More

    ಪದವೀದರರಿಗೆ ಉದ್ಯೋಗಾವಕಾಶದ ಸವಾಲು

    ದಾವಣಗೆರೆ: ಪ್ರತಿ ವರ್ಷ 4.5 ಕೋಟಿ ವಿದ್ಯಾರ್ಥಿಗಳು ಪದವಿ ಪಡೆದು ಹೊರಬರುತ್ತಿದ್ದಾರೆ. ಇವರಿಗೆ ಉದ್ಯೋಗಾವಕಾಶ ನೀಡುವ ಸವಾಲು ಸಮಾಜದ ಮುಂದಿದೆ ಎಂದು ಬೆಂಗಳೂರಿನ ಟ್ಯಾಲಿ ಸೆಲ್ಯೂಷನ್‌ನ ಪ್ರಧಾನ ಅಧಿಕಾರಿ ಎಸ್.ಜೆ. ನಾಗನಗೌಡ ಹೇಳಿದರು.

    ಇಲ್ಲಿನ ಬಾಪೂಜಿ ಇನ್ಸ್‌ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಷನ್‌ನ ಬಿಸಿಎ ಹಾಗೂ ಬಿಕಾಂ ವಿದ್ಯಾರ್ಥಿಗಳಿಗೆ ಶನಿವಾರ ಹಮ್ಮಿಕೊಂಡಿದ್ದ, ಪದವಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಪದವೀಧರರು ವೃತ್ತಿ ಜೀವನಕ್ಕೆ ಬೇಕಾದ ಕೌಶಲ ಹಾಗೂ ಸಾಮರ್ಥ್ಯ ಹೊಂದಿದ್ದಾರೆ ಎಂಬ ಪ್ರಶ್ನೆ ಕಾಡುತ್ತದೆ. ಕೈಗಾರಿಕೆಗಳೂ ಕೂಡ ಇಂಥದ್ದೇ ನಿರೀಕ್ಷೆ ಮಾಡಲಿವೆ. ವೈಫಲ್ಯಗಳನ್ನು ಎದುರಿಸುವತ್ತ ಪ್ರಯತ್ನ ನಡೆಸುತ್ತಲೆ ಸವಾಲುಗಳನ್ನು ಹಿಮ್ಮೆಟ್ಟಿಸಿ ಎಂದು ಕಿವಿಮಾತು ಹೇಳಿದರು.

    ಸಂಪರ್ಕ, ನಾಯಕತ್ವ, ಸವಾಲು ಎದುರಿಸುವ, ಪ್ರಶ್ನಿಸುವ ಗುಣಗಳು ವಿದ್ಯಾರ್ಥಿಗಳಿಗೆ ಬೇಕು. ಜೀವನೋತ್ಸಾಹ ಕುಂದಬಾರದು. ಪ್ರಯೋಗಶೀಲರಾಗಿ, ಹೊಸತನಗಳನ್ನು ಹುಡುಕಬೇಕು. ಎಲ್ಲರಿಗೂ ನೋಬೆಲ್ ಪ್ರಶಸ್ತಿ ದೊರೆಯಬೇಕಿಲ್ಲ. ಸಣ್ಣ ಸಣ್ಣ ಸಂಶೋಧನೆಗಳು ಕೂಡ ದೇಶಗಳಲ್ಲಿ ಬದಲಾವಣೆ ತರಬಹುದು ಎಂದು ಹೇಳಿದರು.

    ಬಾಪೂಜಿ ವಿದ್ಯಾಸಂಸ್ಥೆಯ ಆಡಳಿತ ನಿರ್ದೇಶಕ ಡಾ.ಎಂ.ಜಿ. ಈಶ್ವರಪ್ಪ ಮಾತನಾಡಿ, ಹಿಂದೆಲ್ಲ ಜನಸಂಖ್ಯೆ ಕಡಿಮೆ ಇತ್ತು. ಹೀಗಾಗಿ, ಶಿಕ್ಷಣ ಅನಿವಾರ್ಯವಾಗಿತ್ತೇ ಹೊರತು ಉದ್ಯೋಗ ಅಗತ್ಯವಾಗಿರಲಿಲ್ಲ. ಈಗ ಅದನ್ನು ಕಲ್ಪಿಸುವುದೂ ನಮ್ಮ ಜವಾಬ್ದಾರಿ ಆಗಬೇಕಿದೆ. ಉದ್ಯೋಗಕ್ಕೆ ಪೂರಕವಾದ ಕೌಶಲಗಳೂ ಬೇಕು ಎಂದರು.

    ಕಾಲೇಜಿನ ಪ್ರಾಚಾರ್ಯ ಡಾ. ಬಿ. ವೀರಪ್ಪ, ನಿರ್ದೇಶಕ ಡಾ. ಸ್ವಾಮಿ ತ್ರಿಭುವನಾನಂದ ಇದ್ದರು. ಪದವೀಧರರಿಗೆ ಎಚ್. ನವೀನ್ ಪ್ರತಿಜ್ಞಾವಿಧಿ ಬೋಧಿಸಿದರು. ಪ್ರೀತಿ ಮತ್ತು ತಂಡದವರು ಪ್ರಾರ್ಥನೆ ಹಾಡಿದರೆ, ಶಿವರಂಜಿನಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts