More

    ಖಾಸಗಿ ಕಂಪನಿಗಳ ಸೆಟಪ್ ಬಾಕ್ಸ್ ಅಳವಡಿಕೆ ಬೇಡ

    ದಾವಣಗೆರೆ : ದಾವಣಗೆರೆ ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಕೇಬಲ್ ಟಿ.ವಿ.ಗಳಿಗೆ ಖಾಸಗಿ ಕಂಪನಿಗಳ ಸೆಟಪ್ ಬಾಕ್ಸೃ್ ಅಳವಡಿಸುವುದನ್ನು ನಿಲ್ಲಿಸಲು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ದಾವಣಗೆರೆ ನಗರ, ಗ್ರಾಮಾಂತರ ಕೇಬಲ್ ಆಪರೇಟರ್ ಅಸೋಸಿಯೇಷನ್ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಯಿತು.
     ಶಾಮನೂರು ರಸ್ತೆಯಲ್ಲಿರುವ ಕಾಸಲ್ ವಿಠ್ಠಲ್ ಪಾರ್ಕ್‌ನಿಂದ ಬೈಕ್ ರ‌್ಯಾಲಿಯಲ್ಲಿ ಹೊರಟ ಪ್ರತಿಭಟನಾಕಾರರು ಎಸ್.ಎಸ್. ಬಡಾವಣೆ ರಿಂಗ್ ರಸ್ತೆ ಮೂಲಕ ತೆರಳಿ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಅವರಿಗೆ ಮನವಿ ಸಲ್ಲಿಸಲಾಯಿತು.
     ದಾವಣಗೆರೆ ನಗರ ಮತ್ತು ಗ್ರಾಮಾಂತರ ಕೇಬಲ್ ಆಪರೇಟರ್‌ಗಳು 35 ವರ್ಷಗಳಿಂದ ಸ್ಥಳೀಯ ಕೇಬಲ್ ವೃತ್ತಿಯನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಜಿಲ್ಲೆ, ನಗರ ಮತ್ತು ಗ್ರಾಮಾಂತರ ವ್ಯಾಪ್ತಿಯಲ್ಲಿ ಕೇಬಲ್ ಮೂಲಕ ಮನರಂಜನೆ ಮತ್ತು ಸುದ್ದಿ ಪ್ರಸಾರ ಮಾಡುತ್ತಿರುವ ಕೇಬಲ್ ಆಪರೇಟರ್‌ಗಳ ಬದುಕು ಬೀದಿಗೆ ಬರುವ ಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
     ಈಗಾಗಲೇ ದಾವಣಗೆರೆ ನಗರದಲ್ಲಿ ಸ್ಥಳೀಯ 5 ಕೇಬಲ್ ನೆಟ್‌ವರ್ಕ್‌ಗಳಿವೆ. ಅವುಗಳಿಗೂ ಈ ಕೇಬಲ್ ಆಪರೇಟರ್‌ಗಳೇ ಜೀವಾಳವಾಗಿದ್ದಾರೆ. ಖಾಸಗಿ ಕಂಪನಿಯವರು ರಾಜ್ಯಾದ್ಯಂತ ಯೂನಿಫೈಡ್ ಟೆಲಿಕಾಂ ಲೈಸನ್ಸ್ ಹೊಂದಿದ್ದು ಇವರಿಗೆ ಕೇಬಲ್ ಟಿವಿ ಸಂಪರ್ಕ ಕೊಡುವ ಹಕ್ಕಿಲ್ಲ. ಆದರೂ ಅನಧಿಕೃತವಾಗಿ ನೀಡುತ್ತಿದ್ದು ಕೇಬಲ್ ಆಪರೇಟರ್‌ಗಳ ಮೇಲೆ ದುಷ್ಪರಿಣಾಮ ಬೀರಿದೆ ಎಂದು ತಿಳಿಸಿದರು.
     ಇಂಟರ್‌ನೆಟ್ ಸಂಪರ್ಕದ ನೆಪದಲ್ಲಿ ನೇರವಾಗಿ ಗ್ರಾಹಕರಿಗೆ ಸೆಟ್ಅಪ್ ಬಾಕ್ಸೃ್ ಮುಖಾಂತರ ಮನರಂಜನೆ ಹಾಗೂ ಸುದ್ದಿ ವಾಹಿನಿಗಳನ್ನು ನೇರವಾಗಿ ಪ್ರಸಾರ ಮಾಡುತ್ತಿದ್ದಾರೆ. ಅವರು ಇಂಟರ್‌ನೆಟ್ ಸೇವೆಯನ್ನು ಸಾರ್ವಜನಿಕರಿಗೆ ನೀಡಿದರೆ ನಮ್ಮ ಅಭ್ಯಂತರವಿಲ್ಲ, ಅದರ ಜತೆಗೆ ಕೇಬಲ್ ಟಿ.ವಿ. ಸಂಪರ್ಕ ಕೊಡಲು ಮುಂದಾಗಿದ್ದಾರೆ ಎಂದು ದೂರಿದರು.
     ಜಿಲ್ಲೆಯಲ್ಲಿ 400 ಕ್ಕೂ ಹೆಚ್ಚು ಕೇಬಲ್ ಆಪರೇಟರ್‌ಗಳು ಸಣ್ಣ ಬದುಕು ಕಟ್ಟಿಕೊಂಡಿದ್ದಾರೆ. ಖಾಸಗಿ ಕಂಪನಿಗಳ ಪ್ರವೇಶದಿಂದಾಗಿ ಕೇಬಲ್ನಿಂದ ಜೀವನ ನಡೆಸುತ್ತಿರುವ ಸುಮಾರು 10 ಸಾವಿರ ಜನರು ಬೀದಿಗೆ ಬೀಳುತ್ತಾರೆ ಎಂದು ಹೇಳಿದರು.
     ಖಾಸಗಿ ಕಂಪನಿಗಳ ಆಡಳಿತ ಮಂಡಳಿ ಹಾಗೂ ಕೇಬಲ್ ಆಪರೇಟರ್ ಸಂಘದ ಸಭೆ ಮಾಡಿ ಸೌಹಾರ್ದಯುತವಾಗಿ ಬಗೆಹರಿಸಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.
     ಕರವೇ ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ, ಕೇಬಲ್ ಆಪರೇಟರ್‌ಗಳಾದ ಒ. ಮಹೇಶ್ವರಪ್ಪ, ಸುನೀಲ್ ಜಾಧವ್, ಬಾಬುರಾವ್, ನಾಗರಾಜಯ್ಯ, ಕೇಶವ್ ಗೌಡ, ಸವಿತಾ, ಗೌರಮ್ಮ, ಬಸಮ್ಮ, ಮಂಜುಳಾ, ಜಿ.ಎಸ್. ಸಂತೋಷ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts