ಕಾರ್ಯಾಚರಣೆ ವಿಶೇಷವಾಗಿ ಚಿಕ್ಕಮಗಳೂರಲ್ಲಿ ಮಾತ್ರ ಆಗಿದೆ. ಕಾಫಿತೋಟ ತೆರವು ಮಾಡಿ ಸಣ್ಣ ರೈತರ ಮೇಲೆ ದೌರ್ಜನ್ಯ ಮಾಡಿರುವುದು ಅನುಮಾನಕ್ಕೆ ಎಡೆಮಾಡಿದೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts