More

    ಜನತಾ ದರ್ಶನದಲ್ಲಿ ಗ್ರಾಮೀಣ ಸಮಸ್ಯೆಗೆ ಸ್ಪಂದನೆ

    ದಾವಣಗೆರೆ : ತಾಲೂಕಿನ ಬೆಳವನೂರಿನಲ್ಲಿ ಬುಧವಾರ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಜನತಾ ದರ್ಶನ ಕಾರ್ಯಕ್ರಮ ಗ್ರಾಮೀಣ ಪ್ರದೇಶದ ಸಮಸ್ಯೆಗಳ ದರ್ಶನ ಮಾಡಿಸಿತು. ಹಳ್ಳಿಗಳ ಅಭಿವೃದ್ಧಿಗೆ ಸಂಬಂಧಿಸಿದ ವಿಚಾರಗಳ ಜತೆಗೆ, ವೈಯಕ್ತಿಕ ನೆಲೆಯಲ್ಲಿ ಜನರ ಕುಂದು ಕೊರತೆಗಳೇನು ಎಂಬುದು ಬೆಳಕಿಗೆ ಬಂದಿತು.
     ಅರ್ಜಿ ಹಿಡಿದು ಕಚೇರಿಯಿಂದ ಕಚೇರಿಗೆ ಅಲೆದಾಡಿದ ಜನರ ಮನೆ ಬಾಗಿಲಿಗೇ ಜಿಲ್ಲಾಡಳಿತ ಹೋಗಿದ್ದು ಈ ಕಾರ್ಯಕ್ರಮದ ವಿಶೇಷತೆ. ಬರೋಬ್ಬರಿ 442 ಅರ್ಜಿಗಳು ಸಲ್ಲಿಕೆಯಾಗಿದ್ದವು. ಕೆಲವಕ್ಕೆ ಸ್ಥಳದಲ್ಲೇ ಪರಿಹಾರ ದೊರೆತರೆ ಉಳಿದ ಬೇಡಿಕೆಗಳಿಗೂ ಸಕಾರಾತ್ಮಕ ಸ್ಪಂದನೆ ದೊರಕಿತು.
     ಮೂರು ದಿನಗಳಿಂದ ಅಧಿಕಾರಿಗಳು, ಸಿಬ್ಬಂದಿ ಗ್ರಾಮದ ಮನೆ ಮನೆಗೆ ತೆರಳಿ ಜನರಿಂದ ಅರ್ಜಿಗಳನ್ನು ಸ್ವೀಕರಿಸಿದ್ದು ಈ ಬಾರಿಯ ವಿಶೇಷತೆಯಾಗಿತ್ತು. ಗ್ರಾಮದ ಬಸವೇಶ್ವರ ಸಮುದಾಯ ಭವನದ ಆವರಣದಲ್ಲಿ ಅರ್ಜಿ ಸಲ್ಲಿಸಲು 5 ಕೌಂಟರ್ ಸ್ಥಾಪಿಸಲಾಗಿತ್ತು.
     ಕಂದಾಯ ಗ್ರಾಮ ಮಾಡಬೇಕು, ಗ್ರಾಮ ಠಾಣಾ ಸರಹದ್ದು ಗುರುತಿಸಬೇಕು, ಅಂಗನವಾಡಿ ಕಟ್ಟಡಕ್ಕೆ ಕಾಂಪೌಂಡ್, ಶಾಲಾ ಕೊಠಡಿ ದುರಸ್ತಿ, ಸ್ಮಶಾನ ಅಭಿವೃದ್ಧಿ, ಸಿಸಿ ರಸ್ತೆ, ಒಳ ಚರಂಡಿ, ಉಪ ಆರೋಗ್ಯ ಕೇಂದ್ರ, ಸಮುದಾಯ ಭವನ, ನಗರ ಸಾರಿಗೆ ಬಸ್, ಮೊಬೈಲ್ ಟವರ್. ಹೀಗೆ ಹಲವಾರು ಬೇಡಿಕೆಗಳನ್ನು ಗ್ರಾಮಸ್ಥರು ಅಧಿಕಾರಿಗಳಿಗೆ ಸಲ್ಲಿಸಿದರು.
     ವೈಯಕ್ತಿಕ ಅರ್ಜಿಗಳಲ್ಲಿ ನಿವೇಶನಕ್ಕೆ ಬೇಡಿಕೆ ಸಲ್ಲಿಸಿದವರ ಸಂಖ್ಯೆ ಹೆಚ್ಚಾಗಿತ್ತು. ಪಿಂಚಣಿ ಸೌಲಭ್ಯ, ಅಂಗವಿಕಲರಿಗೆ ತ್ರಿಚಕ್ರ ವಾಹನ, ಗೃಹಲಕ್ಷ್ಮೀ ಯೋಜನೆಯ ಬಾಕಿ ಹಣ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಲಾಯಿತು.
     ವೇದಿಕೆ ಕಾರ್ಯಕ್ರಮದಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯ ಫಲಾನುಭವಿಗಳಿಗೆ ಪಾಸ್‌ಬುಕ್ ವಿತರಿಸಲಾಯಿತು. ಸೀಮಂತ ಕಾರ್ಯ ನೆರವೇರಿಸಲಾಯಿತು. ದನದ ಕೊಟ್ಟಿಗೆ ಆದೇಶ ಪತ್ರ ವಿತರಿಸಲಾಯಿತು. ಸಾಮಾಜಿಕ ಭದ್ರತಾ ಯೋಜನೆಯಡಿ ಹಲವು ಸೌಲಭ್ಯಗಳನ್ನು ವಿತರಿಸಲಾಯಿತು. ಆಯುಷ್ಮಾನ್ ಕಾರ್ಡ್, ರೈತರಿಗೆ ತಾಡಪಾಲು ವಿತರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts