More

    ಎಲ್ಲೆಲ್ಲೂ ರಾಮ ನಾಮ, ರಾಘವನ ಧ್ಯಾನ

    ದಾವಣಗೆರೆ : ಹಾಡು, ಕುಣಿತ, ಜಪ, ಯಜ್ಞ ಎಲ್ಲದರಲ್ಲೂ ಶ್ರೀ ರಾಮನದೇ ಸ್ಮರಣೆ. ಎಲ್ಲೆಲ್ಲೂ ರಾಘವನ ಧ್ಯಾನ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಭಕ್ತಿಯನ್ನು ಸಮರ್ಪಿಸಿದರು. ದೂರದ ಅಯೋಧ್ಯೆಯಲ್ಲಿ ದಶರಥ ನಂದನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಯಾಗುತ್ತಿದ್ದರೆ ಜಿಲ್ಲೆಯಾದ್ಯಂತ ಹಬ್ಬದ ಸಂಭ್ರಮ ಮನೆಮಾಡಿತ್ತು.
     ದೇವಸ್ಥಾನಗಳಲ್ಲಿ ರಾಮತಾರಕ ಹೋಮ, ವಿಶೇಷ ಪೂಜೆಗಳು ನೆರವೇರಿದರೆ, ಪ್ರಮುಖ ರಸ್ತೆ, ವೃತ್ತಗಳಲ್ಲಿ ಅನ್ನ ಸಂತರ್ಪಣೆ, ಪಾನಕ, ಕೋಸಂಬರಿ, ಲಾಡು ವಿತರಣೆ ಮಾಡಲಾಯಿತು. ವರ್ತಕರು, ಆಟೋ ಚಾಲಕರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಕೈಜೋಡಿಸಿದರು. ರಕ್ತದಾನ ಶಿಬಿರಗಳು ನಡೆದವು. ಅಲ್ಲಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ರಾಮ ಭಕ್ತರು ಬೈಕ್‌ಗಳಿಗೆ ಕೇಸರಿ ಧ್ವಜವನ್ನು ಕಟ್ಟಿದ್ದರು.
     ನಗರದ ಕೆಲವು ಹೋಟೆಲ್‌ಗಳನ್ನು ರಾಮ ಭಕ್ತರಿಗಾಗಿ ವಿಶೇಷವಾಗಿ ಅಲಂಕರಿಸಲಾಗಿತ್ತು. ಪ್ರಸಾದ ನೀಡಿ ಗ್ರಾಹಕರನ್ನು ಸ್ವಾಗತಿಸಲಾಯಿತು. ರಾಮನ ಕುರಿತಾದ ಹಾಡುಗಳನ್ನು ಕೇಳಿಸಲಾಯಿತು.
     …
     
     * ಶಾಮನೂರಲ್ಲಿ ರಾಮನೂರಿನ ಕಳೆ
     ಶಾಮನೂರಿನಲ್ಲಿ ವಿನಾಯಕ ಬಳಗ ಮತ್ತು ಸಂಘ ಪರಿವಾರದ ಕಾರ್ಯಕರ್ತರು ಸಂಭ್ರಮದಿಂದ ಆಚರಿಸಿದರು. ಆಂಜನೇಯ ದೇವಸ್ಥಾನ, ಈಶ್ವರ, ಕಲ್ಲೇಶ್ವರ ದೇಗುಲಗಳಲ್ಲಿ ಬೆಳಗ್ಗೆ ಅಭಿಷೇಕ, ಪೂಜೆಗಳು ನೆರವೇರಿದವು.
     ಗ್ರಾಮದ ರಾಮ ಮಂದಿರಕ್ಕೆ ಬೆಳಗ್ಗೆಯಿಂದ ಭಕ್ತರ ದಂಡು ಹರಿದು ಬಂದಿತು. ದರ್ಶನ ಪಡೆದ ನಂತರ ಕೇಸರಿಬಾತ್, ಕೋಸಂಬರಿ, ಪಾನಕವನ್ನು ವಿತರಿಸಲಾಯಿತು. ಅಯೋಧ್ಯೆಯ ನೇರ ಪ್ರಸಾರ ವೀಕ್ಷಿಸಲು ಎಲ್‌ಇಡಿ ಪರದೆ ಅಳವಡಿಸಲಾಗಿತ್ತು. ಊರಿನ 2 ಸಾವಿರ ಮನೆಗಳಿಗೆ ಲಾಡು ಮತ್ತು ಕರಪತ್ರ ವಿತರಿಸಿದ್ದಾಗಿ ಮುಖಂಡ ಸಂಕೋಳ್ ಚಂದ್ರಶೇಖರ್ ತಿಳಿಸಿದರು.
     …
     
     * ಶಾರದಾಂಬಾ ದೇವಸ್ಥಾನ
     ಶ್ರೀ ಶಂಕರ ಸೇವಾ ಸಂಘದ ವತಿಯಿಂದ ನಗರದ ಶಾರದಾಂಬಾ ದೇವಸ್ಥಾನದಲ್ಲಿ ರಾಮ ತಾರಕ ಹೋಮ ಹಮ್ಮಿಕೊಳ್ಳಲಾಗಿತ್ತು. ವೇದ ಬ್ರಹ್ಮ ಶ್ರೀ ಶಂಕರ್ ನಾರಾಯಣ ಶಾಸ್ತ್ರಿಗಳ ನೇತೃತ್ವದಲ್ಲಿ ಹೋಮ ನಡೆಸಲಾಯಿತು. ಶಂಕರ ಸೇವಾ ಸಂಘದ ಅಧ್ಯಕ್ಷ ಡಾ.ಬಿ.ಟಿ. ಅಚ್ಚುತ, ನಳಿನಿ ಹೋಮವನ್ನು ನೆರವೇರಿಸಿದರು.
     ಈ ಸಂದರ್ಭದಲ್ಲಿ 350ಕ್ಕೂ ಹೆಚ್ಚು ಮಹಿಳೆಯರು ಶ್ರೀ ರಾಮನ ಸ್ತೋತ್ರಗಳನ್ನು ಹೇಳಿ ಭಜನೆ ಮಾಡಿದರು. ಉಪಾಧ್ಯಕ್ಷರಾದ ಮೋತಿ ಸುಬ್ರಮಣ್ಯ, ಬಾಲಕೃಷ್ಣ ವೈದ್ಯ, ಅನಿಲ್ ಬಾರಂಗಳ್, ಡಾ ಸುಬ್ಬರಾವ್, ರಾಘವೇಂದ್ರ, ಪುರೋಹಿತರಾದ ಗಣೇಶ್ ಭಟ್, ರಾಮಚಂದ್ರ ಭಟ್ ಇದ್ದರು. ಪೂರ್ಣಾಹುತಿ ಸಂದರ್ಭದಲ್ಲಿ ಮಧು ಮತ್ತು ತಂಡದವರಿಂದ ಚಂಡೆ ಸೇವೆಯನ್ನು ಮಾಡಲಾಯಿತು.
     …
     
     * ಬ್ರಹ್ಮ ಚೈತನ್ಯ ಮಂದಿರ
     ನಗರದ ಸದ್ಗುರು ಬ್ರಹ್ಮ ಚೈತನ್ಯ ಮಂದಿರದಲ್ಲಿ ಸೋಮವಾರ ರಾಮ ತಾರಕ ಹೋಮ, ಶ್ರೀ ರಾಮ ನಾಮ ಜಪ ಮುಂತಾದ ಕಾರ್ಯಕ್ರಮಗಳು ನಡೆದವು. ಅಧ್ಯಕ್ಷ ಪಿ.ಸಿ. ಮಹಾಬಲೇಶ್ವರ ಭಟ್, ಅನಿಲ್ ಬಾರಂಗಳ್, ಕೊಲ್ಲೂರು ಜಯಪ್ರಕಾಶ್, ಪಿ.ಎಲ್. ಶಂಕರ್ ರಾವ್, ಬಿ.ಟಿ ಚಂದ್ರಶೇಖರ್, ದಿವಾಕರ್ ಕಾಂತವರ,  ವಿಜಯ್ ಕೊಲ್ಲೂರು, ಪಿ.ವಿ. ಮಹೇಶ್. ರಾಜು ಸಲ್ಲುಗುಳಿ, 200ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು.
     ಅಯೋಧ್ಯೆಯ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನ ಕಾರ್ಯಕ್ರಮದ ನೇರ ಪ್ರಸಾರದ ವೀಕ್ಷಣೆ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮದ ನಂತರ 600ಕ್ಕೂ ಹೆಚ್ಚು ಜನರು ಪ್ರಸಾದ ಸ್ವೀಕರಿಸಿದರು. ಅಯೋಧ್ಯೆಗೆ 1992ರಲ್ಲಿ ಕರ ಸೇವಕರಾಗಿ ತೆರಳಿದ್ದ ಸತ್ಯನಾರಾಯಣ ರಾವ್, ಪಿ.ಸಿ. ಮಹಾಬಲೇಶ್ವರ ಭಟ್ ಅವರಿಗೆ ಸಂಸ್ಥೆ ವತಿಯಿಂದ  ಸನ್ಮಾನಿಸಲಾಯಿತು.
     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts