More

    ಮಾಯಕೊಂಡ ತಾಲೂಕು ರಚನೆ ಗ್ಯಾರಂಟಿನಾ?

    ರಮೇಶ ಜಹಗೀರದಾರ್ ದಾವಣಗೆರೆ
     ಮಾಯಕೊಂಡಕ್ಕೆ ಅದರದೇ ಆದ ಇತಿಹಾಸವಿದೆ. ಹಿರೇಮದಕರಿ ನಾಯ್ಕನ ಸಮಾಧಿ ಇಲ್ಲಿದೆ. ಪುರಾತನ ಬತೇರಿಗಳು ಇಲ್ಲಿನ ಚರಿತ್ರೆಯನ್ನು ಹೇಳುತ್ತವೆ. ಅಷ್ಟೇ ಏಕೆ, ಒಂದು ಕಾಲಕ್ಕೆ ಇಲ್ಲಿ 150ಕ್ಕೂ ಹೆಚ್ಚು ಸ್ವಾತಂತ್ರೃ ಯೋಧರು ನೆಲೆಸಿದ್ದರು.
     ಇಂತಹ ಹಿನ್ನೆಲೆ ಇರುವ ಮಾಯಕೊಂಡವನ್ನು ತಾಲೂಕು ಕೇಂದ್ರ ಮಾಡಬೇಕು ಎನ್ನುವ ಬೇಡಿಕೆ ಬಹಳ ಹಳೆಯದು. ಇದಕ್ಕಾಗಿ ಹಲವಾರು ಹೋರಾಟಗಳಾಗಿವೆ. ಯಾವ ಸರ್ಕಾರವೂ ಜನರ ಈ ಅಪೇಕ್ಷೆಯನ್ನು ಈಡೇರಿಸಿಲ್ಲ.
     ರಾಜ್ಯದಲ್ಲೀಗ ‘ಗ್ಯಾರಂಟಿ’ಗಳ ಬಗ್ಗೆಯೇ ಚರ್ಚೆ ನಡೆದಿದೆ. ಮಾಯಕೊಂಡದ ಜನರು ಗ್ಯಾರಂಟಿಗಳ ಜತೆಗೆ ತಾಲೂಕು ರಚನೆಗೂ ಬೇಡಿಕೆ ಇಟ್ಟಿದ್ದಾರೆ. ತಾಲೂಕು ಕೇಂದ್ರ ಆಗುವುದಕ್ಕೆ ಬೇಕಾದ ಎಲ್ಲ ಅರ್ಹತೆಯೂ ಮಾಯಕೊಂಡಕ್ಕಿದೆ. ಪದವಿ ಕಾಲೇಜು, ಐಟಿಐ ಕಾಲೇಜು, ಹಾಸ್ಟೆಲ್‌ಗಳಿವೆ. ಮೂಲಸೌಲಭ್ಯಗಳ ದೃಷ್ಟಿಯಿಂದ ಸೂಕ್ತವಾಗಿದೆ. ಆದರೂ ಅದು ಅನುಷ್ಠಾನಕ್ಕೆ ಬರುತ್ತಿಲ್ಲ.
     ಆಡಳಿತಾತ್ಮಕವಾಗಿ ಏನೇ ಕೆಲಸಗಳು ಆಗಬೇಕಿದ್ದರೂ ದಾವಣಗೆರೆಗೇ ಬರಬೇಕು. ಮಾಯಕೊಂಡವನ್ನೇ ತಾಲೂಕು ಕೇಂದ್ರ ಮಾಡಿದರೆ ಜನರು ಓಡಾಡುವುದು ತಪ್ಪುತ್ತದೆ, ಜನರ ಮನೆ ಬಾಗಿಲಲ್ಲೇ ಸೇವೆಗಳು ದೊರೆಯುತ್ತವೆ ಎನ್ನುವ ನಿರೀಕ್ಷೆ ಇಲ್ಲಿನ ಜನರದಾಗಿದೆ.
     ಯಾರೇ ಶಾಸಕರಾಗಿ ಆಯ್ಕೆಯಾದರೂ ಅವರ ಮುಂದೆ ಬರುವ ಮೊದಲ ಪ್ರಶ್ನೆಯೇ ತಾಲೂಕು ರಚನೆ. ಇದುವರೆಗೆ ಆ ಬೇಡಿಕೆ ಈಡೇರಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಹೊಸದಾಗಿ ಅಧಿಕಾರಕ್ಕೆ ಬಂದಿದೆ. ಕ್ಷೇತ್ರಕ್ಕೆ ನೂತನ ಶಾಸಕರು ಆಯ್ಕೆಯಾಗಿದ್ದಾರೆ. ಈ ಅವಧಿಯಲ್ಲಾದರೂ ಕಾರ್ಯರೂಪಕ್ಕೆ ಬರುವುದೆ ಎನ್ನುವುದು ಸದ್ಯದ ಪ್ರಶ್ನೆಯಾಗಿದೆ.
     ಆನಗೋಡು ಹೋಬಳಿಯಿಂದ ಬಸವಾಪಟ್ಟಣದ ವರೆಗೆ ವ್ಯಾಪಿಸಿರುವ ಮಾಯಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಸುತ್ತು ಹಾಕಿದರೆ ಆಗಬೇಕಿರುವ ಕೆಲಸಗಳು ಸಾಕಷ್ಟಿವೆ. ಅಭಿವೃದ್ಧಿಯ ದೃಷ್ಟಿಯಿಂದ ಬಹಳಷ್ಟು ಹಿಂದುಳಿದಿದೆ.
     ರಸ್ತೆ, ಚರಂಡಿಗಳಂಥ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತದೆ. ಮಾಯಕೊಂಡದಲ್ಲೇ ಮುಖ್ಯ ರಸ್ತೆಯು 3-4 ವರ್ಷಗಳಾದರೂ ಪೂರ್ಣಗೊಂಡಿಲ್ಲ.
     ಮಾಯಕೊಂಡದಲ್ಲಿ ಕುಡಿಯುವ ನೀರಿನ ಪೂರೈಕೆ ಸಮರ್ಪಕವಾಗಿಲ್ಲ. ವಾರಕ್ಕೊಮ್ಮೆ ನಲ್ಲಿಗಳಲ್ಲಿ ನೀರು ಬರುತ್ತದೆ. ನೀರು ಪೋಲಾಗುವುದನ್ನು ತಪ್ಪಿಸಿ ವಾರಕ್ಕೆ ಎರಡು ಬಾರಿ ನೀರು ಸರಬರಾಜು ಮಾಡಬೇಕು ಎನ್ನುವುದು ಜನರ ಬೇಡಿಕೆಯಾಗಿದೆ.
     ಇನ್ನು ಈ ಕ್ಷೇತ್ರದ ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಅನೇಕ ದೂರುಗಳಿವೆ. ಅಲ್ಲಿನ ನಿರ್ವಹಣೆ ಸರಿಯಾಗಿಲ್ಲ. ಬಹಳಷ್ಟು ಕಡೆ ವೈದ್ಯರು ಮತ್ತು ಇತರ ಸಿಬ್ಬಂದಿ ಲಭ್ಯ ಇರುವುದಿಲ್ಲ. ಇದರಿಂದ ರೋಗಿಗಳು ತೊಂದರೆ ಅನುಭವಿಸುವಂತಾಗಿದೆ ಎನ್ನುವ ಆರೋಪವಿದೆ.
     ಗ್ರಾಮ ಪಂಚಾಯಿತಿ ಆಡಳಿತ ಇನ್ನಷ್ಟು ಜನಸ್ನೇಹಿಯಾಗಬೇಕು ಎನ್ನುವುದು ಜನರ ಅಪೇಕ್ಷೆಯಾಗಿದೆ. ಶೈಕ್ಷಣಿಕವಾಗಿ ಇನ್ನಷ್ಟು ಕೆಲಸಗಳು ಆಗಬೇಕಿದೆ. ಮಾಯಕೊಂಡಕ್ಕೆ ಡಿಪ್ಲೊಮಾ ಕಾಲೇಜು ಆಗಬೇಕು ಎನ್ನುವ ಮತ್ತೊಂದು ಬೇಡಿಕೆಯಿದೆ.
     …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts