More

    ಕಾಶೀ ಪೀಠದ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ

    ದಾವಣಗೆರೆ : ಶ್ರೀಶೈಲ ಜಗದ್ಗುರು ಲಿಂ. ಶ್ರೀ ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದಂಗಳವರ 36ನೇ ವಾರ್ಷಿಕ ಪುಣ್ಯಾರಾಧನೆ, ಶ್ರೀ ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರ 11ನೇ ವರ್ಷದ ಸ್ಮರಣೋತ್ಸವ ಹಾಗೂ ಪ್ರಸ್ತುತ ಜಗದ್ಗುರುಗಳ ದ್ವಾದಶ ಪೀಠಾರೋಹಣ ಮಹೋತ್ಸವ ಅಂಗವಾಗಿ ಕಾಶೀ ಪೀಠದ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದರ ಅಡ್ಡಪಲ್ಲಕ್ಕಿ ಮಹೋತ್ಸವ ನಗರದಲ್ಲಿ ಬುಧವಾರ ವಿಜೃಂಭಣೆಯಿಂದ ನೆರವೇರಿತು.
    ಇಲ್ಲಿನ ಶ್ರೀಶೈಲ ಮಠದಿಂದ ಅಡ್ಡಪಲ್ಲಕ್ಕಿ ಉತ್ಸವ ಆರಂಭಗೊಂಡು ಪಿಬಿ ರಸ್ತೆ ಸೇರಿ ನಗರದ ವಿವಿಧ ಬೀದಿಗಳ ಮೂಲಕ ಸಾಗಿತು. ಪುಷ್ಪಾಲಂಕೃತ ಪಲ್ಲಕ್ಕಿಯಲ್ಲಿ ಆಸೀನರಾಗಿದ್ದ ಜಗದ್ಗುರುಗಳು ಭಕ್ತರಿಗೆ ಆಶೀರ್ವದಿಸಿದರು.
    ಮೆರವಣಿಗೆಯಲ್ಲಿ ಗಜರಾಜ ಮುಂದೆ ಸಾಗಿದರೆ, ಮುತ್ತೈದೆಯರು ಪೂರ್ಣಕುಂಭ ಹೊತ್ತು ನಡೆದರು. ವಟುಗಳು ಸಾಂಪ್ರದಾಯಿಕ ಉಡುಗೆಯಲ್ಲಿದ್ದರು. ನಂದಿಕೋಲು, ಸಮಾಳ ಮುಂತಾದ ಕಲಾ ತಂಡಗಳು ಮೆರವಣಿಗೆಯ ಕಳೆಯನ್ನು ಹೆಚ್ಚಿಸಿದವು. ಭಕ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
    ಮಾಜಿ ಮೇಯರ್ ಬಿ.ಜಿ. ಅಜಯಕುಮಾರ್, ಮುಖಂಡರಾದ ಸಿದ್ದೇಶ್ ಕೋಟೆಹಾಳ್, ಮುರುಗೇಶ ಆರಾಧ್ಯ, ಎಸ್.ಜಿ. ಉಳುವಯ್ಯ, ಅಕ್ಕಿ ರಾಜು, ಎನ್.ಎಂ. ತಿಪ್ಪೇಸ್ವಾಮಿ, ಹನುಮಂತಪ್ಪ, ಶಿವಕುಮಾರ್ ಪಾಲ್ಗೊಂಡಿದ್ದರು.
    ಇದಕ್ಕೂ ಮೊದಲು ಶಾಮನೂರು ಬೈಪಾಸ್‌ನಲ್ಲಿ ಜಗದ್ಗುರುಗಳ ಪುರಪ್ರವೇಶವಾಯಿತು. ಅಲ್ಲಿಂದ ಅವರನ್ನು ಬೈಕ್ ರ‌್ಯಾಲಿಯ ಮೂಲಕ ಕರೆತರಲಾಯಿತು. ನಂತರ ಶ್ರೀಶೈಲ ಮಠದ ದ್ವಾರಬಾಗಿಲು ಉದ್ಘಾಟನೆ ನೆರವೇರಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts