More

    ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಳಿಗೆ ಇಂದು ಪರೀಕ್ಷೆ

    ದಾವಣಗೆರೆ : ಪೊಲೀಸ್ ಕಾನ್‌ಸ್ಟೇಬಲ್ (ಸಿಪಿಸಿ), (ಪುರುಷ, ಮಹಿಳಾ), (ತೃತೀಯ ಲಿಂಗ ಪುರುಷ ಮತ್ತು ಮಹಿಳಾ), ಸೇವಾ ನಿರತ ಮತ್ತು ಬ್ಯಾಕ್‌ಲಾಗ್-1137-ಎನ್‌ಕೆಕೆ ಹುದ್ದೆಗಳಿಗೆ ಭಾನುವಾರ ನಗರದ 17 ಪರೀಕ್ಷಾ ಕೇಂದ್ರಗಳಲ್ಲಿ ಬೆಳಗ್ಗೆ 11 ಗಂಟೆಯಿಂದ 12.30 ರ ವರೆಗೆ ಲಿಖಿತ ಪರೀಕ್ಷೆ ನಡೆಯಲಿದೆ.
     ಪರೀಕ್ಷೆ ಆಯೋಜನೆಗೆ ಜಿಲ್ಲಾ ಪೊಲೀಸ್ ವತಿಯಿಂದ ಪೂರ್ವಸಿದ್ಧತೆ ಮಾಡಲಾಗಿದ್ದು, ಪರೀಕ್ಷಾ ಕೇಂದ್ರಗಳಿಗೆ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗಿದೆ.
     ಅಭ್ಯರ್ಥಿಗಳು ಈಗಾಗಲೇ ತಿಳಿಸಿರುವಂತೆ ನಿಗದಿತ ಸಮಯಕ್ಕೆ ಪರೀಕ್ಷಾ ಕೇಂದ್ರಗಳಲ್ಲಿ ಹಾಜರಿರಬೇಕು. ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಬರಬೇಕು. ವಸ್ತ್ರ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
     ಪರೀಕ್ಷಾ ಕೇಂದ್ರಗಳು: ಜಿಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಅಲ್ ಇಕ್ರಾ ಹೈಯರ್ ಪ್ರೈಮರಿ ಮತ್ತು ಹೈಸ್ಕೂಲ್, ಎಸ್.ಕೆ.ಎ.ಎಚ್ ಕಾಂಪೋಸಿಟ್ ಪಿಯು ಕಾಲೇಜ್, ಎಜಿಬಿ ಪ್ರಥಮ ದರ್ಜೆ ಕಾಲೇಜ್, ಎಂ.ಎಸ್.ಬಿ ಆರ್ಟ್ಸ್, ಕಾಮರ್ಸ್ ಕಾಲೇಜು, ಬಾಲಕರ ಸರ್ಕಾರಿ ಪಿಯು ಕಾಲೇಜ್, ರಾಜನಹಳ್ಳಿ ಸೀತಮ್ಮ ಬಾಲಕಿಯರ ಪಿಯು ಕಾಲೇಜ್, ಡಿ.ಆರ್.ಎಂ  ಸೈನ್ಸ್ ಪಿಯು ಕಾಲೇಜ್, ಯು.ಬಿ.ಡಿ.ಟಿ ಇಂಜಿನಿಯರಿಂಗ್ ಕಾಲೇಜ್, ಮೋತಿವೀರಪ್ಪ ಸರ್ಕಾರಿ ಪಿಯು ಕಾಲೇಜ್, ಅಥಣಿ ಕಾಂಪೋಸಿಟ್ ಪಿಯು ಕಾಲೇಜ್, ಬಿ.ಎಸ್. ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜ್, ಎಸ್.ಬಿ.ಸಿ ಮಹಿಳಾ ಪ್ರಥಮ ದರ್ಜೆ ಕಾಲೇಜ್, ಬಿಐಇಟಿ ಕಾಲೇಜ್, ಕೆ.ಎಸ್.ಎಸ್ ಪಿಯು ಕಾಲೇಜ್, ಸೇಂಟ್ ಜಾನ್ಸ್ ಇಂಗ್ಲಿಷ್ ಮಿಡಿಯಂ ಸ್ಕೂಲ್, ಜೈನ್ ವಿದ್ಯಾಲಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts