More

    ಅಕ್ಷರ ಜಾತ್ರೆಗೆ ಹೆಬ್ಬಾಳು ಗ್ರಾಮ ಸಜ್ಜು

    ದಾವಣಗೆರೆ : ಕೋಮು ಸೌಹಾರ್ದತೆಗೆ ಹೆಸರಾದ ಹೆಬ್ಬಾಳು ಗ್ರಾಮದಲ್ಲಿ ಮಂಗಳವಾರ, ತಾಲೂಕು ಮಟ್ಟದ 10ನೇ ಕನ್ನಡ ಸಾಹಿತ್ಯ ಸಮ್ಮೇಳನ ಮಂಗಳವಾರ ನಡೆಯಲಿದೆ.
     ಅಕ್ಷರ ಜಾತ್ರೆಯ ಹಿನ್ನೆಲೆಯಲ್ಲಿ ಇಡೀ ಗ್ರಾಮವು ಕನ್ನಡ ಬಾವುಟಗಳು, ಬಂಟಿಂಗ್, ತಳಿರು, ತೋರಣಗಳಿಂದ ಕಳೆಗಟ್ಟಿದೆ. ಶ್ರೀ ರುದ್ರೇಶ್ವರ ವಿರಕ್ತ ಮಠದಲ್ಲಿ ಸಮ್ಮೇಳನ ಆಯೋಜನೆಯಾಗಿದೆ. 80 ಅಡಿ ಅಗಲದ ವೇದಿಕೆಯು ಅಲಂಕೃತಗೊಂಡಿದೆ. 1500 ಆಸನಗಳ ವ್ಯವಸ್ಥೆ ಮಾಡಲಾಗಿದೆ.
     ಬೆಳಗ್ಗೆ 8 ಗಂಟೆಗೆ ಧ್ವಜಾರೋಹಣ ನೆರವೇರಲಿದ್ದು, 9 ಗಂಟೆಗೆ ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆಯು ವಿಶೇಷವಾಗಿ ಅಲಂಕೃತಗೊಂಡ ಎತ್ತಿನ ಬಂಡಿಯಲ್ಲಿ ನಡೆಯಲಿದೆ. ಕರಡಿ ಮಜಲು, ಭಜನೆ ಸೇರಿ 8ಕ್ಕೂ ಹೆಚ್ಚು ಕಲಾ ತಂಡಗಳು ಭಾಗವಹಿಸಲಿವೆ. 150 ಮಹಿಳೆಯರು ಪೂರ್ಣಕುಂಭ ಹೊತ್ತು ಸಾಗಲಿದ್ದಾರೆ.
     ಬೆಳಗ್ಗ 10 ಗಂಟೆಗೆ ಸಮ್ಮೇಳನದ ಉದ್ಘಾಟನೆ ನೆರವೇರಲಿದ್ದು ಹೆಬ್ಬಾಳು ವಿರಕ್ತ ಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಶಾಸಕರಾದ ಡಾ. ಶಾಮನೂರು ಶಿವಶಂಕರಪ್ಪ, ಕೆ.ಎಸ್. ಬಸವಂತಪ್ಪ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಸಚಿವ ಡಾ.ಬಿ.ಇ. ರಂಗಸ್ವಾಮಿ ಭಾಗವಹಿಸುವರು.
     …
     * ಊಟದ ವ್ಯವಸ್ಥೆ
     ಬೆಳಗ್ಗೆ ಉಪ್ಪಿಟ್ಟು, ಕೇಸರಿಬಾತ್, ಮಧ್ಯಾಹ್ನ 2 ಸಾವಿರ ಮಂದಿಗೆ ಊಟದ ವ್ಯವಸ್ಥೆ ಮಾಡಲಾಗಿದ್ದು ಗೋಧಿ ಪಾಯಸ, ಅನ್ನ-ಸಾಂಬರ್, ಮೆಣಸಿನಕಾಯಿ, ಪಲ್ಯ, ಮಜ್ಜಿಗೆ, ಸಂಜೆ ಟೊಮೆಟೊ ಬಾತ್. ಇವಿಷ್ಟು ಸಮ್ಮೇಳನಕ್ಕೆ ಬರುವವರಿಗೆ ಮಾಡಲಾಗಿರುವ ಊಟದ ಮೆನು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts