More

    ಸಣ್ಣ ನೆರವಿನಲ್ಲೂ ಇದೆ ಸಮಾಜ ಸೇವೆಯ ಸಾರ್ಥಕತೆ

    ದಾವಣಗೆರೆ : ದೊಡ್ಡ ದಾನಗಳನ್ನು ಮಾಡಲು ಆಗದಿದ್ದರೂ ಕೈಲಾದಷ್ಟು ಸಣ್ಣ ಸಹಾಯ ಮಾಡಿದರೂ ಸಮಾಜಕ್ಕೆ ಸೇವೆ ಸಲ್ಲಿಸಿದಂತಾಗುತ್ತದೆ ಎಂದು ಆರ್.ಎಲ್. ಕಾನೂನು ಕಾಲೇಜಿನ ಅಧ್ಯಕ್ಷ ಆರ್.ಎಲ್. ಉಮಾಶಂಕರ್ ಹೇಳಿದರು.
    ನಗರದ ಡಿ.ಆರ್.ಆರ್. ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಭಾನುವಾರ, ಹಳೆಯ ವಿದ್ಯಾರ್ಥಿಗಳ ಸಂಘದಿಂದ ಆಯೋಜಿಸಿದ್ದ 1960 ರಿಂದ ಇಲ್ಲಿಯವರೆಗೆ ಕಾಲೇಜಿನಲ್ಲಿ ಓದಿದ ವಿದ್ಯಾರ್ಥಿಗಳ ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಹಣ ನೀಡುವುದಷ್ಟೆ ದಾನವೆಂದು ಭಾವಿಸಬೇಕಿಲ್ಲ. ಅಶಕ್ತರು, ಶೋಷಿತರಿಗೆ ಸಣ್ಣ ಸಹಾಯ ಮಾಡಿದರೂ ಅದರಿಂದ ಉಪಕಾರವಾಗುತ್ತದೆ ಎಂದು ತಿಳಿಸಿದರು.
    ದೊಡ್ಡ ಕೆಲಸ ಮಾಡುವ ಬದಲು ಸಣ್ಣ ಕೆಲಸದ ಮೂಲಕ ದೊಡ್ಡವರಾಗಬಹುದು. ನಮ್ಮ ಸೇವಾ ಕಾರ್ಯಗಳು ಮನಸ್ಸಿಗೆ ನೆಮ್ಮದಿ ನೀಡುವಂತಿರಬೇಕು ಎಂದು ಹೇಳಿದರು.
    ಜ್ಞಾನವನ್ನು ಹರಿಯ ಬಿಡಿ. ಸಮಾಜಕ್ಕೆ ಏನಾದರೂ ಒಳಿತು ಮಾಡಿ. ಮನೆಯ ಹೊರಗೂ, ಒಳಗೂ ತಂದೆ ತಾಯಿ, ದೊಡ್ಡವರಿಗೆ ಸಹಾಯ ಮಾಡಬೇಕು. ಈ ಹಿಂದೆ ನಾವು ತಂದೆ-ತಾಯಿ, ಹಿರಿಯರ ಕಾಲು ಒತ್ತುತ್ತಿದ್ದೆವು, ಅವರ ಸೇವೆ ಮಾಡುತ್ತಿದ್ದೆವು. ಆದರೆ ಈಗ ಹಿರಿಯರಿಗೆ ಹೊಡೆಯುವ ಕಾಲ ಬಂದಿರುವುದು ದುರಂತ. ಯುವ ಪೀಳಿಗೆ ಪಾಲಕರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
    ದಾವಣಗೆರೆ ದಾನಿಗಳ ನಗರ. ಇಲ್ಲಿ ಇರುವಷ್ಟು ದಾನಿಗಳು ಎಲ್ಲಿಯೂ ಇಲ್ಲ. ಆದ್ದರಿಂದ ಇದನ್ನು ‘ದೇವನಗರಿ’ ಎಂದು ಕರೆಯುವುದು ಸೂಕ್ತ ಎಂದರು.
    ಡಿ.ಆರ್.ಆರ್ ಸರ್ಕಾರಿ ಪಾಲಿಟೆಕ್ನಿಕ್‌ನ ನಿವೃತ್ತ ಪ್ರಾಂಶುಪಾಲರಾದ ಎಂ. ಪಂಚಾಕ್ಷರಿ, ಟಿ.ಜಿ. ವಿರೂಪಾಕ್ಷಪ್ಪ, ಬಿ.ಟಿ. ಮಾರ್ಕಂಡಯ್ಯ, ಪ್ರಾಂಶುಪಾಲ ಜಿ.ಬಿ. ಸದಾನಂದಪ್ಪ ಇದ್ದರು.
    ಎಚ್.ಕೆ. ಪಾಂಡುರಂಗಪ್ಪ ಪ್ರಾರ್ಥಿಸಿದರು. ಉಪನ್ಯಾಸಕ ಕೆ.ಬಿ. ರುದ್ರೇಶ್ ಸ್ವಾಗತಿಸಿದರು. ಹಳೇ ವಿದ್ಯಾರ್ಥಿಗಳ ಸಂಘದ ಎಡ್ವರ್ಡ್ ಸ್ಟಾೃನ್ಲಿ ಕಾರ್ಯಕ್ರಮ ನಿರೂಪಿಸಿದರು. ಪ್ರಕಾಶ್ ಮೊಳೆ ಪ್ರಾಸ್ತಾವಿಕವಾಗಿ ಮಾತನಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts