More

    ಮಾನವೀಯ ಮೌಲ್ಯಗಳನ್ನು ಕಲಿಯಿರಿ

    ದಾವಣಗೆರೆ: ವಿದ್ಯಾರ್ಥಿಗಳು ಅಂಕ ಗಳಿಸುವ ಜತೆಗೆ ಮಾನವೀಯ ಮೌಲ್ಯಗಳನ್ನೂ ಕಲಿಯಬೇಕು ಎಂದು ಎಸ್ಸೆಸ್ ವೈದ್ಯಕೀಯ ಹಾಗೂ ಸಂಶೋಧನಾ ಕೇಂದ್ರದ ರೋಗಶಾಸ್ತ್ರ ವಿಭಾಗ ಮುಖ್ಯಸ್ಥೆ ಡಾ.ಶಶಿಕಲಾ ಕೃಷ್ಣಮೂರ್ತಿ ಹೇಳಿದರು.

    ವಿನಾಯಕ ಎಜುಕೇಷನ್ ಟ್ರಸ್ಟ್‌ನ ಜಿಎಂ ನರ್ಸರಿ ಶಾಲೆ, ಪಿಇಎಸ್ ಹಿ. ಪ್ರಾ. ಶಾಲೆ ಹಾಗೂ ಅಥಣಿ ಪ್ರೌಢಶಾಲೆಗಳ ಅಥಣಿ ಉತ್ಸವದ ಕಲರವ-4ರ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.

    ಹೆಣ್ಣು-ಗಂಡು ಇಬ್ಬರೂ ಒಂದೇ. ಭೇದ ಮಾಡದೆ ಸಮಾನವಾಗಿ ಬೆಳೆಸಬೇಕು. ಮಕ್ಕಳನ್ನು ಐಷಾರಾಮಿಯಾಗಿ ಬೆಳೆಸದೆ ಕಷ್ಟದ ಅರಿವು ಮೂಡಿಸಬೇಕು. ಸಂವಹನ ಕಲೆ ಬೆಳೆಸಿಕೊಳ್ಳಬೇಕು ಎಂದರು.

    ಟ್ರಸ್ಟ್‌ನ ಸದಸ್ಯ ಅಥಣಿ ಪ್ರಶಾಂತ್ ಮಾತನಾಡಿ, ಪಾಲಕರು ಮಕ್ಕಳಿಗೆ ಮೊಬೈಲ್ ಮತ್ತು ಟಿವಿಯಿಂದಾಗುವ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

    ಅಮೆರಿಕಾದಲ್ಲಿ ನಡೆದ 24ನೇ ಅಂತಾರಾಷ್ಟ್ರೀಯ ಜಂಬೂರಿಯಲ್ಲಿ ಭಾಗವಹಿಸಿದ್ದ ಸ್ಕೌಟ್ ವಿದ್ಯಾರ್ಥಿಗಳು, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಕರಾಟೆ ಮತ್ತು ಅಥ್ಲೆಟಿಕ್ಸ್‌ನಲ್ಲಿ ಭಾಗವಹಿಸಿದ್ದ ಮಕ್ಕಳನ್ನು ಪುರಸ್ಕರಿಸಲಾಯಿತು. ಮುಖ್ಯ ಶಿಕ್ಷಕಿ ದಿಶಾ ಡಿ.ಮೆನನ್ ಇದ್ದರು.

    ಕೆ.ಎಸ್.ಗೀತಾ ಸ್ವಾಗತಿಸಿದರು. ಮಿಥುನ್, ಕು.ಸೌಮ್ಯ, ರುದ್ರಸ್ವಾಮಿ ಕಾರ್ಯಕ್ರಮ ನಿರ್ವಹಿಸಿದರು. ಎಚ್.ವಿ.ಕಾವ್ಯ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts