More

    ದಾವಣಗೆರೆ ಜಿಲ್ಲೆಯ 1685 ಮತಗಟ್ಟೆಗಳಲ್ಲಿ ಇಂದು ಮತದಾನ

    ದಾವಣಗೆರೆ : ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ 1685 ಮತಗಟ್ಟೆಗಳಲ್ಲಿ ಬುಧವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 6ರ ವರೆಗೆ ಮತದಾನ ನಡೆಯಲಿದ್ದು, ಮತದಾರರು ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದಾರೆ.
     ಜಿಲ್ಲೆಯಲ್ಲಿ 7,21,964 ಪುರುಷರು, 7,20,004 ಮಹಿಳೆಯರು, 118 ಇತರೆ ಸೇರಿ 14,42,553 ಮತದಾರರಿದ್ದಾರೆ. ಜಗಳೂರು ಕ್ಷೇತ್ರದಲ್ಲಿ 1,93,028, ಹರಿಹರ-2,07,589, ದಾವಣಗೆರೆ ಉತ್ತರ-2,41,278, ದಾವಣಗೆರೆ ದಕ್ಷಿಣ-2,10,708, ಮಾಯಕೊಂಡ-1,91,421, ಚನ್ನಗಿರಿ-1,99,517, ಹೊನ್ನಾಳಿ ಕ್ಷೇತ್ರದಲ್ಲಿ 1,99,012 ಮತದಾರರಿದ್ದಾರೆ.
     ಮತದಾನ ಪ್ರಕ್ರಿಯೆಗೆ ಮತಗಟ್ಟೆಗಳನ್ನು ಸಜ್ಜುಗೊಳಿಸಲಾಗಿದೆ. ಕುಡಿಯುವ ನೀರು, ನೆರಳು, ವಿಶ್ರಾಂತಿ ಕೊಠಡಿ, ಅಂಗವಿಕಲರಿಗೆ ರ‌್ಯಾಂಪ್, ವ್ಹೀಲ್‌ಚೇರ್ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಲ್ಲಿ 1347 ಸಾಮಾನ್ಯ ಮತ್ತು 338 ಕ್ರಿಟಿಕಲ್ ಮತಗಟ್ಟೆಗಳಿವೆ.
     ಕೆಲವು ವಿಶೇಷ ಮತಗಟ್ಟೆಗಳನ್ನೂ ಸ್ಥಾಪಿಸಲಾಗಿದೆ. ಸಖಿ ಬೂತ್‌ಗಳಲ್ಲಿ ಮಹಿಳಾ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ. ಯುವ ಅಧಿಕಾರಿಗಳಿರುವ ಯುವ ಮತಗಟ್ಟೆ, ಅಂಗವಿಕಲ ಅಧಿಕಾರಿಗಳಿರುವ ಮತಗಟ್ಟೆಗಳು, ಪಾರಂಪರಿಕ ಮತಗಟ್ಟೆಗಳನ್ನು ವಿಶೇಷವಾಗಿ ಅಲಂಕರಿಸಲಾಗಿದೆ. ಜಿಲ್ಲೆಯ 869 ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ.
     ಮತಗಟ್ಟೆ ಸಿಬ್ಬಂದಿ ಮಂಗಳವಾರ, ಏಳೂ ಕ್ಷೇತ್ರಗಳ ಮಸ್ಟರಿಂಗ್ ಕೇಂದ್ರಗಳಲ್ಲಿ ಮತಗಟ್ಟೆಯ ಸಾಮಗ್ರಿಗಳನ್ನು ಪಡೆದು, ಅವರಿಗಾಗಿ ವ್ಯವಸ್ಥೆ ಮಾಡಲಾಗಿದ್ದ ವಾಹನಗಳಲ್ಲಿ ತಮಗೆ ನಿಗದಿಪಡಿಸಿದ ಮತಗಟ್ಟೆಗಳಿಗೆ ತೆರಳಿದರು.
     ಮಾಯಕೊಂಡ ಕ್ಷೇತ್ರದ ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ನಗರದ ಮೋತಿ ವೀರಪ್ಪ ಕಾಲೇಜಿನಲ್ಲಿ ಸಾಮಗ್ರಿಗಳನ್ನು ನೀಡಲಾಯಿತು. ಕ್ಷೇತ್ರ ವ್ಯಾಪ್ತಿಯಲ್ಲಿ 240 ಮತಗಟ್ಟೆಗಳಿದ್ದು 1154 ಮತಗಟ್ಟೆ ಸಿಬ್ಬಂದಿ ಇದ್ದಾರೆ. ಅವರು ಮತಗಟ್ಟೆಗೆ ತೆರಳಲು 31 ಬಸ್, 8 ಮಿನಿ ಬಸ್, 3 ಜೀಪ್‌ಗಳನ್ನು ವ್ಯವಸ್ಥೆ ಮಾಡಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts