More

    ಪರೀಕ್ಷೆಯ ಭಯ ಬಿಡಿ, ಸಕಾರಾತ್ಮಕವಾಗಿರಿ, ಸೋಮಾರಿತನ ಬಿಟ್ಟರೆ ಸಾಧನೆ ಸಾಧ್ಯ: ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ

    ದಾವಣಗೆರೆ: ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದರೆ, ಇಲ್ಲವೇ ಅನುತ್ತೀರ್ಣರಾದರೆ ಖಿನ್ನತೆಗೆ ಒಳಗಾಗಬೇಡಿ ಎಂದು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.

    ಉಪ ನಿರ್ದೇಶಕರ ಕಚೇರಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ದಕ್ಷಿಣ ವಲಯ, ಅನುದಾನಿತ ಪ್ರೌಢಶಾಲಾ ನೌಕರರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ಇಲ್ಲಿನ ಗೌರಮ್ಮ ನರಹರಿಶೇಟ್ ಸಮುದಾಯ ಭವನದಲ್ಲಿ ಶನಿವಾರ ಆಯೋಜಿಸಿದ್ದ, ‘ಪರೀಕ್ಷೆ ಒಂದು ಹಬ್ಬ, ಬನ್ನಿ ಸಂಭ್ರಮಿಸೋಣ’ ಹಾಗೂ ವ್ಯಕ್ತಿತ್ವ ವಿಕಸನ ಕಾರ್ಯಕ್ರಮದಲ್ಲಿ ಮಾತನಾಡಿದರು.

    ವಿದ್ಯಾರ್ಥಿಗಳು ಸೋಮಾರಿತನಕ್ಕೆ ಒಳಗಾದರೆ ಯಾವುದೇ ಸಾಧನೆ ಸಾಧ್ಯವಿಲ್ಲ. ಬಹಳ ವಿದ್ಯಾರ್ಥಿಗಳು ಪರೀಕ್ಷೆಯ ಕಡೆ ಗಮನ ಕೊಡುವುದಿಲ್ಲ. ವಿದ್ಯಾರ್ಥಿಗಳಿಗೆ ಒಂದು ನಿರ್ದಿಷ್ಟ ಗುರಿ ಇರಬೇಕು. ಪಾಠದ ಕಡೆ ಲಕ್ಷೃವಿದ್ದರೆ ಮುಂದೆ ಲಕ್ಷ ಲಕ್ಷ ಸಂಪಾದಿಸಬಹುದು ಎಂದು ತಿಳಿಸಿದರು.

    ಪರೀಕ್ಷೆ ಎಂದರೆ ಭಯಪಡಬೇಡಿ. ಅದು ಜ್ಞಾನವನ್ನು ಪರೀಕ್ಷೆ ಮಾಡುವ ವ್ಯವಸ್ಥೆ ಅಷ್ಟೇ. ಪಾಲಕರು ಮಕ್ಕಳಿಗೆ ದಡ್ಡರು ಎಂದು ಹೇಳಬಾರದು. ಅವರಲ್ಲಿ ಸಕಾರಾತ್ಮಕ ಚಿಂತನೆ ತುಂಬಬೇಕು. ಉತ್ತಮ ವ್ಯಕ್ತಿತ್ವದ ಪ್ರೇರಣೆ ನೀಡಿದಾಗ ದೊಡ್ಡ ಸಾಧಕರಾಗುತ್ತಾರೆ ಎಂದು ಹೇಳಿದರು.

    ಡಯಟ್ ಪ್ರಾಂಶುಪಾಲ ಎಚ್.ಕೆ. ಲಿಂಗರಾಜು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಆತ್ಮವಿಶ್ವಾಸ ರೂಢಿಸಿಕೊಳ್ಳಬೇಕು. ಭಯವೇ ನಿಮ್ಮನ್ನು ಸೋಲಿನತ್ತ ಕರೆದೊಯ್ಯುತ್ತದೆ. ಆದ್ದರಿಂದ ಗೆಲ್ಲುತ್ತೇನೆ ಎಂಬ ಛಲ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts