More

    ಗ್ರಾಮೀಣ ಕ್ರಿಕೆಟ್ ಪ್ರತಿಭೆಗಳಿಗೆ ಪ್ರೋತ್ಸಾಹ

    ದಾವಣಗೆರೆ: ಗ್ರಾಮೀಣ ಪ್ರತಿಭೆಗಳು ಕ್ರಿಕೆಟ್‌ನಲ್ಲಿ ನಗರ ಪ್ರದೇಶದವರಿಗಿಂತ ತಾವೇನೂ ಕಡಿಮೆಯಿಲ್ಲ ಎನ್ನುವ ಮಟ್ಟಕ್ಕೆ ಬೆಳೆಯಬೇಕು ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ರೋಜರ್ ಬಿನ್ನಿ ಹೇಳಿದರು.

    ಅಸೋಸಿಯೇಷನ್‌ವತಿಯಿಂದ ನಗರದ ಬಾಪೂಜಿ ಎಂಬಿಎ ಕಾಲೇಜು ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ತುಮಕೂರು ವಲಯದ ವಾರ್ಷಿಕ ಬಹುಮಾನ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

    ದಾವಣಗೆರೆಯಿಂದ ಬಂದು ರಾಜ್ಯ, ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರುವ ವಿನಯಕುಮಾರ್ ಯುವ ಕ್ರಿಕೆಟಿಗರಿಗೆ ಉತ್ತಮ ಉದಾಹರಣೆಯಾಗಿದ್ದಾರೆ. ಭಾರತ ತಂಡದಲ್ಲಿ ಟೆಸ್ಟ್, ಏಕದಿನ ಮತ್ತು ಟಿ-20 ಪಂದ್ಯಗಳನ್ನು ಆಡಿ ಗಮನ ಸೆಳೆದಿದ್ದಾರೆ ಎಂದರು.

    ಜಿಲ್ಲೆಗಳಲ್ಲಿರುವ ಪ್ರತಿಭಾವಂತ ಕ್ರಿಕೆಟಿಗರು ನಗರ ಪ್ರದೇಶಗಳಿಗೆ ಬಂದು ಅಲ್ಲಿನ ಆಟಗಾರರಿಗೆ ಕ್ರೀಡೆಯನ್ನು ಹೇಳಿಕೊಡುವ ಮಟ್ಟಕ್ಕೆ ಸಾಧನೆ ಮಾಡಬೇಕು. ಕೆ.ಎಸ್.ಸಿ.ಎ. ಕೂಡಾ ಇದಕ್ಕೆ ಪ್ರೋತ್ಸಾಹ ನೀಡುತ್ತದೆ. ದಾವಣಗೆರೆ ಜಿಲ್ಲೆ ಮತ್ತು ತುಮಕೂರು ವಲಯದಲ್ಲಿ ಕ್ರಿಕೆಟ್ ವಾತಾವರಣವನ್ನು ಸುಧಾರಿಸಲು ನಾವು ಬದ್ಧರಿದ್ದೇವೆ ಎಂದು ತಿಳಿಸಿದರು.

    ರಾಜ್ಯದ ಮಾಜಿ ರಣಜಿ ಆಟಗಾರ ಜೆ. ಅಭಿರಾಮ್, ತುಮಕೂರು ವಲಯದ ಸಂಚಾಲಕ ಕೆ. ಶಶಿಧರ್, ಮಾಜಿ ಸಂಚಾಲಕ ಸತೀಶ್ಚಂದ್ರ, ಡಾ. ಜಯರಾಮ್, ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಇದ್ದರು. ಗೋಪಿ ನಿರೂಪಿಸಿದರು. ಹರ್ಷಿತಾ ಪಿ.ಜಿ. ಪ್ರಾರ್ಥಿಸಿದರು.

    ಮೊದಲ ರಣಜಿ ಪಂದ್ಯದ ನೆನಪು: ಕರ್ನಾಟಕದಲ್ಲಿ ನನ್ನ ಕ್ರಿಕೆಟ್ ಜೀವನವನ್ನು 1975 ರಲ್ಲಿ ಆರಂಭಿಸಿದೆ. 1980-81ರಲ್ಲಿ ನನ್ನ ಮೊದಲ ರಣಜಿ ಪಂದ್ಯವನ್ನು ಇದೇ ನಗರದಲ್ಲಿ ಆಡಿದ್ದೆ ಎಂದು ನೆನಪಿಸಿಕೊಂಡರು.

    40 ವರ್ಷಗಳ ಕಾಲ ತುಮಕೂರಿನಲ್ಲಿದ್ದ ವಲಯದ ಕಚೇರಿಯನ್ನು ದಾವಣಗೆರೆಗೆ ಸ್ಥಳಾಂತರಿಸಿದ್ದೇವೆ. ದಾವಣಗೆರೆಯಲ್ಲಿ ಮೊದಲ ಬಾರಿಗೆ ಬಹುಮಾನ ವಿತರಣೆ ಮಾಡುತ್ತಿದ್ದೇವೆ. ಇಲ್ಲಿನ ಸೌಲಭ್ಯ ಬಳಸಿಕೊಂಡು ಹೆಚ್ಚು ಕ್ರೀಡಾಪಟುಗಳು ರಾಜ್ಯವನ್ನು ಪ್ರತಿನಿಧಿಸಲಿ.
    > ಡಿ.ಎಚ್. ಮೋಹನ್‌ರಾವ್, ಕೆಎಸ್‌ಸಿಎ ತುಮಕೂರು ವಲಯದ ಚೇರ್ಮನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts