More

    108 ದಿನಗಳ ಬಳಿಕ ಕುಟುಂಬ ಕೂಡಿಕೊಂಡ ಆಸೀಸ್ ಕ್ರಿಕೆಟಿಗ ಡೇವಿಡ್ ವಾರ್ನರ್..!

    ಸಿಡ್ನಿ: ಕರೊನಾ ವೈರಸ್ ಭೀತಿಯಿಂದ ನಿಂತ ನೀರಾಗಿದ್ದ ಕ್ರಿಕೆಟ್ ಚಟುವಟಿಕೆ ಹಂತ ಹಂತವಾಗಿ ಪುನರಾರಂಭಗೊಳ್ಳುತ್ತಿದೆ. ಬಯೋ ಬಬಲ್ ವಾತಾವರಣದಲ್ಲಿ ಯಾವುದೇ ಭಯವಿಲ್ಲದೆ ಬಿಸಿಸಿಐ 53 ದಿನಗಳ ಕಾಲ ಯುಎಇಯಲ್ಲಿ 13ನೇ ಐಪಿಎಲ್ ಆಯೋಜಿಸಿತ್ತು. ಲೀಗ್ ಆರಂಭಕ್ಕೂ ಮುನ್ನ ಒಂದು ತಿಂಗಳು ಮೊದಲೇ ಆಟಗಾರರು ಅರಬ್ ರಾಷ್ಟ್ರದಲ್ಲಿ ಬಿಡು ಬಿಟ್ಟಿದ್ದರು. ಲೀಗ್ ಮುಕ್ತಾಯದ ಬೆನ್ನಲ್ಲೇ ಭಾರತ ತಂಡದ ಆಟಗಾರರು ಆಸ್ಟ್ರೇಲಿಯಾ ಪ್ರಯಾಣ ಬೆಳೆಸಿದರೆ, ಕೆಲಮಂದಿ ತವರಿಗೆ ವಾಪಸಾದರು. ಅದೇ ರೀತಿ ಆಸ್ಟ್ರೇಲಿಯಾ ಆರಂಭಿಕ ಡೇವಿಡ್ ವಾರ್ನರ್ 108 ದಿನಗಳ ಬಳಿಕ ಕುಟುಂಬ ಸೇರಿಕೊಂಡಿದ್ದಾರೆ. ಮೂರು ಹೆಣ್ಣುಮಕ್ಕಳ ಮುದ್ದು ತಂದೆ ವಾರ್ನರ್, ಕುಟುಂಬದ ಜತೆಗಿರುವ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದಾರೆ.

    ಐಪಿಎಲ್‌ನಲ್ಲಿ ಸನ್‌ರೈಸರ್ಸ್‌ ತಂಡ ಮುನ್ನಡೆಸಿದ್ದ 34 ವರ್ಷದ ವಾರ್ನರ್, ಲೀಗ್ ಮುಕ್ತಾಯಗೊಂಡ ಬಳಿಕ ಸಿಡ್ನಿಗೆ ಆಗಮಿಸಿದ್ದಾರೆ. ಬಳಿಕ ಕ್ವಾರಂಟೈನ್ ಅವಧಿಯಲ್ಲೇ ಅಭ್ಯಾಸ ನಡೆಸಿ, ಇದೀಗ ಕುಟುಂಬ ಸೇರಿಕೊಂಡಿದ್ದಾರೆ. ‘ಕಡೆಗೂ ನಾನು ನನ್ನ ಹುಡುಗಿಯರನ್ನು ಸೇರಿಕೊಂಡೆ. ನನ್ನ ಸಂತೋಷದ ಸ್ಥಳ’ ಇದು ಎಂದು ಬರೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ವಾರ್ನರ್ ದಂಪತಿ ಪ್ರಕಟಿಸಿರುವ ಫೋಟೊಗೆ ಅಭಿಮಾನಿಗಳಿಂದ ಸಾಕಷ್ಟು ಪ್ರಕ್ರಿಯೆಗಳು ಬಂದಿವೆ.

    ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯ ಶುಕ್ರವಾರ ಸಿಡ್ನಿಯಲ್ಲಿ ನಡೆಯಲಿದೆ. ಏಕದಿನ ಸರಣಿ ಬಳಿಕ ಟಿ20 ಸರಣಿ ಆರಂಭಗೊಳ್ಳಲಿದ್ದು, ಡಿ.17 ರಂದು ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. ಅಡಿಲೇಡ್, ಮೆಲ್ಬೋರ್ನ್, ಸಿಡ್ನಿ ಹಾಗೂ ಬ್ರಿಸ್ಬೇನ್‌ನಲ್ಲಿ ಟೆಸ್ಟ್ ಪಂದ್ಯಗಳು ನಡೆಯಲಿವೆ. ಮೊದಲ ಟೆಸ್ಟ್ ಪಂದ್ಯ ಮುಕ್ತಾಯಗೊಂಡ ಬೆನ್ನಲ್ಲೇ ನಾಯಕ ವಿರಾಟ್ ಕೊಹ್ಲಿ ಪಿತೃತ್ವ ರಜೆ ಮೇಲೆ ತವರಿಗೆ ವಾಪಸಾಗಲಿದ್ದಾರೆ.

    https://www.instagram.com/p/CICxOdGL93S/?utm_source=ig_web_copy_link

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts