More

    ರೈತರು, ಹನಿ ನೀರಾವರಿ ಉಪಕರಣಗಳ ವಿತರಕರ ಪ್ರತಿಭಟನೆ

    ದಾವಣಗೆರೆ: ಹನಿ ನೀರಾವರಿ ಸಹಾಯಧನ ಪಡೆಯಲು ಈ ಹಿಂದೆ ಅನುಸರಿಸುತ್ತಿದ್ದ ಮಾರ್ಗಸೂಚಿಯನ್ನು ಮುಂದುವರಿಸುವಂತೆ ಆಗ್ರಹಿಸಿ ರೈತರು, ಹನಿ ನೀರಾವರಿ ಉಪಕರಣಗಳ ವಿತರಕರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

    ನಗರದ ಗಾಂಧಿ ವೃತ್ತದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಡಿಸಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

    ಆರೇಳು ತಿಂಗಳಿಂದ ಕರೊನಾ ದೇಶಾದ್ಯಂತ ವ್ಯಾಪಿಸಿದ್ದು, ಲಾಕ್‌ಡೌನ್ ವೇಳೆ ತೋಟಗಾರಿಕೆ ಬೆಳೆಗಳಿಗೆ ಉಪಕರಣಗಳ ಖರೀದಿಗೆ ವಿನಾಯಿತಿ ನೀಡಿತ್ತು. ಈ ಸಂಬಂಧ ಕೃಷಿ, ತೋಟಗಾರಿಕಾ ಸಚಿವರು ಹೇಳಿಕೆ ನೀಡಿದ್ದರು.

    ಪ್ರತಿ ವರ್ಷದಂತೆ ಈ ಸಲವೂ ರೈತರಿಗೆ ವಿತರಕರು ಉಪಕರಣಗಳನ್ನು ನೀಡಿದ್ದಾರೆ. ವರ್ಷದ ಮಧ್ಯಂತರ ಅವಧಿಯಲ್ಲಿ ಸರ್ಕಾರ ಮುನ್ಸೂಚನೆ ನೀಡದೆ ಮಾರ್ಗಸೂಚಿ ಬದಲಿಸಿದ್ದು, ವಿತರಕರ ಬಿಲ್ ಬದಲು ಕಂಪನಿಯ ಪಾವತಿಯನ್ನು ಮಾತ್ರ ಸಲ್ಲಿಸುವಂತೆ ತಿಳಿಸಿದೆ.

    ಸ್ವಂತ ಖರ್ಚಿನಲ್ಲಿ ಉಪಕರಣಗಳನ್ನು ಖರೀದಿಸಿದ ರೈತರು ಸಹಾಯಧನದ ನಿರೀಕ್ಷೆಯಲ್ಲಿದ್ದರು. ಆದರೆ, ಈ ಮಾರ್ಗಸೂಚಿಯಿಂದ ರೈತರು, ವಿತರಕರಿಗೆ ತೊಂದರೆ ಜತೆ ನಷ್ಟವಾಗಲಿದೆ. ಆದ್ದರಿಂದ ಈ ಹಿಂದಿನ ಮಾರ್ಗಸೂಚಿಯನ್ನು 2021ರ ಮಾರ್ಚ್ 31ರ ವರೆಗೆ ಮುಂದುರಿಸಬೇಕು ಎಂದು ಆಗ್ರಹಿಸಿದರು.

    ವಿತರಕರ ಸಂಘದ ಜಿಲ್ಲಾಧ್ಯಕ್ಷ ಯೋಗೇಶ್, ತಾಲೂಕು ಘಟಕದ ಅಧ್ಯಕ್ಷ ಎಚ್.ಎಸ್.ಚೇತನ್‌ಕುಮಾರ್ ಎಲೆಬೇತೂರು, ರೈತರಾದ ರಾಜು, ಉಮೇಶ್ ಹಾಲುವರ್ತಿ, ಕಾರ್ತಿಕ್, ಚನ್ನಬಸಪ್ಪ, ಯೋಗೀಶ್, ಶಿವರಾಜ್, ದಯಾನಂದ, ಸುನಿಲ್, ಮಾರುತಿ, ಮಧು ಓಂಕಾರಪ್ಪ ಇತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts