More

    ಪುಟ್ಟರಾಜ ಗವಾಯಿಗಳು ಅಂಧರ ಬದುಕಿನ ಊರುಗೋಲು

    ದಾವಣಗೆರೆ : ಅಸಂಖ್ಯ ಅಂಧರಿಗೆ ಸಂಗೀತ ವಿದ್ಯೆ ಧಾರೆಯೆರೆದು ಅವರ ಬದುಕಿಗೆ ಊರುಗೋಲಾಗಿದ್ದ ಡಾ. ಪಂ. ಪುಟ್ಟರಾಜ ಗವಾಯಿಗಳು ಸಮಗ್ರ ಕರ್ನಾಟಕದ ಮಹಾಪುರುಷ ಎಂದು ಜಾನಪದ ವಿದ್ವಾಂಸ, ಹಿರಿಯ ಸಾಹಿತಿ ಡಾ.ಎಂ.ಜಿ. ಈಶ್ವರಪ್ಪ ಬಣ್ಣಿಸಿದರು.
    ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯಿಂದ ನಗರದ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ, ರಾಜ್ಯ ಮಟ್ಟದ 5ನೇ ಭಕ್ತಿ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದರು.
    ಕಣ್ಣಿಲ್ಲದವರಿಗೆ ದೊಡ್ಡ ಮಾರ್ಗವನ್ನು ಹಾಕಿಕೊಟ್ಟು ಪರಂಪರೆಯನ್ನು ಹುಟ್ಟುಹಾಕಿದರು. ಬ್ರೈಲ್ ಲಿಪಿಯಲ್ಲಿ ಸಂಗೀತ ಮತ್ತು ಸಾಹಿತ್ಯದ ಕೃತಿಗಳನ್ನು ರಚಿಸಿದರು. ಅಂಧರನ್ನು ರಂಗಭೂಮಿಗೆ ಪರಿಚಯಿಸಿದರು ಎಂದು ತಿಳಿಸಿದರು.
    ಹಿಂದುಸ್ತಾನಿ ಸಂಗೀತವು ರಾಜ್ಯದಲ್ಲಿ ಜಗಜಗಿಸುವಂತೆ ಮಾಡಿದವರು ಪುಟ್ಟರಾಜ ಗವಾಯಿಗಳು. ಇದೇ ಕಾರಣಕ್ಕೆ ದೇಶಾದ್ಯಂತ ಅವರಿಗೆ ಅಪಾರ ಗೌರವವಿದೆ ಎಂದು ಹೇಳಿದರು.
    ಪುಟ್ಟರಾಜ ಗವಾಯಿಗಳು ಅಂಧರಾಗಿದ್ದರೂ ಕನ್ನಡ, ಹಿಂದಿ, ಸಂಸ್ಕೃತ ಭಾಷೆಗಳಲ್ಲಿ ವಿದ್ವಾಂಸರಾಗಿ, ಪುರಾಣ, ಪ್ರವಚನಗಳ ಮೂಲಕ ಜ್ಞಾನ ಪ್ರಸಾರ ಮಾಡಿದರು. ಅವರು ‘ಕಲ್ಯಾಣ ಕರ್ನಾಟಕದ ಕಲ್ಯಾಣ ಪುರುಷ’ ಎಂದರು.
    ಪಾಂಡೋಮಟ್ಟಿ ವಿರಕ್ತ ಮಠದ ಡಾ.ಶ್ರೀ ಗುರುಬಸವ ಸ್ವಾಮೀಜಿ ಮಾತನಾಡಿ, ಸಿದ್ಧಗಂಗಾ ಮಠದ ಶಿವಕುಮಾರ ಶ್ರೀಗಳು ತ್ರಿವಿಧ ದಾಸೋಹದ ಮೂಲಕ ಬಹಿರಂಗ ಸೇವೆ ಮಾಡಿದರೆ, ಗವಾಯಿಗಳದು ಅಂತರ್ಮುಖಿ ಸೇವೆಯಾಗಿತ್ತು. ಮನುಷ್ಯ ಸಾಹಿತ್ಯ, ಸಂಗೀತ, ಕಲೆ ಇವುಗಳಲ್ಲಿ ಒಂದನ್ನಾದರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮೌಢ್ಯ ಭಕ್ತಿ ಇರಬಾರದು ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts