More

    ಕಾರಿಗನೂರಿಗೆ ಬಿಎಸ್‌ವೈ ಭೇಟಿ

    ದಾವಣಗೆರೆ : ‘ನೂತನ ಜಿಲ್ಲೆಗಳ ಜನಕ’, ಮಾಜಿ ಮುಖ್ಯಮಂತ್ರಿ ದಿ. ಜೆ.ಎಚ್. ಪಟೇಲ್ ಅವರ ಊರಾದ ಚನ್ನಗಿರಿ ತಾಲೂಕು ಕಾರಿಗನೂರಿಗೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮಂಗಳವಾರ ಭೇಟಿ ನೀಡಿದ್ದರು.
     ಗ್ರಾಮದ ಜಮೀನಿನಲ್ಲಿರುವ ಪಟೇಲರ ಸಮಾಧಿ ಸ್ಥಳಕ್ಕೆ ತೆರಳಿದ ಯಡಿಯೂರಪ್ಪ ಪುಷ್ಪನಮನ ಸಲ್ಲಿಸಿದರು. ಇದೇ ವೇಳೆ ಅವರು ತಮ್ಮ ಹಾಗೂ ಪಟೇಲರ ನಡುವಿನ ಒಡನಾಟವನ್ನು ನೆನಪಿಸಿಕೊಂಡರು.
     ಸಮಾಧಿ ಸ್ಥಳದ ಬಳಿ ನಡೆದ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಮಾತನಾಡಿ, ಪಟೇಲರು ಆತ್ಮೀಯ ಹಿರಿಯ ವ್ಯಕ್ತಿಯಾಗಿದ್ದರು. ನಾಡಿಗೆ ಇನ್ನೂ ಅವರ ಮಾರ್ಗದರ್ಶನದ ಅಗತ್ಯವಿತ್ತು ಎಂದು ಹೇಳಿದರು.
     ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಜೆ.ಎಚ್. ಪಟೇಲರು ಮತ್ತು ನಮ್ಮ ತಂದೆ ಜತೆಯಲ್ಲೆ ಚುನಾವಣೆ ಮಾಡಿದ್ದಾರೆ. ಆಗಿನಿಂದಲೂ ಪಟೇಲರ ಕುಟುಂಬದವರೊಂದಿಗೆ ಒಡನಾಟವಿದೆ ಎಂದು ತಿಳಿಸಿದರು.
     ಜೆಡಿಯು ರಾಜ್ಯಾಧ್ಯಕ್ಷ, ಮಾಜಿ ಶಾಸಕ ಮಹಿಮ ಜೆ. ಪಟೇಲ್ ಮಾತನಾಡಿ, ಸಾವಯವ ರಾಜಕಾರಣ ವ್ಯವಸ್ಥೆ ಬರಬೇಕು. ಜನರ ಬಗ್ಗೆ ಆಲೋಚನೆ ಮಾಡುವಂತಾಗಬೇಕು. ಅಂಥ ಚಿಂತನೆಯಿರುವ ಪಕ್ಷಕ್ಕೆ ಬೆಂಬಲ ನನ್ನ ಬೆಂಬಲ ಇರಲಿದೆ ಎಂದರು.
     ಮೈತ್ರಿ ಧರ್ಮ ಪಾಲನೆ ಮಾಡುವುದಾಗಿ ಜಿ.ಪಂ. ಮಾಜಿ ಸದಸ್ಯ ತೇಜಸ್ವಿ ಪಟೇಲ್ ಹೇಳಿದರು. ಮಾಜಿ ಸಚಿವರಾದ ಎಸ್.ಎ. ರವೀಂದ್ರನಾಥ್, ಮುರುಗೇಶ ನಿರಾಣಿ, ಎಂಎಲ್ಸಿ ಎನ್. ರವಿಕುಮಾರ್, ಜಿಲ್ಲಾಧ್ಯಕ್ಷ ಎನ್. ರವಿಕುಮಾರ್, ಮಾಡಾಳು ಮಲ್ಲಿಕಾರ್ಜುನ್, ಅಜಯ ಕುಮಾರ್, ಲೋಕಿಕೆರೆ ನಾಗರಾಜ ಇನ್ನಿತರ ಮುಖಂಡರು ಇದ್ದರು.
     …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts