More

    ಕೈದಾಳೆಯಲ್ಲಿ ಡಿಜಿಟಲ್ ಗ್ರಂಥಾಲಯ

    ದಾವಣಗೆರೆ: ತಾಲೂಕಿನ ಕೈದಾಳೆ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ, ನೂತನ ಡಿಜಿಟಲ್ ಗ್ರಂಥಾಲಯಕ್ಕೆ ಜಿಪಂ ಸಿಇಒ ಪದ್ಮಾ ಬಸವಂತಪ್ಪ ಚಾಲನೆ ನೀಡಿದರು.

    ನಂತರ ಮಾತನಾಡಿ, ಕರೊನಾ ವಿರುದ್ಧದ ಹೋರಾಟದಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಶಿಕ್ಷಕಿಯರ ಪಾತ್ರ ಹಿರಿದಾದುದು. ಅವರಿಲ್ಲವಾಗಿದ್ದರೆ ಸರ್ಕಾರದ ಪ್ರಯತ್ನಗಳು ವ್ಯರ್ಥವಾಗಿರುತ್ತಿದ್ದವು ಎಂದರಲ್ಲದೆ ಸ್ಪರ್ಧಾತ್ಮಕ ಪರೀಕ್ಷ್ಷೆಗಳಿಗೆ ಅನುಕೂಲಕರ ಪುಸ್ತಕಗಳುಳ್ಳ ನೂತನ ಗ್ರಂಥಾಲಯವನ್ನು ಜನರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

    ಇದೇ ವೇಳೆ ಕರೊನಾ ವಾರಿಯರ್ಸ್‌ಗಳನ್ನು ಸನ್ಮಾನಿಸಲಾಯಿತು. ಗ್ರಾಪಂ ಜನಪ್ರತಿನಿಧಿಗಳನ್ನು ಬೀಳ್ಕೊಡಲಾಯಿತು. ಜಿಪಂ ಉಪ ಕಾರ್ಯದರ್ಶಿ ಎಂ.ಆನಂದ್, ಸಹಾಯಕ ಯೋಜನಾಧಿಕಾರಿ ಎನ್.ಜೆ.ಆನಂದ, ಜಿಪಂ ಸದಸ್ಯ ಜಿ.ಸಿ.ನಿಂಗಪ್ಪ, ಗ್ರಾಪಂ ಅಧ್ಯಕ್ಷ ಸಿ.ಕೃಷ್ಣಮೂರ್ತಿ, ಉಪಾಧ್ಯಕ್ಷೆ ಕೆ.ಜೆ.ನೇತ್ರಾವತಿ, ಪಿಡಿಒ ಐ.ಸಿ.ವಿದ್ಯಾವತಿ, ಕಾರ್ಯದರ್ಶಿ ಎ.ಎಚ್.ಜಯಪ್ಪ, ಎಸ್‌ಡಿಎಂಸಿ ಅಧ್ಯಕ್ಷ ನಿಂಗಪ್ಪ, ವೈ,ಎಚ್.ಮಲ್ಲಿಕಾರ್ಜುನ, ಕೆ.ಎಂ. ಮುತ್ತುರಾಜ್, ಕೆ.ಎಂ.ಉಮೇಶ್, ಪಂಚಾಯಿತಿ ಸಿಬ್ಬಂದಿ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts