More

    ಭಾರತ ವಿರುದ್ಧದ ಮೂರನೇ ಟೆಸ್ಟ್ ಪಂದ್ಯಕ್ಕೂ ಡೇವಿಡ್ ವಾರ್ನರ್ ಅಲಭ್ಯ..?

    ಮೆಲ್ಬೋರ್ನ್: ತೊಡೆಸಂಧು ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಆಸ್ಟ್ರೇಲಿಯಾ ತಂಡದ ಸ್ಟಾರ್ ಆಲ್ರೌಂಡರ್ ಡೇವಿಡ್ ವಾರ್ನರ್ ಭಾರತ ವಿರುದ್ಧದ 3ನೇ ಟೆಸ್ಟ್ ಪಂದ್ಯದಿಂದಲೂ ಹೊರಗುಳಿಯುವ ಸಾಧ್ಯತೆಗಳಿವೆ. ಈ ಕುರಿತು ಸ್ವತಃ ಕೋಚ್ ಜಸ್ಟಿನ್ ಲ್ಯಾಂಗರ್ ಕೂಡ ಅನುಮಾನ ವ್ಯಕ್ತಪಡಿಸಿದ್ದಾರೆ. ಜನವರಿ 7ರಿಂದ ಸಿಡ್ನಿಯಲ್ಲಿ ಮೂರನೇ ಟೆಸ್ಟ್ ನಿಗದಿಯಾಗಿದೆ. ಆದರೆ, ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಿಡ್ನಿ ಬದಲಿಗೆ ಮೆಲ್ನೋರ್ನ್‌ನಲ್ಲೇ ಮೂರನೇ ಟೆಸ್ಟ್ ನಡೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

    ಇದನ್ನೂ ಓದಿ: ನ್ಯೂಜಿಲೆಂಡ್‌ಗೆ ಬಲ ತುಂಬಿದ ಕೇನ್ ವಿಲಿಯಮ್ಸನ್ 23ನೇ ಶತಕ

    34 ವರ್ಷದ ಡೇವಿಡ್ ವಾರ್ನರ್, ಏಕದಿನ ಸರಣಿಯ ಕಡೇ ಪಂದ್ಯ, 3 ಟಿ20 ಹಾಗೂ ಆರಂಭಿಕ ಎರಡು ಟೆಸ್ಟ್ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ವಾರ್ನರ್ ವಿಷಯದಲ್ಲಿ ತಂಡ ಸಕರಾತ್ಮಕವಾಗಿದೆ. ವಾರ್ನರ್ ಎಂಸಿಜಿಯಲ್ಲೇ ಅಭ್ಯಾಸ ನಡೆಸುತ್ತಿದ್ದಾರೆ. ಆದರೆ, ಅವರಿಗೆ ಪೂರ್ಣ ಪ್ರಮಾಣದಲ್ಲಿ ಚೇತರಿಕೆಯಾಗಿಲ್ಲ ಎಂದು ಲ್ಯಾಂಗರ್ ತಿಳಿಸಿದ್ದಾರೆ. ವಾರ್ನರ್ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾ ತಂಡ ಸೂಕ್ತ ಆರಂಭಿಕನ ಕೊರತೆ ಎದುರಿಸುತ್ತಿದೆ. ಸ್ವತಃ ಲ್ಯಾಂಗರ್ ಕೂಡ ಒಪ್ಪಿಕೊಂಡಿದ್ದು, ಮೊದಲ ವಿಕೆಟ್‌ಗೆ ನಿರೀಕ್ಷಿತ ಮಟ್ಟದಲ್ಲಿ ಜತೆಯಾಟ ಸಿಗುತ್ತಿಲ್ಲ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಕರ್ನಾಟಕ ಟಿ20 ತಂಡಕ್ಕೆ ಕರುಣ್ ನಾಯರ್ ಸಾರಥ್ಯ

    ಮೆಲ್ಬೋರ್ನ್‌ನಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಭಾರತ ತಂಡ 82 ರನ್ ಇನಿಂಗ್ಸ್ ಮುನ್ನಡೆ ಸಾಧಿಸಿದೆ. ಎರಡನೇ ದಿನದಾಟದ ಅಂತ್ಯಕ್ಕೆ ಭಾರತ ತಂಡ, ಅಜಿಂಕ್ಯ ರಹಾನೆ (104*) ಅಜೇಯ ಬ್ಯಾಟಿಂಗ್ ನೆರವಿನಿಂದ 5 ವಿಕೆಟ್‌ಗೆ 277 ರನ್ ಪೇರಿಸಿದೆ. ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ 195 ರನ್ ಪೇರಿಸಿತ್ತು.

    ಕೋಟ್ಲಾ ಸ್ಟೇಡಿಯಂನಿಂದ ತನ್ನದೇ ಹೆಸರು ತೆಗೆಸಲು ಬಿಷನ್ ಸಿಂಗ್ ಬೇಡಿ ಹೋರಾಟ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts