More

    ಬಾಲ್ಯದಲ್ಲೇ ಬಿತ್ತಿ ವಿವೇಕರ ಸಂಸ್ಕಾರ

    ದಾವಣಗೆರೆ: ಜನರ ಸಂಕಷ್ಟಕ್ಕೆ ಮಿಡಿಯುವ ಗುಣವಿಲ್ಲದೆ ಕೇವಲ ರ‌್ಯಾಂಕ್ ಪಡೆದರೆ ನಿರರ್ಥಕ. ಪಾಲಕರು ಮಕ್ಕಳಲ್ಲಿ ಸ್ವಾಮಿ ವಿವೇಕಾನಂದರ ಸಂಸ್ಕಾರವನ್ನು ಮಕ್ಕಳಲ್ಲಿ ಬಿತ್ತಬೇಕು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆಂಗಬಾಲಯ್ಯ ಹೇಳಿದರು.

    ಅಖಿಲ ಭಾರತೀಯ ಅಧಿವಕ್ತಾ ಪರಿಷತ್‌ನ ಜಿಲ್ಲಾ ಘಟಕದಿಂದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಭಾನುವಾರ ಸ್ವಾಮಿ ವಿವೇಕಾನಂದರ ಜಯಂತಿ ಹಾಗೂ ಹೆಣ್ಣುಮಕ್ಕಳ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾನೂನು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

    ಕೇವಲ ಫೋಟೋ ಇಟ್ಟು ಪೂಜಿಸಿದರೆ ಜಯಂತ್ಯುತ್ಸವಕ್ಕೆ ಅರ್ಥ ಬರುವುದಿಲ್ಲ. ನಮ್ಮೊಳಗೆ ಪರಿವರ್ತನೆ ಆಗಬೇಕು. ಮೊಬೈಲ್, ಟಿವಿ ಬಿಟ್ಟು ನಮ್ಮ ಮಕ್ಕಳಿಗೆ ನೀತಿ ಕತೆೆಗಳನ್ನು ಹೇಳಬೇಕು. ನಮ್ಮನ್ನು ಪರಿಶೋಧಿಸಿಕೊಳ್ಳಬೇಕು ಎಂದು ಹೇಳಿದರು.

    ನರೇಂದ್ರನ ಏಳು ವರ್ಷದ ಪ್ರಾಯದಲ್ಲೇ ಆತನ ತಾಯಿ ರಾಮಾಯಣ-ಮಹಾಭಾರತದ ಕಥೆ ಹೇಳಿದ್ದರು. ಆತನ ಪ್ರಶ್ನಿಸುವ ಗುಣವನ್ನು ತಾಯಿ ಸಂಕುಚಿತಗೊಳಿಸಲಿಲ್ಲ. ನರೇಂದ್ರ, ರಾಮಕೃಷ್ಣ ಪರಮಹಂಸರನ್ನು ಪರೀಕ್ಷಿಸಿದ ನಂತರವೇ ಗುರುವಾಗಿ ಸ್ವೀಕರಿಸಿದ. ಎಂದಿಗೂ ತಲೆ ಎತ್ತಿ ನಿಲ್ಲುತ್ತಲೇ ದೇಶದ ಗೌರವ ಹೆಚ್ಚಿಸಿದರು ಎಂದರು.
    ಹಿರಿಯ ಸಿವಿಲ್ ನ್ಯಾಯಾಧೀಶ ಪಿ.ಜೆ.ಸೋಮಶೇಖರ್ ಮಾತನಾಡಿ, ಗ್ರಾಮೀಣ ಜನರಿಂದಾಗಿ ಬಾಂಧವ್ಯ, ಸಂಸ್ಕೃತಿ ಉಳಿದಿದೆ. ನಗರದ ಜನರು ಹಾಗೂ ವಿದ್ಯಾವಂತರಿಂದ ಸಂಸ್ಕೃತಿ ಕಳೆದುಹೋಗುತ್ತಿದೆ. ಪ್ರತಿಷ್ಠೆ ಕಾರಣಕ್ಕೆ ನ್ಯಾಯಾಲಯಗಳಿಗೆ ಹೆಚ್ಚಿನ ವ್ಯಾಜ್ಯಗಳು ಬರುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.

    ಅಧಿವಕ್ತಾ ಪರಿಷತ್ ರಾಜ್ಯ ಉಪಾಧ್ಯಕ್ಷ ಪ್ರಕಾಶ್‌ರಾವ್ ಮಾತನಾಡಿ, ವಿವೇಕಾನಂದರ ವಿಚಾರಧಾರೆಗಳು ಯುವಕರಿಗೆ ಪ್ರೇರಣಾದಾಯಕವಾಗಿವೆ ಎಂದು ತಿಳಿಸಿದರು.

    ಪರಿಷತ್‌ನ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಸಿ.ಪಿ.ಅನಿತಾ ಪ್ರಾಸ್ತಾವಿಕ ಮಾತನಾಡಿದರು. ರಾಜ್ಯ ಉಪಾಧ್ಯಕ್ಷ ಮಂಜಪ್ಪ ಕಾಕನೂರು, ಜಿಲ್ಲಾಧ್ಯಕ್ಷ ಎಲ್.ದಯಾನಂದ ಇದ್ದರು.

    ವಿದ್ಯುನ್ಮಾನ ಸಾಕ್ಷೃಗಳು ಕುರಿತು ಹೈಕೋರ್ಟ್ ವಕೀಲ ಮಧುಕರ್ ದೇಶಪಾಂಡೆ ವಿಶೇಷ ಉಪನ್ಯಾಸ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts