More

    ಮುರುಘಾ ಶರಣರ ಬಿಡುಗಡೆಗೆ ಅಭಿಮಾನಿಗಳ ಆಗ್ರಹ

    ದಾವಣಗೆರೆ : ಚಿತ್ರದುರ್ಗ ಮುರುಘಾ ಮಠದ ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರ ಬಿಡುಗಡೆಗೆ ಆಗ್ರಹಿಸಿ ಮುರುಘಾ ಮಠದ ಅಭಿಮಾನಿಗಳು ನಗರದ ಜಯದೇವ ವೃತ್ತದಲ್ಲಿ ಶುಕ್ರವಾರ, ಕೈಗೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.
    ಸಂಜೆಯ ವರೆಗೂ ಧರಣಿ ನಡೆಸಿದ ಅವರು ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
    ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ ಮಾತನಾಡಿ, ಶರಣರ ಬಂಧನದಿಂದ ಎಲ್ಲರಿಗೂ ನೋವಾಗಿದೆ. ಇತಿಹಾಸವನ್ನು ಅವಲೋಕಿಸಿದಾಗ, ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದವರಿಗೆ ದುಷ್ಟ ಜನರು ಕಾಡಿದ್ದಾರೆ ಎಂದು ತಿಳಿಸಿದರು.
    ವಿಶ್ವಗುರು ಬಸವಣ್ಣ ಅವರಿಗೆ ಗಡಿಪಾರು ಶಿಕ್ಷೆ ನೀಡಲಾಯಿತು. ಮಹಾತ್ಮ ಗಾಂಧೀಜಿ ಅವರಿಗೆ ಗುಂಡೇಟು ತಗುಲಿದವು. ಅದೇ ರೀತಿ 21ನೇ ಶತಮಾನದ ದಾರ್ಶನಿಕರಾದ ಮುರುಘಾ ಶರಣರಿಗೆ ಇಂಥ ಕಳಂಕ ಬರುವಂತೆ ಮಾಡಿದ್ದಾರೆ ಎಂದು ಹೇಳಿದರು.
    ಕೆಲವರು ಹಣ ಸಂಪಾದನೆ ಮತ್ತು ಅಧಿಕಾರ ಹಿಡಿಯುವ ಉದ್ದೇಶದಿಂದ ಷಡ್ಯಂತ್ರ ರೂಪಿಸಿದ್ದಾರೆ. ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ ಎಂಬುದಕ್ಕೆ ಇದು ನಿದರ್ಶನವಾಗಿದೆ. ಗುರುಗಳು ಅಮೆರಿಕಕ್ಕೆ ಹೋಗಿದ್ದ ಸಂದರ್ಭದಲ್ಲಿ ಒಳಗಿದ್ದವರೇ ಈ ಯೋಜನೆ ರೂಪಿಸಿ ಗುರುಗಳಿಗೆ ಕೆಟ್ಟ ಹೆಸರು ತರುವ ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಿದರು.
    ಮುರುಘಾ ಶರಣರು ಹಾಲಿನಷ್ಟೇ ಪರಿಶುದ್ಧರು, ಅಪ್ಪಟ ಬಂಗಾರದ ಮನುಷ್ಯ ಎಂದು ಬಣ್ಣಿಸಿ, ಅವರು ಈ ಸಂಕಷ್ಟದಿಂದ ಗೆದ್ದು ಬರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts