More

    ರೈತರ ಬೇಡಿಕೆಗಳ ಈಡೇರಿಕೆಗೆ ಸಂಘಟಿತ ಹೋರಾಟ ಅಗತ್ಯ

    ದಾವಣಗೆರೆ : ರೈತರು, ಕೃಷಿ ಕೂಲಿ ಕಾರ್ಮಿಕರು ಸಂಘಟಿತರಾಗಿ ಹೋರಾಟಗಳನ್ನು ಕಟ್ಟುವ ಮೂಲಕ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕು ಎಂದು ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯ ರಾಜ್ಯಾಧ್ಯಕ್ಷ ಎಚ್.ವಿ. ದಿವಾಕರ್ ಹೇಳಿದರು.
    ನಗರದ ರೋಟರಿ ಬಾಲಭವನದಲ್ಲಿ ಸೋಮವಾರ ನಡೆದ ಸಂಘಟನೆಯ ಜಿಲ್ಲಾಮಟ್ಟದ ಪ್ರಥಮ ಸಮಾವೇಶದಲ್ಲಿ ಮಾತನಾಡಿದರು.
    ದೇಶದಲ್ಲಿ ರೈತರು, ಕೃಷಿ ಕಾರ್ಮಿಕರು ಗಂಭೀರ ಪರಿಸ್ಥಿತಿಯಲ್ಲಿದ್ದಾರೆ. ಇದಕ್ಕೆ ಎಲ್ಲ ರಾಜಕೀಯ ಪಕ್ಷಗಳು ವಿಶೇಷವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರಣವಾಗಿವೆ. ಶ್ರೀಮಂತರ ಪರವಾದ, ರೈತ ವಿರೋಧಿ ನೀತಿಗಳನ್ನೇ ಈ ಪಕ್ಷಗಳು ಅನುಸರಿಸುತ್ತ ಬಂದಿವೆ ಎಂದು ಆರೋಪಿಸಿದರು.
    ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ 8 ವರ್ಷಗಳಲ್ಲಿ ರೂಪಿಸಿದ ಕೃಷಿ ನೀತಿಗಳು ಅನ್ನದಾತರ ಪರವಾಗಿರದೆ ಬಂಡವಾಳಶಾಹಿಗಳ ಹಿತ ರಕ್ಷಣೆಯ ಉದ್ದೇಶದಿಂದ ಕೂಡಿವೆ ಎಂದು ದೂರಿದರು.
    ಎಪಿಎಂಸಿ ಕಾಯ್ದೆ ಮೂಲಕ ಕೃಷಿ ಉತ್ಪನ್ನ ಮಾರುಕಟ್ಟೆಗಳನ್ನು ಖಾಸಗಿಯವರಿಗೆ ವಹಿಸುವ ಹುನ್ನಾರ ನಡೆಯಿತು. ಇದರ ವಿರುದ್ಧ ರೈತ ಸಂಘಟನೆಗಳು ನಿರಂತರ ಒಂದು ವರ್ಷ ಸುದೀರ್ಘ ಹೋರಾಟ ನಡೆಸಿ ಯಶಸ್ಸು ಕಂಡವು ಎಂದು ತಿಳಿಸಿದರು.
    ವಿದ್ಯುತ್ ಮಸೂದೆ ಜಾರಿಗೆ ತರುವುದರಿಂದ ರಾಜ್ಯದಲ್ಲಿರುವ 40 ಲಕ್ಷ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಕಷ್ಟ ಎದುರಾಗುತ್ತದೆ. ಎಲ್ಲವನ್ನೂ ಬಂಡವಾಳಶಾಹಿಗಳಿಗೆ ನೀಡುವ ಪ್ರಯತ್ನ ನಡೆಯುತ್ತಿದೆ ಎಂದರು.
    ಸಂಘಟನೆಯ ಜಿಲ್ಲಾ ಸಂಚಾಲಕ ಮಧು ತೊಗಲೇರಿ ಮಾತನಾಡಿ, ಸರ್ಕಾರದ ನೀತಿಗಳು ಕೃಷಿ ಕ್ಷೇತ್ರವನ್ನು ಸಂಕಟದ ಪರಿಸ್ಥಿತಿಗೆ ದೂಡಿದೆ. ಬಗರ್‌ಹುಕುಂ ರೈತರಿಗೆ ಹಕ್ಕುಪತ್ರ ಸಿಗುತ್ತಿಲ್ಲ, ಕೈಗಾರಿಕಾ ಉದ್ದೇಶಕ್ಕಾಗಿ ಫಲವತ್ತಾದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಯತ್ನ ನಡೆದಿದೆ. ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ರಾಜ್ಯದಲ್ಲಿ ಇನ್ನೂ ವಾಪಸ್ ಪಡೆದಿಲ್ಲ. ಕೇಂದ್ರದ ವಿದ್ಯುತ್ ಮಸೂದೆ ಆತಂಕ ಮೂಡಿಸಿದೆ. ಇದರ ವಿರುದ್ಧ ಹೋರಾಡಲು ರೈತರು ಸಿದ್ಧವಾಗಬೇಕಿದೆ ಎಂದು ಹೇಳಿದರು.
    ಎಐಕೆಕೆಎಂಎಸ್‌ನ ಅಖಿಲ ಭಾರತ ಕೌನ್ಸಿಲ್ ಸದಸ್ಯ ಡಾ. ಟಿ.ಎಸ್. ಸುನೀತ್ ಕುಮಾರ್, ರಾಜ್ಯ ಕಾರ್ಯದರ್ಶಿ ಎಂ. ಶಶಿಧರ್, ಉಪಾಧ್ಯಕ್ಷ ಎಚ್.ಪಿ. ಶಿವಪ್ರಕಾಶ್, 22 ಕೆರೆಗಳ ಹೋರಾಟ ಸಮಿತಿಯ ಮಾಜಿ ಕಾರ್ಯದರ್ಶಿ ಟಿ.ವಿ.ಎಸ್. ರಾಜು, ಎಸ್‌ಯುಸಿಐ (ಸಿ) ಜಿಲ್ಲಾ ಕಾರ್ಯದರ್ಶಿ ಮಂಜುನಾಥ್ ಕೈದಾಳೆ, ಎಐಕೆಕೆಎಂಎಸ್ ಸಂಘಟನಾಕಾರರಾದ ನಾಗಸ್ಮಿತಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts