More

    ಆಟವಾಡುತ್ತಿದ್ದಾಗ ನೀರು ತುಂಬಿದ ಬಕೆಟ್​ನಲ್ಲಿ ಆಯತಪ್ಪಿ ಬಿದ್ದು 10 ತಿಂಗಳ ಮಗು ದುರ್ಮರಣ

    ದಾವಣಗೆರೆ: ಮಕ್ಕಳನ್ನು ಹೆತ್ತರೆ ಸಾಲದು ಅವರು ಬೆಳೆಯುವವರೆಗೂ ಅವರ ಮೇಲೆ ನಿಗಾವಹಿಸಬೇಕು. ಪುಟ್ಟ ಮಕ್ಕಳಿಗೆ ಯಾವುದೇ ಅಪಾಯದ ಅರಿವಿರುವುದಿಲ್ಲ. ಹೀಗಾಗಿ ಅವರನ್ನು ಬೆಳೆಯುವ ಹಂತದಲ್ಲಿ ಸರಿಯಾಗಿ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ದುರಂತ ಸಂಭವಿಸುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂಬುದಕ್ಕೆ ಈ ಘಟನೆ ತಾಜಾ ಉದಾಹರಣೆಯಾಗಿದೆ.

    ಹೌದು, ನೀರು ತುಂಬಿದ ಬಕೆಟ್​ನಲ್ಲಿ ಬಿದ್ದು 10 ತಿಂಗಳ ಮಗು ಸಾವಿಗೀಡಾಗಿರುವ ಹೃದಯ ವಿದ್ರಾವಕ ಘಟನೆ ಜಗಳೂರು ಪಟ್ಟಣದ ಬಿಸ್ತುವಳ್ಳಿ ಗ್ರಾಮದಲ್ಲಿ ನಡೆದಿದೆ.

    ಅನುಶ್ರಾವ್ಯ ಮೃತಪಟ್ಟ ದುರ್ದೈವಿ ಮಗು. ಬಿಸ್ತುವಳ್ಳಿ ಗ್ರಾಮದ ಮಂಜುನಾಥ್ ಹಾಗೂ ತಾರಾ ದಂಪತಿ ಪುತ್ರಿ. ಮನೆಯ ಮುಂಭಾಗ ಆಟವಾಡುತ್ತಿದ್ದಾಗ ನೀರು ತುಂಬಿದ ಬಕೆಟ್​ನಲ್ಲಿ ಆಯತಪ್ಪಿ ಬಿದ್ದ ಅನುಶ್ರಾವ್ಯಳನ್ನು ನೋಡಿದ ತಕ್ಷಣ ಆಕೆಯನ್ನು ಚಿಕಿತ್ಸೆಗೆಂದು ಜಗಳೂರಿನ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾಳೆ.

    ಮಗಳನ್ನು ಕಳೆದುಕೊಂಡ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಜಗಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. (ದಿಗ್ವಿಜಯ ನ್ಯೂಸ್​)

    ವೀರಶೈವ ಲಿಂಗಾಯತ ಮುಖಂಡರ ಮೇಲೆ ಹಲ್ಲೆ ವಿರೋಧಿಸಿ ಠಾಣೆಗೆ ಮುತ್ತಿಗೆ; ಸ್ಥಳಕ್ಕೆ ಎಸ್​ಪಿ ಭೇಟಿ, ಸೂಕ್ತಕ್ರಮದ ಭರವಸೆ

    ಹಿಂದೂ ಕಾರ್ಯಕರ್ತರಿಂದ ಮಸೀದಿಗೆ ನುಗ್ಗಲು ಯತ್ನ; ಬಾವುಟ ಗಲಾಟೆ, ಹಸಿರು-ಕೇಸರಿ ಸಂಘರ್ಷ..

    ಜಿಮ್ ಹೋಗುವ ಮಧ್ಯ ವಯಸ್ಕರಲ್ಲಿ ಹೆಚ್ಚಿದ ಹೃದಯಾಘಾತ; ಬಚಾವಾಗಲು ಇಲ್ಲಿದೆ ಉಪಾಯ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts